/newsfirstlive-kannada/media/media_files/2026/01/08/yazuevendra-chahal-and-dhanasree-3-2026-01-08-20-01-28.jpg)
ಕ್ರಿಕೆಟಿಗ ಯಜುವೇಂದ್ರ ಚಹಲ್ ಹಾಗೂ ಧನಶ್ರೀ
ಪ್ರೀತಿಸಿ ವಿವಾಹವಾದ ಕೇವಲ 4 ವರ್ಷಗಳಲ್ಲೇ ನಾನೊಂದು ತೀರ, ನೀನೊಂದು ತೀರ ಎಂಬಂತಾಗಿರೋ ಯುಜುವೇಂದ್ರ ಚಹಲ್​- ಧನಶ್ರೀ ವರ್ಮಾ ಮತ್ತೆ ಒಂದಾಗ್ತಿದ್ದಾರಾ.? ಹೀಗೊಂದು ಚರ್ಚೆ ಜೋರಾಗಿ ನಡೀತಿದೆ. ಇದಕ್ಕೆಲ್ಲಾ ಕಾರಣ ಹಿಂದಿಯಲ್ಲಿ ಲಾಂಚ್​ ಆಗ್ತಾ ಇರೋ ಒಂದು ರಿಯಾಲಿಟಿ ಶೋ.! ರಿಯಾಲಿಟಿ ಶೋಗೂ, ಚಹಲ್​-ಧನಶ್ರೀ ಒಂದಾಗೋದಕ್ಕೂ ಏನು ಸಂಬಂಧ ಅಂತೀರಾ.? ಈ ಸ್ಟೋರಿಯಲ್ಲಿ ನೋಡಿ ಡಿಟೇಲ್ಸ್​
ಯುಜುವೇಂದ್ರ ಚಹಲ್​ - ಧನಶ್ರೀ ವರ್ಮಾ.. ಬಹುಕಾಲ ಪ್ರೀತಿಸಿ ವಿವಾಹವಾಗಿದ್ದ ಬಾಲಿವುಡ್​ ಹಾಗೂ ಕ್ರಿಕೆಟ್ ಲೋಕದ ಕ್ಯೂಟ್​​ ಕಪಲ್ಸ್.! ಧನಶ್ರೀ ಶರ್ಮಾ, ಚಹಲ್​ ಬಾಳಿಗೆ ಎಂಟ್ರಿ ಕೊಟ್ಟಿದ್ದು, ಡಾನ್ಸ್​ ಟೀಚರ್​ ಆಗಿ.! ಆ ಬಳಿಕ ಗೆಳತಿಯಾಗಿ, ಪ್ರೇಯಸಿಯಾಗಿ, ಮಡದಿಯಾಗಿ ಚಹಲ್ ಜೀವನದಲ್ಲಿದ್ರು. ಆದ್ರೀಗ, ಮಾಜಿ ಪತ್ನಿ.! ಹೊಂದಾಣಿಕೆಯ ಕೊರತೆಯಿಂದ ದಾಂಪತ್ಯ ಜೀವನ ಸೂತ್ರ ಹರಿದ ಗಾಳಿಪಟದಂತಾಗಿ, ಡಿವೊರ್ಸ್​​​ ಪಡೆದು ಪ್ರತ್ಯೇಕ ಜೀವನ ನಡೆಸ್ತಿದ್ದಾರೆ.
/filters:format(webp)/newsfirstlive-kannada/media/media_files/2026/01/08/yazuevendra-chahal-and-dhanasree-2-2026-01-08-20-03-13.jpg)
ಚಹಲ್​-ಧನಶ್ರೀ ವರ್ಮಾ​ ಡಿವೋರ್ಸ್​ಗೆ​ ‘ಟ್ವಿಸ್ಟ್’​.?
ಮತ್ತೆ ಒಂದಾಗ್ತಿದ್ದಾರಾ ಕ್ಯೂಟ್​ ಕಪಲ್​.?
