ಹನಿಮೂನ್​ಗೆ ಹೋದ ಹೆಂಡತಿಗೆ ಕಾದಿತ್ತು ಶಾಕ್.. ಮಧುಚಂದ್ರದಲ್ಲಿ ಗಂಡಂದಿರು ನಾಪತ್ತೆ! ಗಂಡ ಮಾಡಿದ್ದೇನು ಗೊತ್ತಾ?

ಹನಿಮೂನ್‌ಗೆ ಹೋದ ಹೆಂಡತಿಗೆ ಶಾಕ್ ಕಾದಿತ್ತು. ಹನಿಮೂನ್ ನಲ್ಲಿ ಇಬ್ಬರು ನವ ವಿವಾಹಿತ ಯುವತಿಯರ ಗಂಡಂದಿರು ರೆಸಾರ್ಟ್ ನಲ್ಲಿ ನಾಪತ್ತೆಯಾಗಿದ್ದರು. 2 ರಾತ್ರಿ ನಾಪತ್ತೆಯಾಗಿದ್ದರು. ಬೆಂಗಳೂರಿಗೆ ವಾಪಸ್ ಬಂದ ಹೆಂಡತಿಗೆ ಶಾಕ್ ಕಾದಿತ್ತು. ಗಂಡನ ಅಸಲಿ ಮುಖ ಹೆಂಡತಿಗೆ ಲ್ಯಾಪ್ ಟಾಪ್ ನಲ್ಲಿ ಗೊತ್ತಾಗಿತ್ತು.

author-image
Chandramohan
divorece case01
Advertisment
  • ಹನಿಮೂನ್ ಗೆ ಹೋದ ಜೋಡಿಯ ಪೈಕಿ ಇಬ್ಬರು ಗಂಡಂದಿರು ನಾಪತ್ತೆ!
  • ಹೆಂಡತಿಯರನ್ನು ರೂಮುನಲ್ಲಿ ಬಿಟ್ಟು ಗಂಡಂದಿರು ಹೋಗಿದ್ದೆಲ್ಲಿಗೆ?
  • ಗಂಡನ ಲ್ಯಾಪ್ ಟಾಪ್ ನಲ್ಲಿ ಹೆಂಡತಿಗೆ ಹನಿಮೂನ್ ರಹಸ್ಯ ಬಯಲು

