/newsfirstlive-kannada/media/media_files/2025/09/19/brain-eating-amoeba02-2025-09-19-16-45-35.jpg)
ಮೆದುಳು ತಿನ್ನುವ ಅಮೀಬಾ ಬಗ್ಗೆ ಎಚ್ಚರ, ಎಚ್ಚರ
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಅಂದ್ರೆ ನೆಗ್ಲೆರಿಯಾ ಫೊವ್ಲೆರಿ ಅಮೀಬಾ ಕಾಟ ಜೋರಾಗಿದ್ದು.., ಸಾವಿನ ಸಂಖ್ಯೆ ಏರಿಕೆಯಾಗುತಿದೆ.. ಹಾಗದ್ರೆ ಈ ಸೋಂಕು ಹೇಗೆ ಹರಡುತ್ತೆ..., ಗುಣಲಕ್ಷಣಗಳೇನು.. ಕರ್ನಾಟಕದಲ್ಲಿ ಯಾವ ಪರಿಸ್ಥಿತಿ ಇದೆ ಅನ್ನೋದರ ಒಂದು ಕಂಪ್ಲೀಟ್ ವರದಿ ಇಲ್ಲಿದೆ...
ನೆರೆಯ ರಾಜ್ಯದಲ್ಲಿ ಮೆದುಳು ತಿನ್ನೋ ಅಮೀಬಾ ಸೋಂಕು
ಕೇರಳದಲ್ಲಿ ಸೋಂಕಿಗೆ 19 ಜನರ ಬಲಿ.. ಕರ್ನಾಟಕದಲ್ಲಿ ಕಟ್ಟೆಚ್ಚರ
ನೆರೆಯ ರಾಜ್ಯ ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದ ಸೋಂಕು ಜೋರಾಗಿದೆ. ಈ ಸೋಂಕು ನೆಗ್ಲಿರಿಯಾ ಫೊವ್ಲೆರಿ ಎಂಬ ಅಮೀಬಾದಿಂದ ಹರಡುತ್ತದೆ.. ಈ ಸೋಂಕಿಗೆ ಕೇರಳದಲ್ಲಿ ಇಲ್ಲಿಯವರೆಗೂ 19 ಜನರು ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಈ ಅಮೀಬಾ ಬೆಳೆಯುತ್ತೆ.. ಒಂದು ವೇಳೆ ಅಂತಹ ನೀರಿನಲ್ಲಿ ಈಜಾಡಿದ್ರೆ ಅಮೀಬಾವು ಮೂಗಿನ ಮೂಲಕ ನಮ್ಮ ಮೆದುಳನ್ನ ಹೊಕ್ಕು ನೇರವಾಗಿ ಕೇಂದ್ರ ನರವ್ಯೂಹಕ್ಕೆ ಹಾನಿಯುಂಟು ಮಾಡುತ್ತದೆ. ಕೆಲವೊಮ್ಮೆ ಸೋಂಕಿನ ಪ್ರಮಾಣ ಹೆಚ್ಚಾದ್ರೆ ಸಾವು ಕೂಡ ಸಂಭವಿಸಲಿದೆ. ಆದ್ರೆ ಈ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಂಕ್ರಾಮಿಕ ರೋಗವಲ್ಲ..
ಹಾಗಾದ್ರೆ ನೆಗ್ಲೇರಿಯಾ ಫೊವ್ಲೆರಿ ಸೋಂಕಿನ ಲಕ್ಷಣಗಳೇನು ನೋಡೋದಾದ್ರೆ
ತಲೆನೋವು, ಜ್ವರ,
ವಾಕರಿಕೆ ಮತ್ತು ವಾಂತಿ
ಸೋಂಕು ತಗುಲಿದ 1 ರಿಂದ 9 ದಿನಗಳಲ್ಲಿ ಕಾಣಿಸಿಕೊಳ್ಳುವ ರೋಗಲಕ್ಷಣಗಳು
ಸೋಂಕಿಗೆ ಚಿಕಿತ್ಸೆ ಹಾಗೂ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು?
* ಕೊಳ, ಕೆರೆ ಮತ್ತು ನಿಂತಿರುವ ನೀರಿನಲ್ಲಿ ಸ್ನಾನ ಮಾಡಲು, ಈಜಲು ಹೋಗದೇ ಇರುವುದು
* ಶುದ್ಧ ನೀರಿನಲ್ಲಿ ಈಜುವಾಗಲೂ ಮೂಗಿಗೆ ಕ್ಲಿಪ್‌ಗಳನ್ನು ಬಳಸಿ
* ಬಾವಿ ಮತ್ತು ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಕ್ಲೋರಿನ್ ಬಳಸಿ ಸ್ವಚ್ಛಗೊಳಿಸುವುದು ಉತ್ತಮ
* ಒಂದು ವೇಳೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು..
ಇನ್ನೂ ನಮ್ಮ ರಾಜ್ಯದಲ್ಲಿ ಯಾವುದೇ ರೀತಿ ನೆಗ್ಲೆರಿಯಾ ಫೊವ್ಲೆರಿ ಸೋಂಕು ಕಾಣಿಸಿಕೊಂಡಿಲ್ಲ..ಆದ್ರೂ ಕೂಡ ಆರೋಗ್ಯ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಒಟ್ನಲ್ಲಿ... ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಕೇರಳ ನಲುಗಿದ್ದು ಅಲ್ಲಿನ ರಾಜ್ಯ ಸರ್ಕಾರ ಸೋಂಕು ತಡೆಗಟ್ಟಲು ಬೇಕಾದ ಕ್ರಮ ವಹಿಸುತ್ತಿದೆ. ನಮ್ಮ ರಾಜ್ಯದಲ್ಲಿ ಭಯ ಪಡುವ ಅವಶ್ಯಕತೆ ಇಲ್ಲ..
ಪ್ರಗತಿ ಶೆಟ್ಟಿ
ನ್ಯೂಸ್ ಫಸ್ಟ್
ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.