/newsfirstlive-kannada/media/media_files/2025/08/30/jammu-kashmir-cloud-burst03-2025-08-30-17-43-32.jpg)
ಭೂಕುಸಿತ, ಮೇಘಸ್ಪೋಟದಿಂದ 11 ಮಂದಿ ಸಾವು
ದೇಶದ ಮುಕುಟ ಮಣಿ, ಭೂಲೋಕದ ಸ್ವರ್ಗ ಎಂದೇ ಹೆಸರಾದ ಜಮ್ಮು ಕಾಶ್ಮೀರ ಈಗ ನೈಸರ್ಗಿಕ ವಿಕೋಪಗಳಿಂದ ತತ್ತರಿಸಿ ಹೋಗಿದೆ. ಜಮ್ಮು ಕಾಶ್ಮೀರದಲ್ಲಿ ಮತ್ತೆ ಮೇಘಸ್ಪೋಟ ಸಂಭವಿಸಿದೆ. ಜಮ್ಮು ಕಾಶ್ಮೀರದ ರಾಮಬಾನ್ ನಲ್ಲಿ ಮೇಘಸ್ಪೋಟ ಸಂಭವಿಸಿದ್ದು, ರಿಸಾಯಿ ಪ್ರದೇಶದಲ್ಲಿ ಭೂಕುಸಿತದಿಂದ ಏಳು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ರಾಮಭಾನ್ ನಲ್ಲಿ ಮೇಘಸ್ಪೋಟದಿಂದ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ.
ರಾಮಭಾನ್ ನಲ್ಲಿ ಅನೇಕರು ನಾಪತ್ತೆಯಾಗಿದ್ದು, ಅಂಥವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಾಕಷ್ಟು ಮನೆಗಳು ಮೇಘಸ್ಪೋಟದಿಂದ ಹಾನಿಗೊಳಗಾಗಿವೆ.
ರಿಸಾಯಿ ಪ್ರದೇಶದಲ್ಲಿ ಭೂಕುಸಿತದಿಂದ ಒಂದೇ ಕುಟುಂಬದ ಏಳು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ರಿಮೋಟ್ ಪ್ರದೇಶದಲ್ಲಿದ್ದ ಅವರ ಮನೆ ಸಂಪೂರ್ಣವಾಗಿ ನಾಶವಾಗಿದೆ. ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ. ಮನೆ ಮಾಲೀಕ ನಜೀರ್ ಅಹಮದ್, ಅವರ ಪತ್ನಿ ಹಾಗೂ ಅವರ ಐದು ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಇಂದು ಮೇಘಸ್ಪೋಟ ಹಾಗೂ ಭೂಕುಸಿತದಿಂದ 11 ಮಂದಿ ಸಾವನ್ನಪ್ಪಿದ್ದಾರೆ.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ತಕ್ಷಣವೇ ರಕ್ಷಣೆ ಹಾಗೂ ಪರಿಹಾರ ಕಾರ್ಯಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಿಎಂ ಕಚೇರಿ ಟ್ವೀಟ್ ಮಾಡಿದೆ.
ಜಮ್ಮು ಕಾಶ್ಮೀರದಲ್ಲಿ ಮಳೆ, ಭೂಕುಸಿತ, ಮೇಘಸ್ಪೋಟದಿಂದ ಇದುವರೆಗೂ 36 ಮಂದಿ ಸಾವನ್ನಪ್ಪಿದ್ದಾರೆ. ಜಮ್ಮು-ಶ್ರೀನಗರ ಹೆದ್ದಾರಿಗೂ ಭಾರಿ ಮಳೆಯಿಂದ ಹಾನಿಯಾಗಿದೆ.
ಭಾರಿ ಮಳೆಯಿಂದ ಜಮ್ಮು ಕಾಶ್ಮೀರದ ಮೂಲಸೌಕರ್ಯಕ್ಕೂ ಭಾರಿ ಹಾನಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ -44 ಅನ್ನು ಹಾನಿಯಾಗಿರುವ ಕಾರಣದಿಂದ ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಅನೇಕ ರಸ್ತೆಗಳಿಗೆ ಹಾನಿಯಾಗಿದ್ದು, ವಾಹನ ಸಂಚಾರ ಬಂದ್ ಮಾಡಲಾಗಿದೆ.
ಜಮ್ಮು ವಿಭಾಗದಲ್ಲಿ ಹೈಸ್ಕೂಲ್ ಗಳನ್ನು ಆನ್ ಲೈನ್ ಮೋಡ್ ನಲ್ಲಿ ನಡೆಸಲು ಸಾಧ್ಯವೇ ಎಂಬುದರ ಬಗ್ಗೆ ಪರಿಶೀಲಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.