/newsfirstlive-kannada/media/media_files/2025/09/06/sharan-prakash-patil-med-minister-2025-09-06-20-15-02.jpg)
ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣ ಪ್ರಕಾಶ್ ಪಾಟೀಲ್
ಕರ್ನಾಟಕದ ಮೆಡಿಕಲ್ ಕಾಲೇಜುಗಳ ಮೆಡಿಕಲ್ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕರ್ನಾಟಕಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 400 ಸೀಟುಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ರಾಜ್ಯದ ಕಲ್ಬುರ್ಗಿ, ಬೆಳಗಾವಿ, ಮೈಸೂರು, ಬೆಂಗಳೂರು ಹಾಗೂ ವಿಜಯನಗರ ಮೆಡಿಕಲ್ ಕಾಲೇಜುಗಳಲ್ಲಿ ತಲಾ 50 ಮೆಡಿಕಲ್ ಸೀಟು ಈಗ ಹೆಚ್ಚುವರಿಯಾಗಿ ಸಿಕ್ಕಿವೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನಾವು 15% ಕೋಟಾ ಕೇಂದ್ರಕ್ಕೆ ಬಿಡುತ್ತೇವೆ. ಗುಜರಾತ್ ,ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳಲ್ಲಿ 15% ಎನ್ಆರ್‌ಐ ಕೋಟಾ ನೀಡಲಾಗುತ್ತಿದೆ. ಈ 400 ಸೀಟ್ಗಳಲಿ 15% ಎನ್ಆರ್‌ಐ ಕೋಟಾ ನೀಡುತ್ತೇವೆ . ಇದಕ್ಕೆ 25 ಲಕ್ಷ ಶುಲ್ಕ ಇರುತ್ತೆ . ಹುಬ್ಬಳ್ಳಿಯ ಕೆಎಲ್ ಇ ಸೊಸೈಟಿ ಕಾಲೇಜಿಗೆ 50 ಸೀಟು ಸಹ ಸಿಕ್ಕಿದೆ . 800 ಸೀಟು ಹೆಚ್ಚಳಕ್ಕೆ ನಾವು ಮನವಿ ಮಾಡಿದ್ದೇವೆ. ಇದು ಸಹ ಪರಿಶೀಲನೆಯಲ್ಲಿ ಇದೆ ಎಂದು ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಹುಬ್ಬಳ್ಳಿಯ ಮೂರು ಸಾವಿರ ಮಠದ ಮೆಡಿಕಲ್ ಕಾಲೇಜಿಗೆ 50 ಸೀಟ್ ಬಂದಿದೆ. ಒಟ್ಟು 450 ಸೀಟ್ ಗಳು ಕಾಲೇಜಿಗೆ ರಾಜ್ಯಕ್ಕೆ ಬಂದಿರೋದು ಸಂತಸದ ವಿಚಾರ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಮೈಸೂರಿನಲ್ಲಿ ದಸರಾ ಬಳಿಕ ಉದ್ಯೋಗ ಮೇಳ
ಇನ್ನೂ ಮೈಸೂರಿನಲ್ಲಿ ಉದ್ಯೋಗ ಮೇಳ ಮಾಡುತ್ತಿದ್ದೇವೆ . ಉದ್ಯೋಗ ಮೇಳ ವಿಶೇಷವಾಗಿ ಮಾಡುತ್ತಿದ್ದೇವೆ. ದಸರಾ ಬಳಿಕ ಉದ್ಯೋಗ ಮೇಳ ಮಾಡುತ್ತಿದ್ದು, ನೋಂದಣಿ ಕಾರ್ಯ ಆರಂಭ ಆಗುತ್ತದೆ. ನರ್ಸಿಂಗ್ ಕಾನಕ್ಲೈವ್ (Conclave) ಮಾಡುತ್ತಿದ್ದೇವೆ, ಇದು ಅಕ್ಟೋಬರ್ ನಲ್ಲಿ ನಡೆಯುತ್ತೆ.
ಕಾನ್ ಕ್ಲೈವ್ ಬಳಿಕ ಹೊರ ದೇಶದಲ್ಲಿ ರೋಡ್ ಶೋ ಮಾಡುವ ಮೂಲಕ ಉದ್ಯೋಗ ಮೇಳ ಮಾಡ್ತಿದ್ದೇವೆ. ನವೆಂಬರ್ 4,5,6 ರಂದು ಬೆಂಗಳೂರು ಸ್ಕಿಲ್ ಸಮ್ಮಿಟ್ ಮಾಡುತ್ತಿದ್ದೇವೆ . ಬೆಂಗಳೂರು ಟೆಕ್ ಸಮ್ಮಿಟ್ ಮಾದರಿಯಲ್ಲಿ ಸ್ಕಿಲ್ ಸಮ್ಮಿಟ್ ಮಾಡುತ್ತೇವೆ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ. ಬಳಿಕ ಉದ್ಯೋಗ ಮೇಳದ ಪೋಸ್ಟರ್ ಅನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಬಿಡುಗಡೆ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.