ಐದು ಮಂದಿ ಪತ್ನಿಯರು, 11 ಮಕ್ಕಳು ಒಂದೇ ಮನೆಯಲ್ಲಿ ವಾಸ..

ಈ ಐದು ಮಂದಿ ಪತ್ನಿಯರು, ಓರ್ವ ಗಂಡ ಒಂದೇ ಮನೆಯಲ್ಲಿ ವಾಸಿಸುತ್ತಾ, 11 ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ.

author-image
Siddeshkumar H P
5-Wives-And-11-Kids-A-MAN-with-multiple-wives-has-revealed
Advertisment

ಭಾರತದ ಹಿಂದೂ ಸಮಾಜ, ಸಂಸ್ಕೃತಿಯಲ್ಲಿ ಸಂಪ್ರದಾಯಿಕವಾಗಿ ವಿವಾಹ ಅಂದರೇ, ಜೀವನ ಪೂರ್ತಿ ಗಂಡ- ಹೆಂಡತಿ ಜೊತೆಯಾಗಿ ಇರೋದು. ಮದುವೆಯ ಈ ಬಂಧ, ಏಳು ಏಳು ಜನ್ಮಗಳ ಅನುಬಂಧ ಎಂಬ ಮಾತು ಇದೆ.  ಏಳೇಳು ಜನ್ಮಕ್ಕೂ ನೀನೇ ಹೆಂಡತಿಯಾಗಿ ಸಿಗು, ನೀನು ಗಂಡನಾಗಿ ಸಿಗು ಎಂದು ಹೇಳುವ ಗಂಡ- ಹೆಂಡತಿಯರು ಇದ್ದಾರೆ.  ಭಾರತದಲ್ಲಿ ಮದುವೆ ಅಂದರೇ, ಲೈಫ್ ಲಾಂಗ್ ಇಬ್ಬರೂ ಜೊತೆಯಾಗಿ ಇರೋದು. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ವಿವಾಹ, ವೈವಾಹಿಕ, ಸಂಸಾರಿಕ ಸಂಬಂಧಗಳು ಇವೆ. ಭಾರತದಲ್ಲೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಾದ ವೈವಾಹಿಕ ಸಂಬಂಧ ಬೆಳೆದಿರುವುದನ್ನು ನಾವು ನೋಡಿದ್ದೇವೆ. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಒಬ್ಬ ಯುವತಿಯನ್ನು ಇಬ್ಬರು ಸೋದರರು ವಿವಾಹವಾಗಿದ್ದನ್ನು ನೋಡಿದ್ದೇವೆ.  ಎಲ್ಲರೂ ಒಬ್ಬನೇ ಪತಿ ಅಥವಾ ಪತ್ನಿಗೆ ನಿಷ್ಠೆಯಿಂದ ಇರಲ್ಲ. ಒಂದಕ್ಕಿಂತ ಹೆಚ್ಚು ಸಂಬಂಧಗಳನ್ನು ಅಧಿಕೃತವಾಗಿಯೇ ಬೆಳೆಸಿಕೊಳ್ಳುತ್ತಾರೆ. ಏಕಪತ್ನಿ ವ್ರತಸ್ಥ, ಏಕಪತಿ ವ್ರತಸ್ಥರು ಭಾರತಕ್ಕೆ ಸೀಮಿತ. 
ವಿಶ್ವದ ಕೆಲವೆಡೆ ಒಬ್ಬಳೇ ಮಹಿಳೆ, ಮೂವರು ಗಂಡಂದಿರನ್ನು ಹೊಂದಿರುತ್ತಾರೆ ಅಥವಾ ಒಬ್ಬ ವ್ಯಕ್ತಿ , ಇಬ್ಬರು ಅಥವಾ ಮೂವರು ಪತ್ನಿಯರ ಜೊತೆ ಒಂದೇ ಮನೆಯಲ್ಲಿ ವಾಸಿಸುತ್ತಿರುತ್ತಾರೆ. 

