/newsfirstlive-kannada/media/post_attachments/wp-content/uploads/2024/09/ttd-laddu1.jpg)
20 ಕೋಟಿ ಲಡ್ಡು ಕಲಬೆರಕೆ ದೃಢ!
ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. 2019-24ರ ಅವಧಿಯಲ್ಲಿ 20 ಕೋಟಿ ಲಡ್ಡು ಕಲಬೆರಿಕೆ ಆಗಿರೋದು ಸಿಬಿಐ ವಿಶೇಷ ತಂಡದ ತನಿಖೆಯಲ್ಲಿ ಬಯಲಾಗಿದೆ.. ತಿರುಪತಿ ದೇಗುಲಕ್ಕೆ ಪೂರೈಸಿದ್ದ ತುಪ್ಪವನ್ನು ಹಾಲಿನ ಉತ್ಪನ್ನ ಬಳಸದೇ ಪಾಮ್ ಆಯಿಲ್, ಕೃತಕ ಬಣ್ಣ, ಕೆಮಿಕಲ್ ಬಳಸಿ ತಯಾರಿಸಿದ್ದು ಸಾಬೀತಾಗಿದೆ..
ತಿರುಪತಿ ತಿರುಮಲ.. ವಿಶ್ವದ ಅತ್ಯಂತ ಶ್ರೀಮಂತ ದೇವಾಲಯ.. ಲಕ್ಷ್ಮಿವೆಂಕಟೇಶ್ವರ ನೆಲೆ ನಿಂತಿರುವ ಪವಿತ್ರಕ್ಷೇತ್ರ.. ಅಸಂಖ್ಯ ಭಕ್ತರ ಆರಾಧ್ಯದೈವ.. ಶುದ್ಧ ತುಪ್ಪದಿಂದ ತಯಾರಿಸಲಾಗುವ ಲಡ್ಡು ತಿರುಪತಿ ತಿಮ್ಮಪ್ಪನಿಗೆ ನೈವೇದ್ಯವಾಗಿ ಬಳಸುವ ಪವಿತ್ರ ಪ್ರಸಾದ.. ಶ್ರೀನಿವಾಸನ ದರ್ಶನ ಪಡೆಯುವ ಭಕ್ತರು ಲಡ್ಡು ಪ್ರಸಾದ ಪಡೆದ್ರೇನೆ ಯಾತ್ರೆ ಪರಿಪೂರ್ಣ.. ಇಂತಹ ಪವಿತ್ರ ಲಡ್ಡು ಪ್ರಸಾದ ಕಲಬೆರಕೆ ಆಗಿದ್ದು ಪ್ರಕರಣದ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ಬಯಲಾಗಿವೆ..
5 ವರ್ಷ.. ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬಿನ ಕಲಬೆರಕೆ!
ಸಿಬಿಐ ನೇತೃತ್ವದ ವಿಶೇಷ ತನಿಖೆಯಲ್ಲಿ ಮಾಹಿತಿ ಬಯಲು
ತಿರುಪತಿಯ ತಿರುಮಲದ ಬಾಲಾಜಿಯ ಭಕ್ತರಿಗೆ ಮತ್ತೊಂದು ಶಾಕ್ ನೀಡುವ ವಿಚಾರ ಸಿಬಿಐ ತನಿಖೆಯಿಂದ ಬಹಿರಂಗವಾಗಿದೆ. 2019ರಿಂದ 2024ರವರೆಗೆ ಈ ಐದು ವರ್ಷಗಳ ಕಾಲ ದೇಗುಲದಲ್ಲಿ ತಯಾರಾಗಿದ್ದ ಬರೋಬ್ಬರಿ 20 ಕೋಟಿಗೂ ಹೆಚ್ಚು ಲಡ್ಡುಗಳು ಕಲಬೆರಕೆ ಆಗಿದ್ದವು ಅನ್ನೋದನ್ನು ಬಯಲು ಮಾಡಿದೆ. ಅಂದಹಾಗೆ, ಈ 5 ವರ್ಷಗಳ ಅವಧಿಯಲ್ಲಿ ಉತ್ತರಾಖಂಡ್ ಮೂಲದ ಭೋಲೇ ಬಾಬಾ ಡೈರಿ ಹಾಗೂ ಇದೇ ಕಂಪನಿಗೆ ಸೇರಿ ಇತರೆ ಡೈರಿ ಕಂಪನಿಗಳಾದ ತಮಿಳುನಾಡಿನ ಎಆರ್ ಡೈರಿ, ಆಂಧ್ರದ ವೈಷ್ಣವಿ ಡೈರಿ ಹಾಗೂ ಉತ್ತರ ಪ್ರದೇಶದ ಮಾಲ್ ಗಂಗಾ ಡೈರಿಗಳಿಂದ ತುಪ್ಪ ಪೂರೈಕೆ ಮಾಡಲಾಗಿತ್ತು..
