Advertisment

ಛತ್ತೀಸ್ ಗಢದಲ್ಲಿ ಒಂದೇ ದಿನ 208 ನಕ್ಸಲರು ಶರಣಾಗತಿ : ನಕ್ಸಲ್ ಮುಕ್ತವಾದ ಉತ್ತರ ಬಸ್ತಾರ್‌ ವಲಯ!

ಛತ್ತೀಸ್ ಗಢ್ ರಾಜ್ಯದ ಉತ್ತರ ಬಸ್ತಾರ್ ನಲ್ಲಿ ಒಂದೇ ದಿನ 208 ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ತಮ್ಮ ಬಳಿ ಇದ್ದ 153 ಶಸ್ತ್ರಾಸ್ತ್ರಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆಂಪು ಉಗ್ರರ ತಾಣವಾಗಿದ್ದ ಉತ್ತರ ಬಸ್ತಾರ್ ಈಗ ನಕ್ಸಲ್ ಮುಕ್ತವಾಗಿದೆ.

author-image
Chandramohan
NAXALS SURREENDER IN CHATTISGARH

ಛತ್ತೀಸ್ ಘಡ ಪೊಲೀಸರಿಗೆ ಶರಣಾಗತರಾದ ನಕ್ಸಲರು

Advertisment
  • ಛತ್ತೀಸ್ ಘಡ ಪೊಲೀಸರಿಗೆ ಶರಣಾಗತರಾದ ನಕ್ಸಲರು
  • 153 ಶಸ್ತ್ರಾಸ್ತ್ರಗಳೊಂದಿಗೆ ಪೊಲೀಸರಿಗೆ ಶರಣಾಗತರಾದ ನಕ್ಸಲರು


ಛತ್ತೀಸ್‌ಗಢದಲ್ಲಿ ನಕ್ಸಲ್ ಸಂಘಟನೆಯ  ಉನ್ನತ ನಾಯಕರು ಸೇರಿದಂತೆ ಗಮನಾರ್ಹ ಸಂಖ್ಯೆಯ ನಕ್ಸಲರು ಶರಣಾಗಿದ್ದಾರೆ. ಈ ಘಟನೆಯು ದಂಡಕಾರಣ್ಯ ಪ್ರದೇಶದಲ್ಲಿ ಎಡಪಂಥೀಯ ಉಗ್ರವಾದದ ವಿರುದ್ಧದ ಪ್ರಮುಖ ವಿಜಯವನ್ನು ಸೂಚಿಸುತ್ತದೆ. ಅಬುಜ್ಮದ್‌ನ ಹೆಚ್ಚಿನ ಭಾಗವು ಈಗ ನಕ್ಸಲ್ ಪ್ರಭಾವದಿಂದ ಮುಕ್ತವಾಗಿದೆ. ಈ ಶರಣಾಗತಿಯು ಸರ್ಕಾರದ ಪುನರ್ವಸತಿ ನೀತಿಗೆ ಸಾಕ್ಷಿಯಾಗಿದೆ. ಈ ಬೆಳವಣಿಗೆ ಬಸ್ತಾರ್‌ನಲ್ಲಿ ಶಾಂತಿ ಮತ್ತು ಅಭಿವೃದ್ಧಿ ಪ್ರಯತ್ನಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಛತ್ತೀಸ್ ಗಢ್ ರಾಜ್ಯದ ಜಗದಲ್ಪುರ ದಲ್ಲಿ 208 ನಕ್ಸಲರು ಪೊಲೀಸರಿಗೆ, ಭದ್ರತಾ ಪಡೆಗಳಿಗೆ ಶರಣಾಗತರಾಗಿದ್ದಾರೆ. ತಮ್ಮ ಬಳಿ ಇದ್ದ 153 ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಗೆ ಶರಣಾಗತರಾಗಿದ್ದಾರೆ. 

