/newsfirstlive-kannada/media/media_files/2025/09/24/sparsh-hospital-surgery-2025-09-24-18-09-11.jpg)
ಡಾ.ರವಿಕುಮಾರ್ ಮುಕರ್ತಿಹಾಳ್ ನೇತೃತ್ವದಲ್ಲಿ MAKO ರೊಬೋಟಿಕ್ ಸರ್ಜರಿ
ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆಯ ಡಾ. ರವಿಕುಮಾರ್ ಮುಕರ್ತಿಹಾಳ್ ನೇತೃತ್ವದ ಆರ್ತ್ರೋಪ್ಲ್ಯಾಸ್ಟಿ ತಂಡಕ್ಕೆ ಇಂದು ಒಂದು ಮೈಲಿಗಲ್ಲಿನ ದಿನವಾಗಿದೆ. MAKO ರೊಬೊಟಿಕ್ ಮೂಲಕ ಇಂದು ಬರೋಬ್ಬರಿ 1,000 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
MAKO ರೊಬೊಟಿಕ್ ಮೂಲಕ ನಡೆದ ಎಲ್ಲಾ ಶಸ್ತ್ರಚಿಕಿತ್ಸೆಗಳಲ್ಲಿ ಎಲ್ಲಾ ರೋಗಿಗಳು ಆರೋಗ್ಯವಾಗಿದ್ದಾರೆ. ರೋಗಿಗಳ ಆರೋಗ್ಯದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಿಲ್ಲ. ಈ ಮೈಲಿಗಲ್ಲನ್ನ ತಲುಪಲು ಎಲ್ಲರೂ ಒಂದು ತಂಡವಾಗಿ ಕೆಲಸ ಮಾಡಿರುವುದೇ ಗಮನಾರ್ಹವಾಗಿದೆ. ಈ ಸಾಧನೆಗೆ ತಮಗೆ ಬೆಂಬಲವಾಗಿದ್ದ ಸ್ಪರ್ಶ್ ಆಸ್ಪತ್ರೆಯ ಚೇರ್​ಮನ್, ಅನಸ್ತೇಷಿಯಾ ಟೀಮ್, ಒಪಿಡಿ ನರ್ಸಿಂಗ್ ಟೀಮ್ ಸೇರಿದಂತೆ ಎಲ್ಲಾ ತಂಡದವರಿಗೂ SPARSH ಆಸ್ಪತ್ರೆಯ ಆರ್ತ್ರೋಪ್ಲ್ಯಾಸ್ಟಿ ತಂಡದ ನೇತೃತ್ವ ವಹಿಸಿದ್ದ ಡಾ. ರವಿಕುಮಾರ್ ಮುಕರ್ತಿಹಾಳ್ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.