/newsfirstlive-kannada/media/media_files/2026/01/10/sushma-committs-suicide-2026-01-10-12-18-07.jpg)
ಮಗು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ ಸುಷ್ಮಾ!
ತೆಲಂಗಾಣದ ಹೈದರಾಬಾದ್‌್ನ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 27 ವರ್ಷದ ಮಹಿಳೆಯೊಬ್ಬರು ತನ್ನ 10 ತಿಂಗಳ ಮಗನಿಗೆ ವಿಷಪ್ರಾಶನ ಮಾಡಿ ಕೊಂದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಸುಷ್ಮಾ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಯಶವಂತ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ 10 ತಿಂಗಳ ಮಗ ಯಶವರ್ಧನ್ ರೆಡ್ಡಿ ಇದ್ದ. ಕುಟುಂಬ ಸದಸ್ಯರ ಪ್ರಕಾರ, ಕಳೆದ ಕೆಲವು ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು.
ಸಮಾರಂಭವೊಂದಕ್ಕೆ ಶಾಪಿಂಗ್ ಮಾಡುವ ನೆಪದಲ್ಲಿ, ಸುಷ್ಮಾ ತನ್ನ ತಾಯಿ ಲಲಿತಾ ಅವರ ಮನೆಗೆ ಹೋಗಿದ್ದರು. ಅಲ್ಲಿದ್ದಾಗ, ಅವರು ಮತ್ತೊಂದು ಕೋಣೆಗೆ ಹೋಗಿ, ತನ್ನ ಶಿಶುವಿಗೆ ವಿಷಪ್ರಾಶನ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ರಾತ್ರಿ 9:30 ರ ಸುಮಾರಿಗೆ, ಯಶವಂತ್ ರೆಡ್ಡಿ ತನ್ನ ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗಿದಾಗ ಮಲಗುವ ಕೋಣೆಯ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡರು. ಬಾಗಿಲು ಒಡೆದು ನೋಡಿದಾಗ, ಅವರ ಪತ್ನಿ ಮತ್ತು ಮಗ ಮೃತಪಟ್ಟಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ತನ್ನ ಮಗಳು ಮತ್ತು ಮೊಮ್ಮಗ ಮೃತಪಟ್ಟಿರುವುದನ್ನು ನೋಡಿ ಸಹಿಸಲಾಗದೆ ಲಲಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us