ತನಿಖೆಯಲ್ಲಿ ಬಯಲಾಗಿದ್ದೇನು?
2019-24ರವರೆಗೆ 20.14 ಕೋಟಿ ಲಡ್ಡುಗಳು ಕಲಬೆರಕೆ
ಪ್ರಾಣಿಕೊಬ್ಬು ಬಳಸಿ ತುಪ್ಪ ತಯಾರಿಸಿರೋದು ಬಯಲು
ಮಾರಾಟವಾದ ಲಡ್ಡು, ಭಕ್ತರ ಸಂಖ್ಯೆ ಆಧರಿಸಿ ಮಾಹಿತಿ
5 ವರ್ಷದಲ್ಲಿ ಬಳಸಿದ್ದ ತುಪ್ಪದಲ್ಲಿ ಶೇ.42ರಷ್ಟು ಕಲಬೆರಕೆ
5 ವರ್ಷಗಳಲ್ಲಿ 48.76 ಕೋಟಿ ಲಡ್ಡು ತಯಾರಿಸಲಾಗಿದೆ
ತಯಾರಾಗಿದ್ದ ಪ್ರತಿ 5 ಲಡ್ಡುಗಳಲ್ಲಿ 2 ಲಡ್ಡುಗಳು ಅಶುದ್ಧ
₹250 ಕೋಟಿ ಮೌಲ್ಯದ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ
ಪಾಮ್ ಎಣ್ಣೆ, ವಿಷಕಾರಿ ವಸ್ತುಗಳು, ರಾಸಾಯನಿಕ ಬಳಕೆ
2019ರಿಂದ 24ರವರೆಗೆ ಸುಮಾರು 20.14 ಕೋಟಿ ಲಡ್ಡುಗಳು ಕಲಬೆರಕೆ ಆಗಿವೆ ಅಂತ ತನಿಖೆಯಲ್ಲಿ ಬಯಲಾಗಿದೆ.. ಪ್ರಾಣಿಕೊಬ್ಬು ಬಳಸಿ ತುಪ್ಪ ತಯಾರಿಸಲಾಗಿದೆ.. ಇನ್ನು ಮಾರಾಟವಾದ ಲಡ್ಡು, ಭಕ್ತರ ಸಂಖ್ಯೆ ಆಧರಿಸಿ ಸಿಬಿಐ ತನಿಖೆ ನಡೆಸಿದೆ.. 5 ವರ್ಷಗಳಲ್ಲಿ ಬಳಸಿದ್ದ ತುಪ್ಪದಲ್ಲಿ ಶೇ.42ರಷ್ಟು ಕಲಬೆರಕೆ ಆಗಿದೆ.. ಈ 5 ವರ್ಷಗಳಲ್ಲಿ 48.76 ಕೋಟಿ ಲಡ್ಡು ತಯಾರಿಸಲಾಗಿದ್ದು ಪ್ರತಿ 5 ಲಡ್ಡುಗಳಲ್ಲಿ 2 ಲಡ್ಡುಗಳು ಅಶುದ್ಧ ಅನ್ನೋದು ಸಾಬೀತಾಗಿದೆ.. ಈ ಅವಧಿಯಲ್ಲಿ 250 ಕೋಟಿ ಮೌಲ್ಯದ 68 ಲಕ್ಷ ಕೆ.ಜಿ ತುಪ್ಪ ಪೂರೈಕೆ ಮಾಡಲಾಗಿದ್ದು ಈ ತುಪ್ಪದಲ್ಲಿ ಪಾಮ್ ಉತ್ಪನ್ನಗಳು, ವಿಷಕಾರಿ ವಸ್ತುಗಳು ಹಾಗೂ ರಾಸಾಯನಿಕ ಬಳಸಿ ಲಡ್ಡು ತಯಾರಿಸಿರೋದು ಬಹಿರಂಗ ಆಗಿದೆ.
