/newsfirstlive-kannada/media/media_files/2025/09/05/wife-escapes-with-lover05-2025-09-05-18-54-44.jpg)
ಪೋಟೋದಲ್ಲಿರುವ ಸಂತೋಷ್ ಜೊತೆ ಓಡಿ ಹೋದ ಮಂಜುನಾಥ್ ಪತ್ನಿ ಲೀಲಾವತಿ
ಅವರದ್ದು ಪ್ರೇಮ ವಿವಾಹ. ಪ್ರೀತಿಸಿ ಇಬ್ಬರು ವಿವಾಹವಾಗಿದ್ದರು. ಇಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಮೂರು ಮುದ್ದಾದ ಮಕ್ಕಳು ಇವೆ. ಈ ಸುಂದರ ಸಂಸಾರದಲ್ಲಿ ಈಗ ಬಿರುಗಾಳಿ ಎದ್ದಿದೆ. ಪ್ರೀತಿಸಿ ಮಂಜುನಾಥ್ ನನ್ನು ಮದುವೆಯಾಗಿದ್ದ ಲೀಲಾವತಿ ಮದುವೆಯಾದ 11 ವರ್ಷದ ಬಳಿಕ ಗಂಡ, ಮೂವರು ಮಕ್ಕಳನ್ನು ಬಿಟ್ಟು ಹೊಸ ಲವ್ವರ್ ಜೊತೆ ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಪ್ರೀತಿಸಿ ಮದುವೆಯಾದ ಲೀಲಾವತಿ , ಮನೆ ಬಿಟ್ಟು ಓಡಿ ಹೋಗಿರುವುದನ್ನು ಕಂಡು ಗಂಡ ಮಂಜುನಾಥ್ ಈಗ ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಹೊಸ ಲವ್ವರ್ ಜೊತೆ ಮೂರು ಮಕ್ಕಳ ತಾಯಿಯಾಗಿರುವ ಲೀಲಾವತಿ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಇದು ನಡೆದಿರುವುದು ಬೇರೆ ರಾಜ್ಯದಲ್ಲಿ ಅಲ್ಲ. ನಮ್ಮದೇ ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಬಸವನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಹೆಂಡತಿಗಾಗಿ ಗಂಡ ಈಗ ಅಕ್ಷರಶಃ ಕಣ್ಣೀರು ಹಾಕುತ್ತಾ ಗೋಳಾಡುತ್ತಿದ್ದಾನೆ.
ಸಂತೋಷ್ ಜೊತೆ ಸಂತಸದ ಕ್ಷಣ ಕಳೆಯುತ್ತಾ ಎಸ್ಕೇಪ್ ಆದ ಲೀಲಾವತಿ
ಕ್ಯಾಬ್ ಡ್ರೈವರ್ ಆಗಿದ್ದ ಪತಿ ಮಂಜುನಾಥ್ ಹಾಗೂ ಲೀಲಾವತಿ ದಂಪತಿಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಮಗು ಇವೆ. ಬಸವನಪುರದಲ್ಲಿ ಮಂಜುನಾಥ್- ಲೀಲಾವತಿ ವಾಸ ಇದ್ದರು. ಕಳೆದ ಎರಡು ವರ್ಷಗಳ ಹಿಂದೆ ಲೀಲಾವತಿಗೆ ಸಂತೋಷ್ ಎಂಬಾತನ ಪರಿಚಯವಾಗಿದೆ. ಸಂತೋಷ್ ಜೊತೆಗೆ ಮಂಜುನಾಥ್ ಪತ್ನಿ ಲೀಲಾವತಿ ವಿವಾಹೇತರ ಸಂಬಂಧ ಹೊಂದಿದ್ದರು. ಸಾಕಷ್ಟು ಬಾರಿ ಇದನ್ನು ಸಹಜವಾಗಿಯೇ ಪತಿ ಮಂಜುನಾಥ್ ಪ್ರಶ್ನೆ ಮಾಡಿದ್ದರು. ಆದರೇ, ಒಳ್ಳೆಯ ಬುದ್ಧಿ ಕಲಿಯದ ಪತ್ನಿ ಲೀಲಾವತಿ, ಪ್ರಿಯಕರ ಸಂತೋಷ್ ಜೊತೆ ಎಸ್ಕೇಪ್ ಆಗಿದ್ದಾಳೆ. ಕಳೆದ ಭಾನುವಾರ ಮಂಜುನಾಥ್ ಪತ್ನಿ ಮನೆಯಿಂದ ಹೋಗಿದ್ದಾಳೆ. ಮನೆಯಲ್ಲಿ ಈಗ ಲೀಲಾವತಿ ಗಂಡ ಹಾಗೂ ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ದೂರು ದಾಖಲು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