/newsfirstlive-kannada/media/media_files/2025/10/17/dig-harcharan-singh-2025-10-17-12-12-47.jpg)
ಡಿಐಜಿ ಹರಚರಣ್ ಸಿಂಗ್ ಮನೆಯಲ್ಲಿ 5 ಕೋಟಿ ಕ್ಯಾಶ್ ಪತ್ತೆ
- ಡಿಐಜಿ ಹರಚರಣ್ ಸಿಂಗ್ ಮನೆಯಲ್ಲಿ 5 ಕೋಟಿ ಕ್ಯಾಶ್ ಪತ್ತೆ
- ಮರ್ಸಿಡಿಸ್, ಔಡಿ ಕಾರ್, ಲಕ್ಷುರಿ ವಾಚ್, ಚಿನ್ನಾಭರಣ ಪತ್ತೆ
- ಡಿಐಜಿ ಹರಚರಣ್ ಸಿಂಗ್, ಮಧ್ಯವರ್ತಿ ಕೃಷ್ಣನನ್ನು ಬಂಧಿಸಿದ ಸಿಬಿಐ
ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಎಷ್ಟು ಕ್ಯಾಶ್ ಇರಬಹುದು. ಒಂದು ಕೋಟಿ, ಎರಡು ಕೋಟಿ ಎಂದು ನೀವು ಹೇಳಬಹುದು. ಆದರೇ, ಸರ್ಕಾರಿ ಅಧಿಕಾರಿಯೊಬ್ಬರ ಮನೆಯಲ್ಲಿ ಬರೋಬ್ಬರಿ ಐದು ಕೋಟಿ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಮರ್ಸಿಡಿಸ್ ಕಾರ್, ಔಡಿ ಕಾರ್, 20 ಲಕ್ಷುರಿ ವಾಚ್ ಗಳು ಸೇರಿದಂತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಯಾಗಿದೆ. ಇಷ್ಟೆಲ್ಲಾ ಆಸ್ತಿಪಾಸ್ತಿ ಪಂಜಾಬ್ ರಾಜ್ಯದ ರೂಪರ್ ವಲಯದ ಡಿಐಜಿಿ ಹರಚರಣ್ ಸಿಂಗ್ ಭುಲ್ಲಾರ್ ಮನೆಯಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಾಗ ಪತ್ತೆಯಾಗಿದೆ.
ರೂಪರ್ ವಲಯದ ಸ್ಥಳೀಯ ಬ್ಯುಸಿನೆಸ್ ಮೆನ್ ವಿರುದ್ಧ ಇದ್ದ ಕೇಸ್ ಸೆಟಲ್ ಮೆಂಟ್‌ಗೆ ಮಧ್ಯವರ್ತಿ ಕೃಷ್ಣ ಮೂಲಕ ಡಿಐಜಿ ಹರಚರಣ್ ಸಿಂಗ್ ಭುಲ್ಲಾರ್ 8 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಬಳಿಕ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಾಗ, ಮನೆಯಲ್ಲಿ ಐದು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.
ಪಂಜಾಬ್‌ನ ಫತೇಗರ್ ಸಾಹೀಬ್‌ನ ಸ್ಕ್ರಾಪ್ ಡೀಲರ್‌ನ ಆಕಾಶ್ ಭಟ್ ಐಜಿಪಿ ಹರಚರಣ್ ಸಿಂಗ್ ಭುಲ್ಲಾರ್ ವಿರುದ್ಧ ಲಂಚ ಕೇಳಿದ ಆರೋಪದಡಿ ಸಿಬಿಐಗೆ ದೂರು ನೀಡಿದ್ದರು. ತನಗೆ 8 ಲಕ್ಷ ರೂಪಾಯಿ ನೀಡದಿದ್ದರೇ, ಸುಳ್ಳು ಕೇಸ್ ನಲ್ಲಿ ಸಿಲುಕಿಸುವುದಾಗಿ ಡಿಐಜಿ ಹರಚರಣ್ ಸಿಂಗ್ ಭುಲ್ಲಾರ್ ಬೆದರಿಕೆ ಹಾಕಿದ್ದಾರೆ ಎಂದು ಸಿಬಿಐಗೆ ದೂರು ನೀಡಿದ್ದರು.
