newsfirstkannada.com

ನಾಯಕ ಶಂಕರ್ ರಾವ್ ಸೇರಿ 29 ನಕ್ಸಲರು ಎನ್​ಕೌಂಟರ್​; ರೋಚಕ ಕಾರ್ಯಾಚರಣೆ

Share :

Published April 17, 2024 at 9:20am

  ಛತ್ತೀಸ್​​ಗಢದ ಕಂಕೇರ್​ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ

  ಶಂಕರ್​ ರಾವ್ ತಲೆಗೆ 25 ಲಕ್ಷ ರೂಪಾಯಿ ಘೋಷಣೆ ಮಾಡಲಾಗಿತ್ತು

  ಕಂಕೇರ್ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ

ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ಭದ್ರತಾಪಡೆ ಹಾಗೂ ಮಾವೋವಾದಿಗಳ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ನಕ್ಸಲ್ ನಾಯಕ ಶಂಕರ್ ರಾವ್ ಸೇರಿದಂತೆ 29 ನಕ್ಸಲರನ್ನು ಹತ್ಯೆ ಮಾಡಲಾಗಿದ್ದು, 18 ಮೃತದೇಹವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ ವಿರುದ್ಧ ರೊಚ್ಚಿಗೆದ್ದ ಅಮೀರ್ ಖಾನ್, ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್​ ದಾಖಲು

ನಕ್ಸಲರ ದಾಳಿಗೆ ಮೂವರು ಯೋಧರು ಗಾಯಗೊಂಡಿದ್ದಾರೆ. ನಕ್ಸಲ್​ ನಾಯಕ ಶಂಕರ್​ ರಾವ್​ ದಾಳಿ ವೇಳೆ ತಲೆಗೆ 25 ಲಕ್ಷ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಕೂಂಬಿಂಗ್ ನಡೆದ ಸ್ಥಳದಲ್ಲಿ ಹಲವು ಸ್ಫೋಟಕ ವಸ್ತುಗಳು ಸೇರಿದಂತೆ ಎಕೆ 47 ಬಂದೂಕನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ಬಾರ್ಡರ್​ ಸೆಕ್ಯೂರಿಟಿ ಫೋರ್ಸ್​ (ಬಿಎಸ್​ಎಫ್) ಹಾಗೂ ಛತ್ತೀಸ್​ಗಢದ ಡಿಸ್ಟ್ರಿಕ್ಟ್​​ ರಿಸರ್ವ್​​ ಗಾರ್ಡ್​ (ಡಿಆರ್​​ಜಿ) ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆದಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಕ್ಸಲರು ಮತ್ತೆ ಬಾಲ ಬಿಚ್ಚಿದ್ದರು. ಈ ಹಿನ್ನೆಲೆಯಲ್ಲಿ ಮಾದ್​​ ಪ್ರದೇಶದಲ್ಲಿ ಭದ್ರತಾ ಪಡೆ ಕೂಂಬಿಂಗ್ ನಡೆಸಿತ್ತು. ಕಂಕೇರ್​​ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಯಕ ಶಂಕರ್ ರಾವ್ ಸೇರಿ 29 ನಕ್ಸಲರು ಎನ್​ಕೌಂಟರ್​; ರೋಚಕ ಕಾರ್ಯಾಚರಣೆ

https://newsfirstlive.com/wp-content/uploads/2024/04/SHANKAR-RAO.jpg

Load More