2,500 ಸೆಕ್ಸ್ ಪೋಟೋ, ವಿಡಿಯೋ ಆರೋಪಿ ಮ್ಯಾಥ್ಯೂ ಪೊಲೀಸರಿಗೆ ಶರಣಾಗತಿ: ವಿಡಿಯೋ ಬಗ್ಗೆ ಮ್ಯಾಥ್ಯೂ ಹೇಳಿದ್ದೇನು?

ಬೆಂಗಳೂರಿನಲ್ಲಿ ಮಹಿಳೆಗೆ ಲವ್, ಸೆಕ್ಸ್, ದೋಖಾ ಮಾಡಿದ್ದ ಆರೋಪಿ ಕ್ರಿಕೆಟ್ ಕೋಚ್ ಮ್ಯಾಥ್ಯೂ ಪೊಲೀಸರಿಗೆ ಶರಣಾಗಿದ್ದಾನೆ. ಆತನ ಮೊಬೈಲ್ ನಲ್ಲಿ 2,500 ಸೆಕ್ಸ್ ಪೋಟೋ, ವಿಡಿಯೋ ಇವೆ ಎಂದು ಮಹಿಳೆ ಆರೋಪಿಸಿದ್ದರು. ವಿಡಿಯೋ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮ್ಯಾಥ್ಯೂ ಹೇಳಿದ್ದಾನೆ.

author-image
Chandramohan
MATHEW SURRENDER TO POLICE
Advertisment
  • ಲವ್, ಸೆಕ್ಸ್, ದೋಖಾ ಕೇಸ್ ಆರೋಪಿ ಪೊಲೀಸರಿಗೆ ಶರಣಾಗತಿ
  • ಪೊಲೀಸರಿಗೆ ಶರಣಾದ ಕ್ರಿಕೆಟ್ ಕೋಚ್‌ ಮ್ಯಾಥ್ಯೂ
  • ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಗೆ ಶರಣಾದ ಮ್ಯಾಥ್ಯೂ

ಕರ್ನಾಟಕದ ಮತ್ತೊಬ್ಬ ಪ್ರಜ್ವಲ್ ರೇವಣ್ಣ ಎಂದು ಹೇಳಲಾದ ಕ್ರಿಕೆಟ್ ಕೋಟ್ ಮ್ಯಾಥ್ಯೂ ಇಂದು ಪೊಲೀಸರಿಗೆ ಶರಣಾಗಿದ್ದಾನೆ. ಬೆಂಗಳೂರಿನ ಕೋಣನಕುಂಟೆ ಮಹಿಳೆಯೊಬ್ಬರು ತನ್ನನ್ನು ನಂಬಿಸಿ, ದೈಹಿಕ ಸಂಬಂಧ ಬೆಳೆಸಿ, ಬಳಿಕ ಮದುವೆಯಾಗದೇ ಕೈ ಕೊಟ್ಟು ಮ್ಯಾಥ್ಯೂ ಪರಾರಿಯಾಗಿದ್ದಾನೆ ಎಂದು ಆರೋಪಿಸಿದ್ದರು. ಬೆಂಗಳೂರಿನ ಜ್ಞಾನಭಾರತಿ   ಪೊಲೀಸರಿಗೆ ಮಹಿಳೆ  ದೂರು ನೀಡಿದ್ದರು. ಮ್ಯಾಥ್ಯೂ ಬೇರೆ ಬೇರೆ ಯುವತಿಯರ ಜೊತೆಯೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅದರ ಪೋಟೋ, ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈತನ ಬಳಿ 2,500 ಕ್ಕೂ ಹೆಚ್ಚು ಲೈಂಗಿಕತೆಯ ಪೋಟೋ, ವಿಡಿಯೋ ಇವೆ ಎಂದು ಮಹಿಳೆ ಆರೋಪಿಸಿದ್ದರು. ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಶಾಲಾ ವಿದ್ಯಾರ್ಥಿನಿಯರ ಪೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದೆಲ್ಲಾ ಆರೋಪಿಸಿದ್ದರು. 
ಇನ್ನೂ ಈ ಕೇಸ್ ನಲ್ಲಿ ಮಕ್ಕಳ ಆಯೋಗವು ಎಂಟ್ರಿಯಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣೆಗೆ ಮಕ್ಕಳ ಆಯೋಗವು ದೂರು ನೀಡಿದೆ. 
 ಈಗ ಮ್ಯಾಥ್ಯೂ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. 

ಪೊಲೀಸರಿಗೆ ಶರಣಾಗುವ ಮುನ್ನ ಕ್ರಿಕೆಟ್ ಕೋಚ್ ಮ್ಯಾಥ್ಯೂ ನ್ಯೂಸ್ ಫಸ್ಟ್ ಗೆ ಹೇಳಿಕೆ ನೀಡಿದ್ದಾನೆ.
ನಾನು ಯಾರಿಗೂ ಮೋಸ  ಮಾಡಿಲ್ಲ.  ಜಮೀನು ವಿಚಾರವಾಗಿ ಊರಿಗೆ ಹೋಗಿದ್ದೆ . ಶಾಲೆಗೆ ಮಗಳನ್ನ ಬಿಡಲು ಬಂದಾಗ ಆದ ಪರಿಚಯ ಎಂದು ದೂರು ನೀಡಿದ್ದ ಮಹಿಳೆ ಪರಿಚಯವಾಗಿದ್ದರ ಬಗ್ಗೆ ಕ್ರಿಕೆಟ್ ಕೋಚ್ ಮ್ಯಾಥ್ಯೂ ಹೇಳಿದ್ದಾನೆ.  ವಿಡಿಯೋ ಬಗ್ಗೆ ನನಗೇನು ಗೊತ್ತಿಲ್ಲ . ಯಾರೂ ಆರೋಪ ಮಾಡಿದ್ರು ಅವರನ್ನೇ ಕೇಳ್ಬೇಕು  . ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ . ಊರಿಗೆ ಆಕೆಯನ್ನು  ಕರೆದುಕೊಂಡು  ಹೋಗೋದಕ್ಕೆ ಆಗಲಿಲ್ಲ.  ಅಪ್ಪ ಅಮ್ಮ ಬರುವುದಕ್ಕೆ  ಹೇಳಿದ್ರು .  ಎಲ್ಲಾ ವಿಧದ ಸೌಲಭ್ಯ ಮಾಡಿಕೊಟ್ಟಿದ್ದೆ. ಆಕೆ ಯಾವ ಕಾರಣಕ್ಕೆ ಆರೋಪ ಮಾಡಿದ್ದಾಳೆಂದು ಗೊತ್ತಿಲ್ಲ  ಎಂದು  ಆರೋಪಿ ಮ್ಯಾಥ್ಯೂ ಹೇಳಿಕೆ ನೀಡಿದ್ದಾನೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

love sex dhoka case
Advertisment