ತನ್ನ ಸಹವರ್ತಿ ಕೃಷ್ಣ ಮೂಲಕ ಪ್ರತಿ ತಿಂಗಳು ಮಾಮೂಲಿ ಲಂಚದ ಹಣವನ್ನು ನೀಡಬೇಕೆಂದು ಐಜಿಪಿ ಬೇಡಿಕೆ ಇಟ್ಟಿದ್ದರು. ಬಳಿಕ ಮಧ್ಯವರ್ತಿ ಕೃಷ್ಣ, ಆಕಾಶ್ ಭಟ್‌ಗೆ ಪೋನ್ ಮಾಡಿ, ಆಗಸ್ಟ್ ಪೇಮೆಂಟ್ ಬಂದಿಲ್ಲ, ಸೆಪ್ಟೆಂಬರ್ ಪೇಮೆಂಟ್ ಬಂದಿಲ್ಲ ಎಂದು ಹೇಳಿದ್ದು ಪೋನ್ ಸಂಭಾಷಣೆಯಲ್ಲಿ ರೆಕಾರ್ಡ್ ಆಗಿತ್ತು. ಬಳಿಕ ಸಿಬಿಐ, ಟ್ರ್ಯಾಪ್ ಅನ್ನು ಕೃಷ್ಣಗೆ ರೆಡಿ ಮಾಡಿತ್ತು. 8 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಮಧ್ಯವರ್ತಿ ಕೃಷ್ಣ ಸಿಕ್ಕಿಬಿದ್ದ. ಬಳಿಕ ಸಿಬಿಐ ಅಧಿಕಾರಿಗಳು, ದೂರುದಾರ ಆಕಾಶ್ ಭಟ್ ಹಾಗೂ ಡಿಐಜಿ ಹರಚರಣ್ ಸಿಂಗ್ ಭುಲ್ಲಾರ್ ಮಧ್ಯೆ ಪೋನ್ ಮಾತುಕತೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ವೇಳೆ ಡಿಐಜಿ ಹರಚರಣ್ ಸಿಂಗ್ ಭುಲ್ಲಾರ್ ಹಣ ತಲುಪಿದೆ. ಕೃಷ್ಣ ಮತ್ತು ಆಕಾಶ್ ಭಟ್ ಇಬ್ಬರೂ ತಮ್ಮ ಕಚೇರಿಗೆ ಬಂದು ಭೇಟಿಯಾಗಿ ಎಂದು ಹೇಳಿದ್ದಾರೆ. ಬಳಿಕ ಸಿಬಿಐ ಅಧಿಕಾರಿಗಳು, ಮೊಹಾಲಿಯ ಕಚೇರಿಯಲ್ಲಿದ್ದ ಡಿಐಜಿ ಹರಚರಣ್ ಸಿಂಗ್ ಭುಲ್ಲಾರ್ ನನ್ನು ಬಂಧಿಸಿದ್ದಾರೆ.
ಬಳಿಕ ಸಿಬಿಐ ಅಧಿಕಾರಿಗಳು, ರೂಪರ್, ಮೊಹಾಲಿ, ಚಂಢೀಗಢ ಸೇರಿದಂತೆ ವಿವಿಧೆಡೆ ಹರಚರಣ್ ಸಿಂಗ್ ಭುಲ್ಲಾರ್ ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಕ್ಯಾಶ್ ಹಣ, ಆಸ್ತಿಪಾಸ್ತಿ ಪತ್ರಗಳು, ಲಕ್ಷುರಿ ಕಾರ್, ಲಕ್ಷುರಿ ವಾಚ್ ಗಳು ಪತ್ತೆಯಾಗಿವೆ.
ಅಂದಾಜು 5 ಕೋಟಿ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಹಣದ ಎಣಿಕೆ ಇನ್ನೂ ನಡೆಯುತ್ತಿದೆ.
1.5 ಕೆಜಿ ಚಿನ್ನಾಭರಣ ಪತ್ತೆಯಾಗಿವೆ. ಪಂಜಾಬ್ ರಾಜ್ಯದ ವಿವಿಧೆಡೆ ಸ್ಥಿರ ಆಸ್ತಿ ಹೊಂದಿರುವುದ್ತೆ ಸಂಬಂಧಿಸಿದ ಆಸ್ತಿ ಪತ್ರಗಳು ಪತ್ತೆಯಾಗಿವೆ. ಮರ್ಸಿಡಿಸ್ ಮತ್ತು ಔಡಿ ಲಕ್ಷುರಿ ಕಾರ್ ಗಳು ಪತ್ತೆಯಾಗಿವೆ. 22 ಹೈ ಎಂಡ್ ವಾಚ್ ಗಳು ಪತ್ತೆಯಾಗಿವೆ. ಲಾಕರ್ ಕೀಗಳು, 40 ಲೀಟರ್ ಇಂಫೋರ್ಟೆಡ್ ಲಿಕ್ಕರ್, ಡಬಲ್ ಬ್ಯಾರೆಲ್ ಶಾಟ್ ಗನ್, ಪಿಸ್ತೂಲ್, ರಿವಾಲ್ವರ್, ಏರ್ ಗನ್ ಪತ್ತೆಯಾಗಿವೆ.
ಇನ್ನೂ ಲಂಚದ ಮಧ್ಯವರ್ತಿ ಕೃಷ್ಣ ಮನೆಯಲ್ಲಿ 21 ಲಕ್ಷ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಇಂದು ಲಂಚ ಕೇಸ್‌ನ ಆರೋಪಿಗಳಾದ ಡಿಐಜಿ ಹರಚರಣ್ ಸಿಂಗ್ ಭುಲ್ಲಾರ್ ಹಾಗೂ ಕೃಷ್ಣನನ್ನು ಸಿಬಿಐ ಅಧಿಕಾರಿಗಳು ಕೋರ್ಟ್ ಗೆ ಹಾಜರುಪಡಿಸುವರು. ಡಿಐಜಿ ಹರಚರಣ್ ಸಿಂಗ್ ಹೊಂದಿರುವ ಸಂಪೂರ್ಣ ಆಸ್ತಿಪಾಸ್ತಿಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಯುತ್ತಿದೆ. ಆಕ್ರಮ ಹಣ ವರ್ಗಾವಣೆಯ ಸಾಧ್ಯತೆಯ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ. ಆಕ್ರಮ ಹಣ ವರ್ಗಾವಣೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೇ, ಜಾರಿ ನಿರ್ದೇಶನಾಲಯ ಈ ಕೇಸ್ ಗೆ ಎಂಟ್ರಿಯಾಗಬಹುದು.