/newsfirstlive-kannada/media/media_files/2025/08/01/sharukh_khan_rani_mukharji-2025-08-01-20-40-33.jpg)
ನವದೆಹಲಿ: 2023ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು ಬಾಲಿವುಡ್ ನಟ ಶಾರುಖ್ ಖಾನ್, ವಿಕ್ರಾಂತ್ ಮ್ಯಾಸ್ಸೆ ಅವರಿಗೆ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಹಾಗೇ ಬಾಲಿವುಡ್ ನಟಿ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಒಲಿದು ಬಂದಿದೆ.
ಕಂದೀಲು ಕನ್ನಡದ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡು ಎಲ್ಲರನ್ನು ಬೆರಗುಗೊಳಿಸಿದೆ. ಏಕೆಂದರೆ ಸ್ಯಾಂಡಲ್ವುಡ್ನಲ್ಲಿ ಇತರೆ ಸಿನಿಮಾಗಳು ಪ್ರದರ್ಶನ ಕಂಡಿದ್ದವು. ಆದರೆ ಎಲ್ಲ ಸಿನಿಮಾಗಳಿಗಿಂತ ಅತ್ಯುತ್ತಮ ಕನ್ನಡ ಸಿನಿಮಾ ಎಂದು ಕಂದೀಲು ಪ್ರಶಸ್ತಿಯನ್ನು ಪಡೆದಿದೆ. ಇದು ಕಂದೀಲು ಚಿತ್ರತಂಡಕ್ಕೆ ದೊಡ್ಡ ಗೆಲುವು ಆಗಿದ್ದು ಸಿನಿಮಾ ತಂಡಕ್ಕೆ ಖುಷಿಯ ಸಂಗತಿ ಆಗಿದೆ.
71ನೇ ನ್ಯಾಷನಲ್ ಫಿಲಂ ಅವಾರ್ಡ್ಸ್
- ಶಾರುಖ್ ಖಾನ್- ಜವಾನ್ ಸಿನಿಮಾ- ಅತ್ಯುತ್ತಮ ನಟ ಪ್ರಶಸ್ತಿ
- ವಿಕ್ರಾಂತ್ ಮೆಸ್ಸೆ- 12th ಫೇಲ್ ಮೂವಿ- ಅತ್ಯುತ್ತಮ ನಟ ಪ್ರಶಸ್ತಿ
- ರಾಣಿ ಮುಖರ್ಜಿ- ಮಿಸಸ್ ಚಟರ್ಜಿ ವರ್ಸಸ್ ನಾರ್ವೆ ಚಿತ್ರ- ಅತ್ಯುತ್ತಮ ನಟಿ ಪ್ರಶಸ್ತಿ
- ಕಂದೀಲು- ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ
- ಸಂಗೀತ ನಿರ್ದೇಶಕ (ಹಿನ್ನೆಲೆ ಸಂಗೀತ): ಅನಿಮಲ್ (ಹಿಂದಿ)
- ಭಗವಂತ್ ಕೇಸರಿ- ಅತ್ಯುತ್ತಮ ತೆಲುಗು ಮೂವಿ
- ಶ್ಯಾಮ್ಚಿ ಆಯಿ- ಅತ್ಯುತ್ತಮ ಮರಾಠಿ ಚಿತ್ರ
- ಕಥಲ್-ಎ ಜಾಕ್ಫ್ರೂಟ್ ಮಿಸ್ಟರಿ- ಅತ್ಯುತ್ತಮ ಹಿಂದಿ ಚಿತ್ರ
- ಅತ್ಯುತ್ತಮ ಸಂಗೀತ ನಿರ್ದೇಶನ- ವಾಥಿ (ತಮಿಳು)
- ಸನ್ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ- ಅತ್ಯುತ್ತಮ ಸ್ಕ್ರಿಪ್ಟ್
- ದಿ ಕೇರಳ ಸ್ಟೋರಿ- ಸುದೀಪ್ತೋ ಸೇನ್ ಅತ್ಯುತ್ತಮ ನಿರ್ದೇಶಕ
- ಅತ್ಯುತ್ತಮ ಮಲಯಾಳಂ ಸಿನಿಮಾ- ಉಲ್ಲೋಳುಕ್ಕು
- ಅತ್ಯುತ್ತಮ ಛಾಯಾಗ್ರಹಣ: ದಿ ಕೇರಳ ಸ್ಟೋರಿ (ಹಿಂದಿ) (ಪ್ರಶಾಂತನು ಮೊಹಪಾತ್ರ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