ಈ ಜನರೇಷನ್​ನಲ್ಲಿ ವಿಚ್ಛೇದನಗಳು ಆಗ್ತಿರೋದು ಕಾಮನ್..  ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರ ತನಕ ಡಿವೋರ್ಸ್​ ಕೇಸ್​ಗಳ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಆದ್ರೆ  ಡಿವೋರ್ಸ್​​ ಪಡೆಯೋದಕ್ಕೆ ಇರೋ ಕಾರಣಗಳು ಕೆಲವು ಅಚ್ಚರಿ ಹುಟ್ಟಿಸಿದ್ರೆ, ಇನ್ನೂ ಕೆಲವು ಹಿಂಗೂ ಇರುತ್ತಾ ಅಂತ ಅನಿಸಿಬಿಡುತ್ತೆ..  ಇವತ್ತು ನಾವು ಹೇಳೋ ಡಿವೋರ್ಸ್ ಕತೆ ಕೇಳ್ಬಿಟ್ರೆ ನೀವು ಕನಸಲ್ಲೂ ಬೆಚ್ಚಿ ಬಿದ್ರೂ ಬೀಳಬಹುದು.. 
 ಸಾಫ್ಟವೇರ್ ಇಂಜಿನಿಯರ್​.. ಒಳ್ಳೆ ಅಧಿಕಾರ ಇರೋ ಹಣ ಅಂತಸ್ತು ಇರೋ ಹುಡುಗನನ್ನೇ ಆಕೆ ವರಿಸಿದ್ಳು. ಒಂದರ್ಥದಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚೋ ಫ್ಯಾಮಿಲಿ ಅನ್ಬಹುದು.. ಅಂಥ ಫ್ಯಾಮಿಲಿಗೆ ಈ ಸಾಫ್ಟ್​ವೇರ್ ಹುಡುಗಿ ಸೊಸೆಯಾಗಿದ್ಳು. ಮದುವೆಯಾದ್ಮೆಲೇ ಇನ್ನೇನು ಹನಿಮೂನ್​ ತಾನೆ.. ಎಲ್ಲರ ತರಹ ಈ ಜೋಡಿ ಕೂಡ ಮಧುಚಂದ್ರಕ್ಕೆ ಪ್ಲಾನ್ ಮಾಡಿದೆ.  ಆದ್ರೆ ಈ ಟೈಮ್​ನಲ್ಲಿ  ಸಾಫ್ಟ್​ವೇರ್ ಎಂಜಿನಿಯರ್ ಗಂಡ್, ತನ್ನ ಗೆಳೆಯನದ್ದು ರಿಸೇಂಟ್ ಆಗಿ ಮದ್ವೆಯಾಗಿದೆ.. ನಾವೆಲ್ಲ ಒಟ್ಟಿಗೆ ಹೋಗೋಣ ಅಂದಿದ್ದ.. ಇನ್ನೇನು ಗಂಡನ ಫ್ರೆಂಡ್ ಅವನ ಹೆಂಡ್ತಿ ಸೇರಿ ನಾಲ್ಕು ಜನ ಹನಿಮೂನ್​ಗೆ ಹೋಗಿದ್ದಾರೆ
ಮಧುಚಂದ್ರದಲ್ಲಿ ಗಂಡಂದಿರು ನಾಪತ್ತೆ!
ಹನಿಮೂನ್​ಗೆ ಒಂದೇ ರೆಸಾರ್ಟ್ ನಲ್ಲಿ  ಅಕ್ಕ ಪಕ್ಕ ರೂಮ್​.. ಹೆಂಡ್ತಿಯರಿಬ್ಬರು ಮಧುಚಂದ್ರದ ಕನಸಿನಲ್ಲಿ ತೇಲ್ತಿದ್ರು. ಹೀಗಿರುವಾಗ ಈ ಇಬ್ಬರು ಗಂಡದಿರು ಸ್ವಲ್ಪ ವಾಕ್ ಹೋಗಿ ಬರ್ತೀವಿ ಅಂತ ಆಚೆ ಹೋಗಿದ್ರು. ಆದ್ರೆ ವಾಕ್ ಅಂತ ಹೋದ ಪತಿರಾಯರು ರಾತ್ರಿ 12 ಗಂಟೆಯಾದ್ರೂ ವಾಪಸ್ ರೆಸಾರ್ಟ್​​ಗೆ ಬಂದಿಲ್ಲ.. ಹೀಗಾಗಿ ಇಬ್ಬರು ಹೆಂಡ್ತಿಯರು ಎಲ್ಲ ಕಡೆ ಹುಡುಕಾಡಿದ್ದಾರೆ.. ಫೋನ್ ಮಾಡಿದ್ರೆ ಫೋನ್ ಕೂಡ ಸ್ವಿಚ್ಚ್ ಆಫ್.. ಕೊನೆಗೆ ಫೋನ್​ ಮಾಡಿ ಮಾಡಿ ಕೂತಲ್ಲೇ ತೂಕಡಿಸಿದ್ದಾರೆ. ಬೆಳಗಿನ ಜಾವ ಎದ್ದು ಕಾಲ್ ಮಾಡ್ದಾಗ ಫೋನ್ ಆನ್ ಆಗಿತ್ತು.. ಎಲ್ಲೋಗಿದ್ರಿ ಅಂತ ಕೇಳಿದ್ರೆ ನಾವು ರೆಸಾರ್ಟ್​ನಲ್ಲೇ ಇದ್ವಿ ಅಂತ ಗಂಡ ಹೇಳಿದ್ದ.  ಇದಾದ ಮೇಲೆ ಮರು ದಿನ ರಾತ್ರಿ ಸೇಮ್ ಇಬ್ಬರು ಏಕಾಏಕಿ ನಾಪತ್ತೆ.. ಎಲ್ಲೋದ್ರು ಅಂತ ಗೊತ್ತಿಲ್ಲ.. ಕೊನೆಗೆ ಸಾಫ್ಟ್​ವೇರ್ ಹುಡುಗಿ ಗಂಡನ ಜೊತೆ ಜಗಳ ಮಾಡಿ ಹನಿಮೂನ್​ ಕ್ಯಾನ್ಸಲ್ ಮಾಡಿ ವಾಪಸ್ ಊರಿಗೆ ಬಂದಿದ್ರು. 