ಚಹಲ್​ ಹಾಗೂ ಧನಶ್ರೀ ವರ್ಮಾ ಡಿವೋರ್ಸ್​ ಆಗಿ ಸರಿ ಸುಮಾರು 11 ತಿಂಗಳುಗಳೇ ಕಳೆದಿವೆ. ಇಬ್ಬರ ಪ್ರತ್ಯೇಕವಾಗಿ ತಮ್ಮ ಜೀವನವನ್ನ ಕಟ್ಟಿ ಕೊಳ್ತಿದ್ದಾರೆ. ಟೀಮ್​ ಇಂಡಿಯಾದಿಂದ ದೂರಾಗಿದ್ರೂ, ಐಪಿಎಲ್​, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಚಹಲ್​ ಸಕ್ರಿಯವಾಗಿದ್ದಾರೆ. ಇದ್ರ ನಡುವೆ ಕೌಂಟಿ ಕ್ರಿಕೆಟ್​ ಕೂಡ ಆಡ್ತಿದ್ದಾರೆ. ಅತ್ತ ಧನಶ್ರೀ ವರ್ಮಾ ರಿಯಾಲಿಟಿ ಶೋ, ಡಾನ್ಸ್​ ಶೋ ಸೇರಿದಂತೆ ಬಣ್ಣದ ಲೋಕದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರ ಜೀವನ ನಾನೊಂದು ತೀರ, ನೀನೊಂದು ತೀರ ಎಂಬಂತಾಗಿ ಹತ್ತಿರ ಹತ್ತಿರ ವರ್ಷವೇ ಆಗ್ತಾ ಬಂತು. ಇದೀಗ ಮತ್ತೆ ಇವರಿಬ್ಬರು ಒಂದಾಗ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಇಬ್ಬರ ಎಂಟ್ರಿ.?
ಹೀಗೊಂದು ಸುದ್ದಿ ಸದ್ಯ ದೊಡ್ಡ ಸೆನ್ಸೇಷನ್​ ಕ್ರಿಯೇಟ್​ ಮಾಡಿದೆ. ಡಿವೋರ್ಸ್​​ ಪಡೆದ ಬಳಿಕವೂ ಆರೋಪ, ಪ್ರತ್ಯಾರೋಪಗಳನ್ನ ಮಾಡಿಕೊಂಡು ಕಿತ್ತಾಟ ನಡೆಸಿಕೊಂಡಿದ್ದ ಜೋಡಿ ಮತ್ತೆ ಒಂದಾಗ್ತಿದೆ ಅನ್ನೋ ಸುದ್ದಿ ಬಾಲಿವುಡ್​ ಅಂಗಳದಿಂದ ಹೊರಬಿದ್ದಿದೆ. ರಿಯಾಲಿಟಿ ಶೋ ಒಂದರಲ್ಲಿ ಇಬ್ಬರೂ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಇದ್ರ ಬಗ್ಗೆಯೇ ಚರ್ಚೆ ಜೋರಾಗಿ ನಡೆಯುತ್ತಿದೆ.
‘THE 50’ ಶೋನ ಫೈನಲ್​ ಲಿಸ್ಟ್​ನಲ್ಲಿ ಚಹಲ್, ಧನಶ್ರೀ ಹೆಸರು.!
