/newsfirstlive-kannada/media/media_files/2025/09/06/monkey-kidnap-child-in-up-2025-09-06-12-21-50.jpg)
2 ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿ ನೀರಿನ ಡ್ರಮ್ ಗೆ ಹಾಕಿದ ಕೋತಿಗಳು!
ಕೋತಿಗಳನ್ನು ನಾವು ಅಂಜನೇಯನ ಪ್ರತಿರೂಪ ಎಂದೇ ನಂಬುತ್ತೇನೆ. ವಾನರ ಸೇನೆಯನ್ನು ಪೂಜೆ ಮಾಡುತ್ತೇವೆ. ಆದರೇ, ವಾನರ ಸೇನೆಯೇ 2 ತಿಂಗಳ ನವಜಾತ ಶಿಶುವನ್ನು ಕೊಂದಿವೆ !. ಇದು ಅಚ್ಚರಿಯಾದರೂ ಸತ್ಯ. 2 ತಿಂಗಳ ನವಜಾತ ಶಿಶುವನ್ನು ಮನೆಯಲ್ಲಿ ಮಲಗಿಸಿ, ಪೋಷಕರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದರು. ಆದರೇ, ಮನೆ ಬಳಿ ಬಂದ ಕೋತಿಗಳ ಸೈನ್ಯ, 2 ತಿಂಗಳ ನವಜಾತ ಶಿಶುವನ್ನು ಎತ್ತಿಕೊಂಡು ಹೋಗಿ ಮನೆಯ ಟೇರೇಸ್ ನಲ್ಲಿದ್ದ ನೀರಿನ ಡ್ರಮ್ ನಲ್ಲಿ ಮುಳುಗಿಸಿ ಸಾಯಿಸಿದ ಅಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಸುರ್ಜಾಪುರ ಗ್ರಾಮದಲ್ಲಿ ಈ ಅಘಾತಕಾರಿ ಘಟನೆ ನಡೆದಿದೆ.
ನವಜಾತ ಶಿಶುವಿನ ತಂದೆ, ತಾಯಿ ಮಗುವನ್ನು ಮನೆಯ ವರಾಂಡದಲ್ಲಿದ್ದ ಕಾಟ್ ಮೇಲೆ ಮಲಗಿಸಿದ್ದರು. ಈ ವೇಳೆ ಮನೆ ಬಳಿ ಬಂದ ಕೋತಿಗಳು ಮಗುವನ್ನು ಎತ್ತಿಕೊಂಡು ಹೋಗಿ, ಮನೆಯ ಟೇರೇಸ್ ನಲ್ಲಿ ಇದ್ದ ನೀರಿನ ಡ್ರಮ್ ಗೆ ಹಾಕಿವೆ. ಇದರಿಂದ ಮಗು ನೀರಿನ ಡ್ರಮ್ ನಲ್ಲಿ ಪ್ರಾಣ ಬಿಟ್ಟಿದೆ.
ಇತ್ತ ಮನೆಯ ವರಾಂಡದ ಕಾಟ್ ಮೇಲೆ ಮಲಗಿಸಿದ್ದ ಮಗು ಕಾಣದೇ ಹೋಗಿದ್ದರಿಂದ ತಂದೆ, ತಾಯಿ ಆತಂಕಗೊಂಡಿದ್ದಾರೆ. ಮನೆಯಲ್ಲೆಲ್ಲಾ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಮಗು ಪತ್ತೆಯಾಗಿಲ್ಲ. ಕೊನೆಗೆ ಮನೆಯ ಟೇರೇಸ್ ನಲ್ಲಿದ್ದ ಡ್ರಮ್ ನಲ್ಲಿ ಹೋಗಿ ನೋಡಿದ್ದಾರೆ. ಈ ವೇಳೆ ಡ್ರಮ್ ನಲ್ಲಿ ಮಗು ಪತ್ತೆಯಾಗಿದೆ. ತಕ್ಷಣವೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಾಗಲೇ, ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಸಡನ್ ಆಗಿ ಕೋತಿಗಳಿಂದಾಗಿ ಮಗು ಸಾವನ್ನಪ್ಪಿದೆ. ಇದರಿಂದ ಇಡೀ ಕುಟುಂಬ ನೋವಿನಲ್ಲಿ ಮುಳುಗಿದೆ. ಇದು ದಂಪತಿಯ ಮೊದಲ ಮಗು.
ಸೀತಾಪುರ ಜಿಲ್ಲೆಯ ಸುರ್ಜಾಪುರ ಗ್ರಾಮದಲ್ಲಿ ಮೊದಲಿನಿಂದಲೂ ಕೋತಿಗಳ ಹಾವಳಿ ಇದೆ. ಮಗು ಸಾವಿನಿಂದಾಗಿ ಇಡೀ ಗ್ರಾಮದಲ್ಲಿ ಶೋಕ ಆವರಿಸಿದೆ. ಕೋತಿ ಹಾವಳಿ ತಡೆಗಟ್ಟಲೇ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮುಂದೆ ಇಂಥ ದುರಂತ ಮರುಕಳಿಸದಂತೆ ತಡೆಯಲು ಅಧಿಕಾರಿಗಳು, ಕೋತಿ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇನ್ನೂ 2022 ರಲ್ಲಿ ಇದೇ ರೀತಿಯಾದ ದುರಂತ ಸಂಭವಿಸಿತ್ತು. ಅಜ್ಜಿಯ ಪಕ್ಕದಲ್ಲಿ ಮಲಗಿದ್ದ 2 ತಿಂಗಳ ನವಜಾತ ಶಿಶು ಕೇಶವಕುಮಾರ್ ನನ್ನು ಎತ್ತಿ ಕೊಂಡು ಹೋಗಿ ನೀರಿನ ಟ್ಯಾಂಕ್ ಗೆ ಕೋತಿಗಳು ಹಾಕಿದ್ದವು. ಕೇಶವಕುಮಾರ್ ಸಾವನ್ನಪ್ಪಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.