ದಿ ಬ್ಯಾರೆಟ್ ಕುಟುಂಬದ ಸಂಪ್ರದಾಯಿಕವಲ್ಲದ ಜೀವನ!
ಇನ್‌ಸ್ಟಾಗ್ರಾಮ್‌ನಲ್ಲಿ ಬ್ಯಾರೆಟ್ ಕುಟುಂಬದ ವಿಡಿಯೋಗಳು ಅಪ್ ಲೋಡ್ ಆಗಿವೆ. ಈ ಕುಟುಂಬವು ಸಂಪ್ರದಾಯಿಕ ಕೌಟುಂಬಿಕ ವ್ಯವಸ್ಥೆಗೆ ವಿರುದ್ಧವಾದ ಕುಟುಂಬ. ವಿಶಿಷ್ಟ ಕುಟುಂಬ. ಈ ಕುಟುಂಬದಲ್ಲಿ ಒಬ್ಬ ಗಂಡನಿಗೆ ಐವರು ಹೆಂಡತಿಯರು ಇದ್ದಾರೆ. ನಮ್ಮ ಮಹಾಭಾರತದ ಪಾಂಚಾಲಿ ಕಥೆಗೆ ಇದು ವಿರುದ್ಧವಾದ ಕಥೆ.  ಆದರೇ, ವಾಸ್ತವದ ಘಟನೆ. ಈ ಕುಟುಂಬದಲ್ಲಿ 11 ಮಕ್ಕಳಿದ್ದಾರೆ. ಗಂಡನ ಐಡೆಂಟಿಟಿಯನ್ನು ಇತ್ತೀಚೆಗೆ ಬಹಿರಂಗಪಡಿಸಲಾಗಿದೆ. ತಮ್ಮ ಲೈಫ್ ಸ್ಟೈಲ್ ಮತ್ತು ಜೀವನದ ಸಂತೋಷವಾಗಿರುವ ವ್ಯವಸ್ಥೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. 
ಗಂಡ ಹೇಳುವ ಪ್ರಕಾರ, ತನ್ನ ಐವರು ಪತ್ನಿಯರು ತನ್ನ ಗಮನ ಸೆಳೆಯಲು ಆರೋಗ್ಯಕರ ಸ್ಪರ್ಧೆ ನಡೆಸುತ್ತಾರಂತೆ. ಈ ಕುಟುಂಬವನ್ನು ಬ್ಯಾರೆಟ್ ಕುಟುಂಬ ಎಂದು ಕರೆಯಲಾಗುತ್ತೆ.  ಈ ಕುಟುಂಬದಲ್ಲಿ ಬಹುಪತ್ನಿತ್ವದ ಪದ್ದತಿ ಇದೆ.  ಮಹಿಳೆಯರು ತಮ್ಮನ್ನು   ಸಿಸ್ಟರ್ ಪತ್ನಿಯರು ಎಂದು ಕರೆದುಕೊಳ್ಳುತ್ತಾರೆ. 