ಕಲರ್ಸ್​ ಟಿವಿ ಹಾಗೂ ಜಿಯೋ ಹಾಟ್​​ಸ್ಟಾರ್​ ಹೊಸದೊಂದು ಅದ್ಧೂರಿ ರಿಯಾಲಿಟಿ ಷೋನ ಲಾಂಚ್​ ಮಾಡೋಕೆ ರೆಡಿಯಾಗಿದೆ. ಜರ್ಮನಿಯ ಪ್ರಖ್ಯಾತ ಶೋ ದಿ 50ಯನ್ನ ಬಾಲಿವುಡ್​ಗೆ ತರಲು ಸಿದ್ಧತೆ ಮಾಡಿಕೊಂಡಿವೆ. ಈಗಿರೋ ರಿಯಾಲಿಟಿ ಶೋಗಳಿಗಿಂತ ವಿಭಿನ್ನವಾದ ಶೋ ಇದಾಗಿದ್ದು, ಸ್ಪರ್ಧಿಗಳಾಗಿ ಭಾರತದ ವಿವಿಧ ಕ್ಷೇತ್ರಗಳ 50 ಖ್ಯಾತ ಸೆಲಬ್ರಿಟಿಗಳನ್ನ ಆಯ್ಕೆ ಮಾಡಿಕೊಂಡಿದೆ. ಈ ಲಿಸ್ಟ್​ನಲ್ಲಿ ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್​ ಹೆಸರು ಕೂಡ ಇದೆ. ಈಗಾಗಲೇ ಚಹಲ್​, ಧನಶ್ರೀಗೆ ಎಂಟರ್​​ಟೈನ್​ಮೆಂಟ್​ ಚಾನೆಲ್​ನ ಕಡೆಯಿಂದ ಪ್ರಪೋಸಲ್​ ಹೋಗಿದೆ. ಇಬ್ಬರೂ ಪಾಸಿಟಿವ್​ ಆಗಿ ರೀಪ್ಲೇ ಮಾಡಿದ್ದಾರೆ ಎನ್ನಲಾಗಿದೆ.
ಮುಂದಿನ ತಿಂಗಳು ಅಂದ್ರೆ, ಫೆಬ್ರವರಿ 1ರಿಂದ ಈ ಶೋ ಆರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ, ಚಹಲ್​ ಹಾಗೂ ಧನಶ್ರೀ ಒಂದೇ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ರೆ, ಇವರಿಬ್ಬರು ಚಾನೆಲ್​ನ ಪ್ರಪೋಸಲ್​ಗೆ ಒಪ್ಪಿಗೆ ನೀಡ್ತಾರಾ.? ಒಂದು ವೇಳೆ ಶೋಗೆ ಬಂದ್ರೆ, ಇಬ್ಬರ ಬಾಂಧವ್ಯ ಹೇಗಿರಲಿದೆ.? ಮಾತನಾಡ್ತಾರಾ.? ಇಲ್ವಾ.? ಅನ್ನೋದೆೇ ಸದ್ಯ ಎಲ್ಲರಿಗೂ ಇರೋ ಕುತೂಹಲವಾಗಿದೆ.
2020ರ ಅಂತ್ಯದಲ್ಲಿ ಶುರುವಾದ ಚಹಲ್, ಧನಶ್ರೀ ದಾಂಪತ್ಯ ಪಯಣ, 2025ರ ಆರಂಭದ ಹೊತ್ತಿಗೆ ಅಂತ್ಯವಾಗಿತ್ತು. ಕೇವಲ 4 ವರ್ಷಗಳಲ್ಲೇ ಅನ್ಯೋನ್ಯವಾಗಿದ್ದ ಸಂಬಂಧ ಹಳಸಿ, ನನಗೆ ನೀನು ನಿನಗೆ ನಾನು ಅಂತಿದ್ದ ಜೋಡಿಯ ಮನಸ್ಸು ದೂರಾಗಿ, ಮನೆಯೂ ಬದಲಾಗಿ ಪ್ರತ್ಯೇಕವಾಗಿ ಜೀವನ ನಡೆಸ್ತಿದ್ದಾರೆ. ಕಳೆದೊಂದು ವರ್ಷದಿಂದ ದೂರಾಗಿರೋ ಇವರಿಬ್ಬರಿಗೂ, ರಿಯಾಲಿಟಿ ಶೋ ಮೂಲಕ ಒಂದಾಗೋ ಅವಕಾಶವಿದೆ. ಆದ್ರೆ, ಇವರಿಬ್ಬರ ಅಂತಿಮ ನಿರ್ಧಾರದ ಮೇಲೆ ಎಲ್ಲ ನಿಂತಿದೆ.
/filters:format(webp)/newsfirstlive-kannada/media/media_files/2026/01/08/yazuevendra-chahal-and-dhanasree-2026-01-08-20-02-55.jpg)
ವಸಂತ್​ ಮಳವತ್ತಿ. ಸ್ಪೋರ್ಟ್ಸ್​ ಬ್ಯೂರೋ. ನ್ಯೂಸ್​ ಫಸ್ಟ್​
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us