/newsfirstlive-kannada/media/media_files/2025/09/15/jwala-gutta-milk-donation-2025-09-15-16-08-51.jpg)
ಎದೆ ಹಾಲು ಅನ್ನು ದಾನವಾಗಿ ನೀಡಿದ ಜ್ವಾಲಾ ಗುಟ್ಟಾ
ಜ್ವಾಲಾ ಗುಟ್ಟಾ ಭಾರತದ ಬ್ಯಾಡ್ಮಿಂಟನ್ ಲೋಕದ ಧ್ರುವತಾರೆ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಢಿಸಿದ್ದಾರೆ. ಈಗ ಮತ್ತೊಂದು ಮಾನವೀಯ ಕಾರ್ಯದ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಜ್ವಾಲಾ ಗುಟ್ಟಾ ಮಗುವಿಗೆ ತಾಯಿಯಾಗಿದ್ದರು. ಮಗುವಿನ ನಾಮಕರಣಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಹೈದರಾಬಾದ್‌ಗೆ ಬಂದಿದ್ದರು. ನಟ ವಿಷ್ಣು ವಿಶಾಲ್ ಅವರನ್ನು ವಿವಾಹವಾಗಿದ್ದಾರೆ.
ಜ್ವಾಲಾ ಗುಟ್ಟಾ ತಮ್ಮ ಎದೆಹಾಲು ಅನ್ನು ನವಜಾತಶಿಶುಗಳು, ಗಂಭೀರ ಸ್ಥಿತಿಯಲ್ಲಿರುವ ನವಜಾತ ಶಿಶುಗಳಿಗೆ ನೀಡಿದ್ದಾರೆ. ಜೊತೆಗೆ ಅವಧಿಗೂ ಮುನ್ನವೇ ಹುಟ್ಟಿದ ಶಿಶುಗಳಿಗೆ ತಮ್ಮ ಎದೆ ಹಾಲು ನೀಡಿದ್ದಾರೆ. ಜ್ವಾಲಾ ಗುಟ್ಟಾ ಇದುವರೆಗೂ 30 ಲೀಟರ್ ಎದೆ ಹಾಲು ಅನ್ನು ನವಜಾತ ಶಿಶುಗಳಿಗೆ ಹಾಗೂ ಅಗತ್ಯವಿರುವ ಶಿಶುಗಳಿಗೆ ನೀಡಿದ್ದಾರೆ.
ಎದೆ ಹಾಲು, ಜೀವವನ್ನು ಉಳಿಸುತ್ತೆ. ದಾನಿಗಳ ಎದೆ ಹಾಲು ಲೈಫ್ ಚೇಜಿಂಗ್ ಆಗಬಹುದು. ನೀವು ಎದೆ ಹಾಲು ಅನ್ನು ಡೋನೇಟ್ ಮಾಡಿದರೇ, ಅಗತ್ಯ ಇರುವವರ ಪಾಲಿಗೆ ನೀವು ಹೀರೋಗಳಾಗುತ್ತೀರಿ ಎಂದು ಜ್ವಾಲಾ ಗುಟ್ಟಾ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಜ್ವಾಲಾ ಗುಟ್ಟಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳಿಗೆ ಎದೆ ಹಾಲು ಅನ್ನು ದಾನವಾಗಿ ನೀಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಜ್ವಾಲಾ ಗುಟ್ಟಾ ಶಿಶುಗಳಿಗೆ ತಮ್ಮ ಎದೆ ಹಾಲು ಅನ್ನು ದಾನವಾಗಿ ನೀಡುತ್ತಿದ್ದಾರೆ. ತಾಯಿ ಇಲ್ಲದ ಅನಾಥ ಶಿಶುಗಳಿಗೆ ಎದೆ ಹಾಲು ಅನ್ನು ನೀಡಿ ಜ್ವಾಲಾ ಗುಟ್ಟಾ ಅನಾಥ ಶಿಶುಗಳ ಪಾಲಿಗೆ ತಾಯಿಯಾಗಿದ್ದಾರೆ.
ಜ್ವಾಲಾ ಗುಟ್ಟಾ ಅವರ ಉದಾತ್ತ ಕಾರ್ಯಕ್ಕೆ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜ್ವಾಲಾ ಗುಟ್ಟಾ, ಬಹಳಷ್ಟು ಮಕ್ಕಳಿಗೆ ತಾಯಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಕೊಂಡಾಡುತ್ತಿದ್ದಾರೆ.
ಇದು ಗ್ರೇಟ್ ಕೊಡುಗೆ. ಬಹಳಷ್ಟು ಜನರು ಒಳ್ಳೆಯ ಕೆಲಸ ಮಾಡಲು ಮುಕ್ತವಾಗಿರಲ್ಲ. ಜ್ವಾಲಾ ಗುಟ್ಟಾ ಕೊಡುಗೆ ನೇರವಾಗಿ ಬಹಳಷ್ಟು ಶಿಶುಗಳಿಗೆ ಅನುಕೂಲವಾಗುತ್ತೆ ಎಂದು ಒಬ್ಬರು ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
Warm Greetings To All !
— AMIRTHAM breastmilk donation (@amirtham_bm) August 19, 2025
“Every ounce you give is a heartbeat of hope for a baby in need”
We are happy to share that #amirthambreastmilkdonation have successfully collected 70 milk packets ( 14500 ml ) from our new donor mother Jwala Gutta @jwalaguttapic.twitter.com/RbXAXUJx4f
ಎದೆ ಹಾಲಿನಲ್ಲಿ ಡಿಎಚ್‌ಎ ಅಂಶ ಇದೆ. ಇದು ಪೌಡರ್ ಅಥವಾ ಇತರೆ ಡೈರಿ ಮಿಲ್ಕ್ ನಲ್ಲಿ ಸಿಗಲ್ಲ. ಶಿಶುಗಳ ದೈಹಿಕ ಹಾಗೂ ನರ ಬೆಳವಣಿಗೆಗೆ ಡಿಎಚ್‌ಎ ಬೇಕು. ಈ ಉದಾತ್ತ ಕಾರ್ಯ ಮಾಡುತ್ತಿರುವುದಕ್ಕೆ ನಿಮಗೆ ಧನ್ಯವಾದಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Jwala Gutta - one of India’s finest badminton doubles players . She is married to actor Vishnu Vishal . She serves the nation with medals, and now serves humanity with milk. pic.twitter.com/QTzK39kLxG
— AMIRTHAM breastmilk donation (@amirtham_bm) August 19, 2025
ಅದ್ಭುತ. ..! ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ, ಜ್ವಾಲಾ ಗುಟ್ಟಾ! ಯಾವಾಗಲೂ ಚಾಂಪಿಯನ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ನೀವು ಸ್ಪೂರ್ತಿ, ಮೇಡಮ್, ಗೋಲ್ಡನ್ ಹಾರ್ಟ್ ಇರುವ ಅಥ್ಲೀಟ್ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.