/newsfirstlive-kannada/media/media_files/2025/09/03/up-rani-aunty-murder-case-2025-09-03-18-27-01.jpg)
ಕೊಲೆಯಾದ 52ರ ಹರೆಯದ ಆಂಟಿ ರಾಣಿ
52 ವರ್ಷದ ಆಂಟಿಯೊಬ್ಬಳು ತನ್ನ ವಯಸ್ಸು ಕಡಿಮೆ ಕಾಣಬೇಕೆಂದು ಪೋಟೋದಲ್ಲಿ ಫಿಲ್ಟರ್ ಬಳಸಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ವಯಸ್ಸು ಗೊತ್ತಾಗದೇ 26 ವರ್ಷದ ಯುವಕ ಯಾಮಾರಿದ್ದಾನೆ. ಆದರೇ, ಸತ್ಯ ಗೊತ್ತಾದ ಮೇಲೆ ತನ್ನನ್ನು ಯಾಮಾರಿಸಿದ ಆಂಟಿಯನ್ನು ಕೊಲೆ ಮಾಡಿದ್ದಾನೆ.
ಒಂದೂವರೆ ವರ್ಷದ ಹಿಂದೆ ಫಾರೂಕ್‌ಬಾದ್ ನ ರಾಣಿ, ಸೋಷಿಯಲ್ ಮೀಡಿಯಾ ಮೂಲಕ ಅರುಣ್ ರಜಪೂತ್ ನನ್ನು ಭೇಟಿಯಾಗಿದ್ದಾಳೆ. ಆಂಟಿ ರಾಣಿಯ ಪೋಟೋವನ್ನು ನೋಡಿದ 26ರ ಯುವಕ ಅರುಣ್ ರಜಪೂತ್ ಈಕೆಯ ಅಂದ ಚೆಂದಕ್ಕೆ ಮಾರಿ ಹೋಗಿದ್ದಾನೆ. ಈಕೆಯನ್ನು ಸುಂದರ ಯುವತಿ ಎಂದು ನಂಬಿದ್ದಾನೆ.
ಆದರೇ, ಆಂಟಿ ರಾಣಿ, ಪೋಟೋಗೆ ಫಿಲ್ಟರ್ ಬಳಸಿ ತನ್ನ ವಯಸ್ಸು ಮರೆಮಾಚಿದ್ದಳು. ತನಗೆ ಇನ್ನೂ 25- 30 ರ ವಯಸ್ಸು ಎಂದು ಅರುಣ್ ರಜಪೂತ್ ಜೊತೆ ಹೇಳಿಕೊಂಡಿದ್ದಳು. ಇದನ್ನು ಅರುಣ್ ರಜಪೂತ್ ಕೂಡ ಪ್ರಾರಂಭದಲ್ಲಿ ನಂಬಿಬಿಟ್ಟಿದ್ದ. ಹೀಗಾಗಿ ರಾಣಿಯ ಪೋನ್ ನಂಬರ್ ಪಡೆದು ಆಕೆಯ ಜೊತೆ ಟಾಕಿಂಗ್ ಶುರುವಿಟ್ಟುಕೊಂಡಿದ್ದ. ಬಳಿಕ ಫಾರೂಕ್‌ಬಾದ್ ನ ಹೋಟೇಲ್ ಗಳಲ್ಲಿ ಇಬ್ಬರು ಭೇಟಿಯಾಗಿದ್ದಾರೆ.
ಹೀಗೆ ಒಂದು, ಒಂದೂವರೆ ವರ್ಷ ಇಬ್ಬರ ಭೇಟಿ, ಮಾತುಕತೆ ಎಲ್ಲವೂ ನಡೆದಿದೆ. ಇದರ ಮಧ್ಯೆಯೇ ರಾಣಿ, ಪ್ರಿಯಕರ ಅರುಣ್ ರಜಪೂತ್‌ಗೆ ಒಂದೂವರೆ ಲಕ್ಷ ರೂಪಾಯಿ ಹಣವನ್ನು ನೀಡಿದ್ದಳು.
ಬಳಿಕ ಅರುಣ್ ರಜಪೂತ್‌ಗೆ ಆಂಟಿ ರಾಣಿಯ ವಯಸ್ಸು 25-30 ಅಲ್ಲ . ಬರೋಬ್ಬರಿ 52 ಎಂಬುದು ಗೊತ್ತಾಗಿದೆ. ಜೊತೆಗೆ ರಾಣಿಗೆ ಈಗಾಗಲೇ ನಾಲ್ಕು ಮಕ್ಕಳಿವೆ ಎಂಬ ಸತ್ಯ ಕೂಡ ಗೊತ್ತಾಗಿದೆ.
