/newsfirstlive-kannada/media/media_files/2026/01/13/muzarayi-temple-assets-missing-2026-01-13-14-20-28.jpg)
ರಾಜ್ಯದಲ್ಲಿ 4,100 ಮುಜರಾಯಿ ದೇವಾಲಯಗಳ ಆಸ್ತಿಗಳ ದಾಖಲೆ ನಾಪತ್ತೆಯಾಗಿದೆ. ದಾಖಲೆಗಳು ಹುಡುಕಾಡಿದರೂ ಸಿಕ್ಕಿಲ್ಲ. ಹೀಗಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ, ಪ್ರತಿಪಕ್ಷ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ.
4100 ಕ್ಕೂ ಹೆಚ್ಚು ಮುಜರಾಯಿ ದೇವಾಲಯ ನಾಪತ್ತೆ ಆಗಿದೆಯಂತೆ. ದೇಗುಲಗಳ ನಾಪತ್ತೆ ಆಗುವುದು ಅದು ಆಶ್ಚರ್ಯದ ಸಂಗತಿ. ಇದು ಅದ್ಭುತಗಳಲ್ಲಿ ಕೂಡ ಒಂದಾಗಿದೆ, ಯಾರ್ ನಾಪತ್ತೆ ಮಾಡಿದ್ರು..? ಆನ್ ರೆಕಾರ್ಡ್ ಇರುತ್ತೆ. ಮುಜರಾಯಿ ದೇವಾಲಯ ಹುಡುಕಲು ಎಸ್‌ಐಟಿ ರಚನೆ ಮಾಡುವ ಅವಶ್ಯಕತೆ ಇದೆ. ಮುಜರಾಯಿ ದೇಗುಲ ಎಲ್ಲಿ ನಾಪತ್ತೆಯಾಯಿತು? ಅದು ಯಾರೂ ಕಿಡ್ನಾಪ್ ಮಾಡಿದ್ದಾರೆ?ಮುಜರಾಯಿ ದೇಗುಲದ ಆಸ್ತಿ ಏನಾಯ್ತು..? ಎಲ್ಲಾ ಸತ್ಯಾಸತ್ಯೆಗಳು ಹೊರಬರಬೇಕು ಅಂದ್ರೆ ಸಿದ್ದರಾಮಯ್ಯನವರೇ ಎಸ್‌ಐಟಿ ರಚನೆ ಮಾಡಬೇಕು ಎಂದು ಆಗ್ರಹ ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2026/01/13/muzarayi-temple-assets-ct-ravi-2026-01-13-14-22-20.jpg)
ರಾಜ್ಯದ 34,566 ದೇವಸ್ಥಾನಗಳ ಪೈಕಿ 4,170 ನಾಪತ್ತೆಯಾಗಿವೆ ಎಂದು ಮುಜರಾಯಿ ಇಲಾಖೆ ಸಮೀಕ್ಷೆಯಿಂದ ತಿಳಿದುಬಂದಿದೆ. ಇದಕ್ಕೆ ಅಕ್ರಮ ಒತ್ತುವರಿ, ಅತಿಕ್ರಮಣ, ಮತ್ತು ಆಸ್ತಿ ಕಬಳಿಕೆ ಮುಖ್ಯ ಕಾರಣಗಳಾಗಿವೆ. ಇನ್ನೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಲಾಗಿದೆ. ಇಂತಹ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ವಿಫಲರಾಗಿದ್ದಾರೆ.
ಈ ಹಿಂದಿನಿಂದಲೂ ದೇವಸ್ಥಾನದ ಆಸ್ತಿಪಾಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ದೇವಸ್ಥಾನಗಳ ಹೆಸರಿನಲ್ಲಿ ಆಸ್ತಿಗಳೂ ಇರಲಿಲ್ಲ. ಈಗ ರಾಮಲಿಂಗಾರೆಡ್ಡಿ ಅವರು ಮುಜರಾಯಿ ಸಚಿವರಾದ ಬಳಿಕ ದೇವಸ್ಥಾನಗಳ ಆಸ್ತಿಗಳನ್ನು ಆಯಾ ದೇವಾಲಯಗಳ ಹೆಸರಿಗೆ ಆರ್‌ಟಿಸಿ, ಪಹಣಿ, ಖಾತೆ ಮಾಡಿಕೊಡಲಾಗುತ್ತಿದೆ. ಇದನ್ನು ಅಂದೋಲನದ ರೀತಿಯಲ್ಲಿ ಈಗ ಮುಜರಾಯಿ ಇಲಾಖೆ ನಡೆಸುತ್ತಿದೆ. ಇದುವರೆಗೂ ಇದ್ದ ಸರ್ಕಾರಗಳು ಮುಜರಾಯಿ ಇಲಾಖೆ ಆಸ್ತಿ ರಕ್ಷಣೆ, ದಾಖಲೆ ಪತ್ರ ನಿರ್ವಹಣೆ ಬಗ್ಗೆ ಗಮನವನ್ನೇ ಹರಿಸಿರಲಿಲ್ಲ. ಈಗ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಈ ಬಗ್ಗೆ ಗಮನ ವಹಿಸಿ ಉತ್ತಮ ಕ್ರಮ ಕೈಗೊಂಡಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2023/11/RAMALINGA-Reddy.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ..
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us