/newsfirstlive-kannada/media/media_files/2025/09/05/tumakuru-lovers-case-2025-09-05-16-56-22.jpg)
ಪ್ರೀತಿಸಿ ಅಂತರ್ ಜಾತಿ ವಿವಾಹವಾದ ಸುಶ್ಮಿತಾ, ಯತೀಶ್
ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾದ ಯುವತಿಗೆ ಈಗ ಜೀವ ಭಯ ಶುರುವಾಗಿದೆ. ಯುವತಿಯ ಪೋಷಕರು ಯುವಕನ ಮನೆಗೆ ನುಗ್ಗಿ ದಾಂದಲೆ, ಕೊಲೆ ಯತ್ನ ನಡೆಸಿದ ಆರೋಪ ಕೇಳಿ ಬಂದಿದೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಮರ್ಯಾದ ಕೊಲೆಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಯುವತಿಯ ಪೋಷಕರಿಗೆ ಹೆದರಿ ಯುವಕನ ಕುಟುಂಬ ಊರು ಬಿಟ್ಟಿದೆ. ಕೊಲೆ ಮಾಡೋದಾಗಿ ಗ್ರಾಮದಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿ ಹೊಂಚು ಹಾಕಿರುವ ಆರೋಪ ಕೇಳಿ ಬಂದಿದೆ .ಜೀವ ಭಯದಿಂದ ತುಮಕೂರಿನ ಎಸ್ಪಿ ಕಚೇರಿಯಲ್ಲೆ ನವಜೋಡಿ ಬೀಡುಬಿಟ್ಟಿದೆ. ರಕ್ಷಣೆ ಕೋರಿ ಎಸ್ಪಿ ಅಶೋಕ್ ಕೆ. ವಿ. ಅವರಿಗೆ ನವಜೋಡಿಗಳು ದೂರು ಸಲ್ಲಿಸಿದ್ದಾರೆ.
ಮನೆಗೆ ನುಗ್ಗಿ ಕೊಲೆಗೆ ಯತ್ನ!
ಇಬ್ಬರು ಪ್ರೇಮಿಗಳು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೂಲದವರು. ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಾತ್ರಿಕೆಹಾಳ್ ಗ್ರಾಮದ ಸುಶ್ಮಿತಾ (19), ತೀರ್ಥಪುರ ಗ್ರಾಮದ ಯತೀಶ್ (24), ಇಬ್ಬರು ಒಂದು ವರ್ಷದಿಂದ ಪ್ರೀತಿಸಿ, ಇದೇ ಸೆಪ್ಟೆಂಬರ್ 1ರಂದು ದಾಬಸ್‌ಪೇಟೆ ಬಳಿಯ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಯುವತಿ ಪೋಷಕರು ಪೊಲೀಸ್ ಠಾಣೆಗೆ ಕಿಡ್ನಾಪ್ ದೂರು ನೀಡಿದ ಬಳಿಕ ಪೊಲೀಸರು ಬುಲಾವ್ ನೀಡಿ ಚಿಕ್ಕನಾಯಕನಹಳ್ಳಿ ಠಾಣೆಗೆ ಕರೆಸಿ ರಾಜೀಸಂಧಾನ ನಡೆಸಿದ್ದಾರೆ. ಬಳಿಕ ಪೋಷಕರು ಮುಚ್ಚಳಿಕೆ ಪತ್ರ ಬರೆದು ಕೊಟ್ಟ ನಂತರ ಯುವ ಜೋಡಿ ಒಂದಾಗಿದ್ದಾರೆ. ನಂತರ ಪೊಲೀಸರ ಸಲಹೆ ಮೇರೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವಂತೆ ಸೂಚನೆ ಕೂಡ ಸಿಕ್ಕಿತ್ತು, ಆದ್ರೆ ಇದೆಲ್ಲವನ್ನು ಬಿಟ್ಟು ಮನೆಗೆ ಬಂದ ಯುವ ಜೋಡಿಗೆ ಸುಶ್ಮಿತಾ ಪೋಷಕರಿಂದ ಈ ಮದುವೆಗೆ ವಿರೋಧ ವ್ಯಕ್ತವಾಗಿದೆ. ಯತೀಶ್ ಕುಟುಂಬದವರಿಗೂ ಜೀವ ಬೆದರಿಕೆ ಹಾಕಲಾಗಿದೆಯಂತೆ.
ರಕ್ಷಣೆ ಕೋರಿ ತುಮಕೂರು ಎಸ್‌ಪಿ ಕೆ.ವಿ.ಅಶೋಕ್‌ಗೆ ಮನವಿ ಸಲ್ಲಿಕೆ.
ತೋಟದ ಪೊದೆಯಲ್ಲಿ ಅವಿತು ಜೀವ ಉಳಿಸಿಕೊಂಡ ಜೋಡಿ !
ಸೆ.3ರ ಬುಧವಾರ ರಾತ್ರಿ ಸುಮಾರು 50-60 ಜನರ ಗುಂಪು ಯತೀಶ್ ಮನೆಗೆ ನುಗ್ಗಿ ದಾಂಧಲೆ ನಡೆಸಿ ಕೊಲೆಯತ್ನ ನಡೆಸಿದ್ದಾರೆ. ಈ ಘಟನೆಗೆ ಹೆದರಿದ ಯತೀಶ್ ಪೋಷಕರು ಊರು ಬಿಟ್ಟು ತಲೆ ಮರೆಸಿಕೊಂಡ ತೋಟದ ಪೊದೆಗಳಲ್ಲಿ ಅವಿತುಕೊಂಡು ರಾತ್ರಿಯಿಡೀ ಕಾಲ ಕಳೆಯ ಬೇಕಾಯಿತು. ನಮಗೆ ರಕ್ಷಣೆ ಕೋರಿ ಯತೀಶ್ ತಂದೆ ಮಕ್ಕಳೊಂದಿಗೆ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ರಕ್ಷಣೆ ಕೊರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.