5-Wives-And-11-Kids-A-MAN-with-multiple-wives

ಸಂಬಂಧ ಹೇಗಿರುತ್ತೆ?
ಇದು ಸಂಪ್ರದಾಯಿಕವಲ್ಲದ ವ್ಯವಸ್ಥೆ. ಐವರು ಪತ್ನಿಯರು ತಮ್ಮ ಗಂಡನ ಜೊತೆ ಸೌಹಾರ್ದ ಸಂಬಂಧ, ಭಾಂಧವ್ಯ ಹೊಂದಿದ್ದಾರಂತೆ. ಈ ಐದು ಮಂದಿ ಪತ್ನಿಯರು, ಓರ್ವ ಗಂಡ ಒಂದೇ ಮನೆಯಲ್ಲಿ ವಾಸಿಸುತ್ತಾ, 11 ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತಿದ್ದಾರೆ. 
ದಿ ಬ್ಯಾರೆಟ್ ಪತ್ನಿಯರು ಯಾರಾರು ಅಂದರೇ, ಜೆಸ್, ಗಬ್ಬಿ, ಡಿಯಾನಾ, ಕಾಮ್, ಸ್ಟಾರ್. ತಮ್ಮ ಲೈಫ್ ಸ್ಟೈಲ್ ಬಗ್ಗೆ ಆಗ್ಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.  ಕೆಲವೊಂದು ವಿಡಿಯೋಗಳಿಗೆ ಮಿಲಿಯನ್ ಗಟ್ಟಲೇ ವೀವ್ಸ್ ಕೂಡ  ಬಂದಿವೆ. 
ಇನ್ನೂ  ಇತ್ತೀಚೆಗೆ ಪೋಸ್ಟ್ ಮಾಡಿರುವ  ವಿಡಿಯೋ ಒಂದರಲ್ಲಿ ತಮ್ಮ ಗಂಡ ಮನೆಗೆ ಬರುತ್ತಿರುವಂತೆ, ಐವರು ಪತ್ನಿಯರು ತಾವು ಮಾಡುತ್ತಿದ್ದ ಕೆಲಸಗಳನ್ನು ನಿಲ್ಲಿಸಿ, ಸುಂದರವಾಗಿ  ಸ್ಥಳದಲ್ಲೇ ರೆಡಿಯಾಗಿ ಗಂಡನ ಸ್ವಾಗತಕ್ಕೆ  ಬಾಗಿಲ ಬಳಿ ಹೋಗುವ ವಿಡಿಯೋ ಅಪ್ ಲೋಡ್ ಆಗಿದೆ. ಕ್ಲೀನಿಂಗ್ ಮಾಡುತ್ತಿದ್ದವರು, ವಾಷಿಂಗ್ ಮಾಡುತ್ತಿದ್ದವರು, ಸೋಫಾ ಸರಿ ಮಾಡುತ್ತಿದ್ದವರು ತಮ್ಮ ಕೆಲಸ ನಿಲ್ಲಿಸಿ, ಗಂಡನ ಸ್ವಾಗತಕ್ಕೆ ಓಡಿ ಹೋಗ್ತಾರೆ. ಗಂಡನನ್ನು ಇಂಪ್ರೆಸ್ ಮಾಡಲು, ಗಮನ ಸೆಳೆಯಲು ಐವರು ಪತ್ನಿಯರು ಯತ್ನಿಸುತ್ತಾರೆ.  ಜೊತೆಗೆ ಮೊದಲು ತಾವೇ ಗಂಡನಿಗೆ ಕಿಸ್ ಮಾಡಬೇಕೆಂದು ಬಾಗಿಲ ಬಳಿ ಓಡಿ ಹೋಗುತ್ತಾರೆ. 
ಈ ವಿಡಿಯೋ ತಮಾಷೆಯಾಗಿದ್ದರೂ, ಫ್ಯಾಮಿಲಿಯಲ್ಲಿ ಹೇಗೆಲ್ಲಾ ನಡೆಯುತ್ತೆ  ಅನ್ನೋದನ್ನು ಈ ವಿಡಿಯೋ ಮೂಲಕ ಜನರು ತಿಳಿದುಕೊಳ್ಳಬಹುದು. 

https://www.instagram.com/p/DFoJD_ez5X3/

ಜನರ ಪ್ರತಿಕ್ರಿಯೆ ಹೇಗಿದೆ?
ಈ ವಿಡಿಯೋಗೆ ಸಾವಿರಾರು ಕಾಮೆಂಟ್ ಗಳು ಬಂದಿವೆ. ನಾನು ಎಂದೂ ಇಂಥ ಸಂಬಂಧ ಇಟ್ಟುಕೊಳ್ಳಲ್ಲ ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ಮನಸ್ಸು  ಇದನ್ನು ನೋಡಿದ ಮೇಲೆ ಕುಸಿಯುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
ಒಬ್ಬನೇ ವ್ಯಕ್ತಿ, ಐವರು ಪತ್ನಿಯರ ಜೊತೆ ಇರೋದು ಖಂಡಿತವಾಗಿಯೂ ಅನುಮಾನಕ್ಕೆ ಕಾರಣವಾಗುತ್ತೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 
ಆದರೇ, ಸೋಷಿಯಲ್ ಮೀಡಿಯಾದಲ್ಲಿ ಯಾರು ಏನೇ ಕಾಮೆಂಟ್ ಮಾಡಿಕೊಳ್ಳಲಿ, ಈ ಐವರು ಪತ್ನಿಯರು, ಬಹುಪತ್ನಿತ್ವದಲ್ಲಿ ನಂಬಿಕೆ ಹೊಂದಿದ್ದಾರೆ. ಮೋಸ ಮಾಡುವ ಗಂಡನಿಗಿಂತ,  ನಂಬಿಕಸ್ಥ ಗಂಡನನ್ನು ನಾವು ಐದು ಜನರು ಹಂಚಿಕೊಳ್ಳುವುದೇ ಉತ್ತಮ. ನಮಗೆ ಬೇರೆ ವ್ಯಕ್ತಿಗಳಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಐವರು ಪತ್ನಿಯರು ಹೇಳಿದ್ದಾರೆ. 

Advertisment