2019-24ರವರಗೆ 5 ವರ್ಷಗಳಲ್ಲಿ ಸುಮಾರು 11 ಕೋಟಿ ಭಕ್ತರು ತಿರುಮಲಕ್ಕೆ ಭೇಟಿ ನೀಡಿ ಪವಿತ್ರ ಲಡ್ಡುಗಳನ್ನು ಪಡೆದಿದ್ದಾರೆ ಅಂತ ಟಿಟಿಡಿ ಮಾಹಿತಿ ನೀಡಿದೆ.. ಸಾಮಾನ್ಯ ಭಕ್ತರು ಹಾಗೂ ವಿವಿಐಪಿಗಳಿಗೆ ನೀಡಲಾಗುವ ಲಡ್ಡು ಪ್ರಸಾದ ಒಂದೇ ಆಗಿರುವುದರಿಂದ, ಆ ಅವಧಿಯಲ್ಲಿ ರಾಷ್ಟ್ರಪತಿ, ಪ್ರಧಾನಿ, ಸಿಜೆಐ ಹಾಗೂ ಇತರ ಗಣ್ಯರು, ಸೆಲೆಬ್ರಿಟಿಗಳು ಭೇಟಿ ನೀಡಿದ್ದರು.
/filters:format(webp)/newsfirstlive-kannada/media/post_attachments/wp-content/uploads/2023/10/Tirumala_Brahmotsavam.jpg)
2024ರ ಸೆಪ್ಟೆಂಬರ್​​ನಲ್ಲಿ ಬೆಳಕಿಗೆ ಬಂದಿದ್ದ ತಿರುಪತಿ ಲಡ್ಡು ಕಲಬೆರಕೆ ಪ್ರಕರಣ ಆಂಧ್ರ ಪ್ರದೇಶದಲ್ಲಿ ರಾಜಕೀಯ ಮೇಲಾಟಕ್ಕೂ ಕಾರಣ ಆಗಿತ್ತು.. ಬಳಿಕ ಸುಪ್ರೀಂಕೋರ್ಟ್​​ ಕೂಡ ಮಧ್ಯಪ್ರವೇಶಿಸಿ ರಾಜಕೀಯಕ್ಕಾಗಿ ತಿರುಪತಿ ದೇಗುಲವನ್ನು ಬಳಸಿಕೊಳ್ಳಬೇಡಿ ಅಂತ ಸೂಚನೆ ನೀಡಿತ್ತು.. ಸದ್ಯ ಪ್ರಕರಣದಲ್ಲಿ ಸಿಬಿಐ ತನಿಖೆ ಮುಂದುವರಿದಿದ್ದು ಭಕ್ತರನ್ನು ಆಘಾತಕ್ಕೆ ತಳ್ಳುವ ವಿಚಾರಗಳು ಬಯಲಾಗ್ತಿವೆ..
ಚಂದ್ರಮೋಹನ್, ನ್ಯಾಷನಲ್ ಡೆಸ್ಕ್, ನ್ಯೂಸ್​​​ಫಸ್ಟ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us