/newsfirstlive-kannada/media/media_files/2025/09/08/sunroof-car-accident-2025-09-08-12-37-02.jpg)
ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕನ ತಲೆಗೆ ಹೊಡೆದ ಕಬ್ಬಿಣದ ಕಂಬಿ
ಕಾರ್ ಸನ್ ರೂಫ್ ನಲ್ಲಿ ನಿಂತಿದ್ದ ಬಾಲಕನಿಗೆ ಗಂಭೀರ ಗಾಯವಾಗಿದೆ. ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಈ ಘಟನೆ ನಡೆದಿದೆ. ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ಕಾರ್ ನಲ್ಲಿ ಕುಟುಂಬ ಹೊರಟಿತ್ತು. ಮಗು ಕಾರ್ ನ ಸನ್ ರೂಫ್‌ನ ಹೊರಗೆ ತಲೆ ಹಾಕಿ ನಿಂತಿತ್ತು. ಆದರೇ, ಜಿಕೆವಿಕೆ ಬಳಿ ರಸ್ತೆಗೆ ಅಡ್ಡಲಾಗಿ ಎತ್ತರದ ವಾಹನಗಳು ರಸ್ತೆ ಪ್ರವೇಶಿಸದಂತೆ ಕಬ್ಬಿಣದ ಕಂಬಿಯನ್ನು ರಸ್ತೆಯ ಮೇಲೆ ಹಾಕಲಾಗಿತ್ತು. ವೇಗವಾಗಿ ಬಂದ ಕಾರ್ ನ ಚಾಲಕ, ರಸ್ತೆಯಲ್ಲಿರುವ ಕಬ್ಬಿಣದ ಕಂಬಿಯನ್ನು ನೋಡದೇ ಚಲಾಯಿಸಿದ್ದಾರೆ. ಮಗು ಸನ್ ರೂಫ್ ನಲ್ಲಿ ತಲೆಯನ್ನು ಹೊರಗೆ ಹಾಕಿ ನಿಂತಿದ್ದರಿಂದ ತಲೆಗೆ ಮೇಲ್ಬಾಗದಲ್ಲಿದ್ದ ಕಬ್ಬಿಣದ ಕಂಬಿ ಹೊಡೆದಿದೆ. ತಕ್ಷಣವೇ ಬಾಲಕ ಕೆಳಗೆ ಕುಸಿದು ಬಿದ್ದಿದ್ದಾನೆ. ಮಗುವಿನ ತಲೆಗೆ ಗಂಭೀರ ಗಾಯವಾಗಿದೆ.
ಈ ಘಟನೆಯ ದೃಶ್ಯ ಹಿಂಭಾಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಈ ಬಗ್ಗೆ ಬೆಂಗಳೂರಿನ ಉತ್ತರ ವಿಭಾಗದ ಸಂಚಾರ ಪೊಲೀಸರು ಈಗ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಥರ್ಡ್ ಐ ಟ್ವೀಟರ್ ಅಕೌಂಟ್ ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
Next time when you leave your kids popping their heads out, think once again! pic.twitter.com/aiuHQ62XN1
— ThirdEye (@3rdEyeDude) September 7, 2025
ಇದು ಸನ್ ರೂಫ್ ಹೊಂದಿರುವ ಕಾರ್ ಮಾಲೀಕರಿಗೆ ಎಚ್ಚರಿಕೆಯ ಗಂಟೆ. ಕಾರ್ ಸನ್ ರೂಫ್ ನಲ್ಲಿ ಎಂಜಾಯ್ ಮಾಡಲೆಂದು ಮಕ್ಕಳನ್ನು ನಿಲ್ಲಿಸುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ರಸ್ತೆಗಳಲ್ಲಿ ಈ ರೀತಿಯ ಕಬ್ಬಿಣದ ಕಂಬಿ, ಗೇಟ್ ಗಳು ಇವೆಯೇ ಹೇಗೆ ಎಂಬ ಬಗ್ಗೆ ಗಮನಿಸಬೇಕು. ಕೆಲವೊಂದು ಕಡೆ ಮರದ ಕೊಂಬೆಗಳು ಕೂಡ ಸನ್ ರೂಫ್ ನಲ್ಲಿ ನಿಂತಿರುವ ಮಕ್ಕಳ ತಲೆಗೆ ಹೊಡೆಯುವ ಸಾಧ್ಯತೆ ಇರುತ್ತೆ. ಹೀಗಾಗಿ ಸನ್ ರೂಫ್ ನಲ್ಲಿ ಮಕ್ಕಳನ್ನು ನಿಲ್ಲಿಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಲೇಬೇಕು. ಇಲ್ಲದಿದ್ದರೇ, ಸನ್ ರೂಫ್ ಮಕ್ಕಳ ಪ್ರಾಣಕ್ಕೆ ಕುತ್ತು ತರುತ್ತೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೆಲವು ಪೋಷಕರಂತೂ ಈಗ ಸನ್ ರೂಫ್ ಕಾರ್ ಗಳನ್ನೇ ಖರೀದಿಸಲ್ಲ. ಇನ್ನೂ ಬೆಂಗಳೂರು ಹಾಗೂ ರಾಜ್ಯದ ಪೊಲೀಸರು ಕೂಡ ಸನ್ ರೂಫ್ ನಲ್ಲಿ ಮಕ್ಕಳನ್ನು ನಿಲ್ಲಿಸಿ ಜಾಲಿ ರೈಡ್ ಹೋಗುವ ಕಾರ್ ಮಾಲೀಕರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ. ಹೀಗಾಗಿ ಕೇಸ್ ಸಹವಾಸವೇ ಬೇಡ ಅಂತ ಪೋಷಕರು ಈಗ ಸನ್ ರೂಫ್ ಕಾರ್ ಖರೀದಿಸುವುದನ್ನು ನಿಲ್ಲಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.