ಸ್ಪಲ್ಪ ದಿನದ ನಂತರ ಆಂಟಿ ರಾಣಿ, ಅರುಣ್ ರಜಪೂತ್‌ಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಜೊತೆಗೆ ತಾನು ನೀಡಿರುವ ಹಣವನ್ನು ವಾಪಸ್ ಕೊಡು ಎಂದು ಕೂಡ ಒತ್ತಡ ಹೇರಿದ್ದಾಳೆ.
ಇದರಿಂದಾಗಿ ಸಿಟ್ಟಿಗೆದ್ದ ಅರುಣ್ ರಜಪೂತ್ ಆಂಟಿ ರಾಣಿಯನ್ನು ಮೈನಾಪುರಿಗೆ ಕರೆದು ಕೊಲೆ ಮಾಡಿದ್ದಾನೆ. ಆಗಸ್ಟ್ 11 ರಂದೇ ಅರುಣ್ ರಜಪೂತ್, ಆಂಟಿ ರಾಣಿಯನ್ನು ಕೊಲೆ ಮಾಡಿದ್ದಾನೆ. ಮೈನಾಪುರಿ ಜಿಲ್ಲೆಯ ಕರ್ಪಾರಿ ಗ್ರಾಮದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು.
ಸ್ಪಲ್ಪ ದಿನ ಪೊಲೀಸರಿಗೂ ಹತ್ಯೆಯಾದ ಮಹಿಳೆಯ ಶವದ ಗುರುತು ಪತ್ತೆಯಾಗಿರಲಿಲ್ಲ. ಫಾರೂಕ್‌ಬಾದ್ ನಲ್ಲಿ ದಾಖಲಾದ ಮಹಿಳೆಯ ನಾಪತ್ತೆ ಕೇಸ್ ನ ಪೋಟೋವನ್ನು ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಮೈನಾಪುರಿಯಲ್ಲಿ ಪತ್ತೆಯಾದ ಶವದ ಗುರುತಿಗೂ ನಾಪತ್ತೆಯಾದ ಮಹಿಳೆಯ ಪೋಟೋಗೂ ತಾಳೆ ಹಾಕಿ ನೋಡಿದ್ದಾರೆ. ಇದರಿಂದಾಗಿ ಕೊಲೆಯಾಗಿರುವುದು ಫಾರೂಕ್‌ಬಾದ್ ನ ರಾಣಿ ಎಂಬುದು ಪೊಲೀಸರಿಗೆ ದೃಢವಾಗಿದೆ.
ಬಳಿಕ ಮಹಿಳೆಯ ಪೋನ್ ಕಾಲ್ ಡೀಟೈಲ್ಸ್ ಪಡೆದು ತನಿಖೆ ನಡೆಸಿದಾಗ, ಈಕೆ ಹೆಚ್ಚಾಗಿ ಅರುಣ್ ರಜಪೂತ್ ಜೊತೆ ಮಾತನಾಡಿರುವುದು ಗೊತ್ತಾಗಿದೆ. ಅರುಣ್ ರಜಪೂತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ನಡೆಸಿರುವುದನ್ನ ಒಪ್ಪಿಕೊಂಡಿದ್ದಾನೆ. ರಾಣಿಯ ದುಪ್ಪಟ್ಟಾದಿಂದಲೇ ಆಕೆಯ ಉಸಿರು ನಿಲ್ಲಿಸಿದ್ದಾಗಿ ಅರುಣ್ ರಜಪೂತ್ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ರಾಣಿಗೆ 52 ವರ್ಷ ವಯಸ್ಸಾಗಿದ್ದರಿಂದ ಆಕೆಯನ್ನು ನಾನು ಮದುವೆಯಾಗಲು ನಿರಾಕರಿಸಿದೆ ಎಂದು ಪೊಲೀಸರಿಗೆ ಹೇಳಿದ್ದಾನೆ. ಆಂಟಿಯರು ಹೀಗೂ ಯಾಮಾರಿಸ್ತಾರಾ ಎಂದು ಉತ್ತರ ಪ್ರದೇಶದ ಯುವಕರು ತಲೆ ಕೆಡಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.