Advertisment

NAXALS SURREENDER IN CHATTISGARH02




ಶರಣಾಗತರಾದ ನಕ್ಸಲರಿಗೆ ಪುನರ್ ವಸತಿ ಪ್ಯಾಕೇಜ್ ನಡಿ ಸೂಕ್ತ ಸೌಲಭ್ಯಗಳನ್ನು ನೀಡಲಾಗುತ್ತೆ.  ಛತ್ತೀಸ್ ಘಡ ರಾಜ್ಯದ ಉತ್ತರ ಬಸ್ತಾರ್ ಪ್ರದೇಶವನ್ನು ರೆಡ್ ಟೆರರ್‌ ಅಥವಾ ಕೆಂಪು ಉಗ್ರರ ಪ್ರದೇಶ ಅಂತಾನೇ ಕರೆಯಲಾಗುತ್ತಿತ್ತು. ಈಗ ಉತ್ತರ ಬಸ್ತಾರ್ ಕೆಂಪು ಉಗ್ರರಿಂದ ಸಂಪೂರ್ಣ ಮುಕ್ತವಾಗಿದೆ. 
ಇನ್ನೂ ದಂಡಕಾರಣ್ಯದಲ್ಲಿ ನಕ್ಸಲರು ಎಕೆ 47 ನ 19 ಬಂದೂಕುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 17 ಎಸ್‌ಎಲ್‌ಆರ್ ರೈಫಲ್ ಗಳನ್ನು ಪೊಲೀಸರಿಗೆ ತಂದು ಒಪ್ಪಿಸಿದ್ದಾರೆ.  23,  INSAS  ರೈಫಲ್,  01  INSAS  ಎಲ್‌ಎಂಜಿ ಅನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. 
ಒಂದು ಪಿಸ್ತೂಲ್‌,   ಇನ್ನೂ  36   .303 ರೈಫಲ್‌  , 11 ಬಿಜಿಎಲ್ ಲಾಂಚರ್ ಗಳು, ಸಿಂಗಲ್ ಶಾಟ್ ಗನ್ ಗಳನ್ನು ನಕ್ಸಲರು ಪೊಲೀಸರಿಗೆ ಒಪ್ಪಿಸಿದ್ದಾರೆ.  ಹೀಗೆ ಒಟ್ಟಾರೆ 153 ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ತಂದು ಒಪ್ಪಿಸಿ ಶರಣಾಗತರಾಗಿದ್ದಾರೆ. 

ಇದರೊಂದಿಗೆ 2026ರೊಳಗೆ ದೇಶವನ್ನು ಸಂಪೂರ್ಣ ನಕ್ಸಲ್ ಮುಕ್ತವನ್ನಾಗಿ ಮಾಡುವ ಪಣ ತೊಟ್ಟಿರುವ ಕೇಂದ್ರದ ಗೃಹ ಸಚಿವ  ಅಮಿತ್ ಶಾ ಅವರ ಗುರಿಗೆ ಈ ನಕ್ಸಲ್ ಶರಣಾಗತಿ ಪೂರಕವಾಗಿದೆ. ಕೇಂದ್ರದ ಗುರಿಗೆ ಮತ್ತಷ್ಟು ಬಲ, ಪುಷ್ಟಿ ನೀಡಿದಂತಾಗಿದೆ. ದೇಶದಲ್ಲಿ ಛತ್ತೀಸ್ ಘಡ ರಾಜ್ಯವೇ ಹೆಚ್ಚಿನ ನಕ್ಸಲರ ನೆಲೆಯಾಗಿತ್ತು. ಈಗ ಉತ್ತರ ಬಸ್ತಾರ್ ವಲಯವೇ ನಕ್ಸಲ್ ಮುಕ್ತವಾಗಿರುವುದರಿಂದ ಉಳಿದೆಡೆ ನಕ್ಸಲ್ ಮುಕ್ತ ಪ್ರದೇಶ ಮಾಡೋದು ಸುಲಭವಾಗುತ್ತಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

NAXALS SUREENDER IN CHATTISGARH
Advertisment
Advertisment
Advertisment