/newsfirstlive-kannada/media/post_attachments/wp-content/uploads/2023/09/Infosys.jpg)
ಇನ್ಪೋಸಿಸ್ ನಿಂದ 400 ಮಂದಿಗೆ ಲೇ ಆಫ್!
ಇತ್ತೀಚೆಗೆ ಐಟಿ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿರುವುದು ಆತಂಕದ ವಿಷಯ. ಹಲವರ ಕನಸಿನ ಉದ್ಯೋಗಗಳು ಕ್ಷಣಮಾತ್ರದಲ್ಲಿ ಕಳೆದುಹೋಗುತ್ತಿದೆ. ಇದಕ್ಕೆ ಕಾರಣ ಕೃತಕ ಬುದ್ಧಿಮತ್ತೆ (AI) ಎಂಬ ಹೊಸ ತಂತ್ರಜ್ಞಾನ.
ಐಬಿಎಂ, Google, Amazon, Meta, Spotify ಮುಂತಾದ ದೊಡ್ಡ ಟೆಕ್ ಕಂಪನಿಗಳೂ ಸಹ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮ ಕೈಗೊಂಡಿವೆ. ಇತ್ತೀಚಿನ ವರದಿಗಳ ಪ್ರಕಾರ ಈ ವರ್ಷದಲ್ಲೇ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಲಕ್ಷಾಂತರ ಉದ್ಯೋಗಿಗಳನ್ನು ಮನೆಗೆ ಕಳುಹಿಸಿವೆ ಅನ್ನೋ ಮಾಹಿತಿ ಇದೆ. ಈಗ ಇನ್ಫೋಸಿಸ್​​ ಸರದಿ.
ಇನ್ಫೋಸಿಸ್​​ ಭಾರತದ ಅತ್ಯಂತ ದೊಡ್ಡ ಐಟಿ ಕಂಪನಿ. ಈಗ ಇನ್ಫೋಸಿಸ್​​​ ತನ್ನ ಕಂಪನಿಯಲ್ಲಿ ಕೆಲಸ ಮಾಡುತ್ತಿರೋ ಸುಮಾರು 400 ಉದ್ಯೋಗಿಗಳ ಲೇ ಆಫ್​ ಮಾಡಿದೆ ಅನ್ನೋ ಆತಂಕಕಾರಿ ವಿಷಯ ತಿಳಿದು ಬಂದಿದೆ. ಇಂಜಿನಿಯರ್ಸ್​ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಲೇ ಆಫ್​ ಆಗಿದೆ ಎನ್ನಲಾಗಿದೆ.
ಲೇ ಆಫ್​ಗೆ ಕಾರಣವೇನು ಅಂತಾ ನೋಡೋದಾದ್ರೆ..!
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಕ್ಯಾಂಪಸ್​ನಲ್ಲಿ ಆಯ್ಕೆಯಾದ 700 ಮಂದಿಯನ್ನು 2024ರ ಅಕ್ಟೋಬರ್​ನಲ್ಲಿ ಟ್ರೈನಿಗಳಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇವರಲ್ಲಿ 400 ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗುತ್ತಿದೆ. ಇಂಟರ್ನಲ್ ಅಸೆಸ್ಮೆಂಟ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳುತ್ತಿರುವುದು ತಿಳಿದುಬಂದಿದೆ.
/filters:format(webp)/newsfirstlive-kannada/media/post_attachments/wp-content/uploads/2025/01/infosys.jpg)
ಫ್ರೆಶರ್​ಗಳನ್ನು ಕೆಲಸದಿಂದ ತೆಗೆಯುತ್ತಿರೋ ಸಂಗತಿಯನ್ನು ಇನ್ಫೋಸಿಸ್ ಕಂಪನಿಯೇ ದೃಢಪಡಿಸಿದೆ. ಎಕನಾಮಿಕ್ ಟೈಮ್ಸ್ ಪ್ರಕಾರ 700 ಮಂದಿ ಕ್ಯಾಂಪಸ್ ನೇಮಕಾತಿಗಳನ್ನು ಲೇ ಆಫ್ ಮಾಡಲಾಗುತ್ತಿದೆ. ಆದರೆ, ಇನ್ಫೋಸಿಸ್ ನೀಡಿರೋ ಮಾಹಿತಿ ಪ್ರಕಾರ ಲೇ ಆಫ್ ಆಗುತ್ತಿರೋ ಸಂಖ್ಯೆ ಸುಮಾರು 350 ಇದೆ.
2022ರಲ್ಲಿ ಕಾಲೇಜು ಕ್ಯಾಂಪಸ್​ಗಳಲ್ಲಿ ಹಲವರನ್ನು ಇನ್ಫೋಸಿಸ್ ಆಯ್ಕೆ ಮಾಡಿಕೊಂಡಿತು. ಇವರಿಗೆ ಆಫರ್​ ಲೆಟರ್​ ಕೂಡ ನೀಡಲಾಗಿತ್ತು. ಬಳಿಕ ಒಂದು ಸಾವಿರ ಮಂದಿಗೆ ಕೆಲಸಕ್ಕೆ ಬರಲು ಪತ್ರ ನೀಡಲಾಗಿತ್ತು. ಇವರನ್ನು ಸಿಸ್ಟಂ ಎಂಜಿನಿಯರ್ಸ್ ಮತ್ತು ಡಿಜಿಟಲ್ ಸ್ಪೆಷಲಿಸ್ಟ್ ಎಂಜಿನಿಯರ್ಸ್ ಹುದ್ದೆಗಳಿಗೆ ಟ್ರೈನಿಗಳಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಆಂತರಿಕ ಪರೀಕ್ಷೆಗಳಲ್ಲಿ ಪಾಸ್​ ಆದವರಿಗೆ ಕೆಲಸದಲ್ಲಿ ಮುಂದುವರಿಯಲು ಅವಕಾಶ ಇದೆ. ಫೇಲ್​ ಆದವರನ್ನು ಲೇಫ್​ ಮಾಡಲಾಗುತ್ತಿದೆ ಎನ್ನುತ್ತಿವೆ ಮೂಲಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us