ಗಂಡನ ಲ್ಯಾಪ್​ಟಾಪ್​ನಲ್ಲಿತ್ತು ಹನಿಮೂನ್​ ರಹಸ್ಯ!
 ಊರಿಗೆ ಬಂದ್ಮೆಲೆ ಗಂಡ ಯಥಾಪ್ರಕಾರ ಕೆಲಸಕ್ಕೆ ಹೋಗಿದ್ದ.. ಈ ಟೈಮ್​ನಲ್ಲಿ ಗಂಡನ ಲ್ಯಾಪ್​ಟಾಪ್ ಹೆಂಡ್ತಿ ಕಣ್ಣಿಗೆ ಬಿದ್ದಿತ್ತು.. ನೋಡೋಣ ಅಂತ ಸುಮ್ನೆ ಕುತೂಹಲಕ್ಕೆ ಚೆಕ್​ ಮಾಡಿದ್ರೆ, ಆಕೆ ಗಂಡ ಬರೀ ಹುಡುಗರ ಜೊತೆಯಲ್ಲಿ ದೈಹಿಕ ಸಂಪರ್ಕ ಬೆಳೆಸಿರೋ ವಿಡಿಯೋಗಳಿದ್ವು.. ಆಗ್ಲೇ ನೋಡಿ ಹೆಂಡ್ತಿಗೆ ಗೊತ್ತಾಗಿದ್ದು, ತನ್ನ ಗಂಡ ಯಾರ ಜೊತೆಗೆ ಹನಿಮೂನ್​ ಹೋಗಿದ್ದ ಮತ್ತು ಆ ರಾತ್ರಿ ಒಟ್ಟಿಗೆ ಇರಲಿಲ್ಲ ಅಂತ.. ಅಂದ್ರೆ ಆ ಇಬ್ಬರು ಹುಡುಗರು ಸಲಿಂಗಕಾಮಿಗಳಾಗಿದ್ರು ಅನ್ನೋದು ಆಗ ಹೆಂಡ್ತಿಗೆ ಅರಿವಾಗಿತ್ತು. ಹನಿಮೂನ್ ನ ರಾತ್ರಿ ನಾಪತ್ತೆಯಾಗಿದ್ದ ಗಂಡ, ತನ್ನ ಸ್ನೇಹಿತನ ಜೊತೆ ರಾತ್ರಿ ಎಲ್ಲ ಸಲಿಂಗಕಾಮದಲ್ಲಿ ತೊಡಗಿದ್ದ. ಅದರ ಸಾಕ್ಷಿಯಾಗಿ ಪೋಟೋ, ವಿಡಿಯೋಗಳು ಗಂಡನ ಲ್ಯಾಪ್ ಟಾಪ್ ನಲ್ಲೇ ಹೆಂಡತಿಗೆ ಪತ್ತೆಯಾಗಿದ್ದವು. ಹೆಂಡತಿಯನ್ನು ಆಕೆಯ ರೂಮುನಲ್ಲಿ ಬಿಟ್ಟು ರೆಸಾರ್ಟ್ ನಿಂದ ಹೊರ ಹೋದ ಗಂಡ, ತನ್ನ ಸ್ನೇಹಿತನ ಜೊತೆ ಸಲಿಂಗಕಾಮದಲ್ಲಿ ಮಿಂದೆದ್ದಿದ್ದ.  ಆಗ ಈ ಹೆಂಡ್ತಿ ಗಂಡನಿಂದ ಡಿವೋರ್ಸ್​ ಪಡೆದಿದ್ಳು.

divorece case03



ಇಂಥಾದೊಂದು ಡಿವೋರ್ಸ್​ ಕಹಾನಿಯನ್ನ  family dispute advocate B N Nagaraja ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ..  ಆಲ್​ರೌಂಡರ್ ಅಕ್ಷಯ್​ ಮಾಡಿದ ಇಂಟರ್​ವ್ಯೂ ನಲ್ಲಿ  ಈ ವಿಚಿತ್ರ ವಿಚ್ಛೇದನ ಬಗ್ಗೆ ಹೇಳಿದ್ದಾರೆ.

ವರದಿ- ಮರಲಿಂಗ ಎಂ.ಎಚ್‌.,  ನ್ಯೂಸ್ ಫಸ್ಟ್. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

divorce cases in karnataka
Advertisment