/newsfirstlive-kannada/media/post_attachments/wp-content/uploads/2024/01/Kempegowda-Bngaluru.jpg)
ಇನ್ನೂ ಅಂತಿಮವಾಗದ ಬೆಂಗಳೂರು 2ನೇ ಏರ್ ಪೋರ್ಟ್ ಸ್ಥಳ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ತಗ್ಗಿಸಲು 2033ರೊಳಗೆ ಮತ್ತೊಂದು ಏರ್ ಪೋರ್ಟ್ ಅನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು ಎನ್ನುವುದು ಕರ್ನಾಟಕ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ. ಇದಕ್ಕಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಈ ವರ್ಷದ ಏಪ್ರಿಲ್ ತಿಂಗಳಲ್ಲೇ ರಾಜ್ಯ ಸರ್ಕಾರ ಸೂಚಿಸಿದ್ದ ಮೂರು ಸ್ಥಳಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು.
ಈಗ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ತನ್ನ ವರದಿಯನ್ನು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಹಾಗೂ ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವೂ ಮೂರು ಸ್ಥಳಗಳ ಪೈಕಿ ಯಾವುದೇ ಸ್ಥಳವನ್ನು 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಸೂಕ್ತ ಸ್ಥಳವೆಂದು ಆಯ್ಕೆ ಮಾಡಿ ತನ್ನ ಒಪ್ಪಿಗೆ ನೀಡಿಲ್ಲ. ಜೊತೆಗೆ 3 ಸ್ಥಳಗಳ ಪೈಕಿ ಯಾವುದೇ ಸ್ಥಳವನ್ನು ತಿರಸ್ಕರಿಸಿಯೂ ಇಲ್ಲ.
ಕನಕಪುರ ರಸ್ತೆಯ 2 ಸ್ಥಳಗಳು ಹಾಗೂ ನೆಲಮಂಗಲ- ಕುಣಿಗಲ್ ರಸ್ತೆಯ ಒಂದು ಸ್ಥಳದಲ್ಲಿ ಬೆಂಗಳೂರಿನ 2ನೇ ಏರ್ ಪೋರ್ಟ್ ನಿರ್ಮಾಣ ಮಾಡಲು ಇರುವ ಸವಾಲುಗಳ ಬಗ್ಗೆ ಮಾತ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ವರದಿಯಲ್ಲಿ ಪ್ರಸ್ತಾಪಿಸಿ ಕಳವಳ ವ್ಯಕ್ತಪಡಿಸಿದೆ.
ಮೂರು ಸ್ಥಳಗಳಲ್ಲೂ ಕೂಡ ಎಚ್‌ಎಎಲ್ ವಾಯುಪ್ರದೇಶ ಹಾಗೂ ಬೆಟ್ಟಗುಡ್ಡಗಾಡು ಪ್ರದೇಶದ ಸವಾಲು ಇದೆ ಎಂದು ಎಎಐ( ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ) ತನ್ನ ವರದಿಯಲ್ಲಿ ಹೇಳಿದೆ.
ಎಎಐ , ಯಾವುದೇ ಸ್ಥಳವನ್ನು ಅಪ್ರೂವ್ ಮಾಡಿಲ್ಲ, ತಿರಸ್ಕರಿಸಿಯೂ ಇಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಪ್ರತಿಯೊಂದು ಸ್ಥಳದಲ್ಲೂ ಇರುವ ಸವಾಲುಗಳ ಬಗ್ಗೆ ಪ್ರಸ್ತಾಪ ಮಾಡಿದೆ. ಪ್ರತಿಯೊಂದು ಸ್ಥಳಕ್ಕೂ ಅನುಕೂಲ ಮತ್ತು ಅನಾನುಕೂಲಗಳೆರಡೂ ಇವೆ. ನಮ್ಮ ತಂಡ ಈಗ ಈ ವರದಿಯ ನಂತರದ ಪ್ರಕ್ರಿಯೆಗಳನ್ನು ಮುಂದುವರಿಸುತ್ತೆ. ಯಾವುದೇ ಸ್ಥಳವನ್ನು ಅಂತಿಮಗೊಳಿಸುವ ಮುನ್ನ ರಾಜ್ಯ ಸರ್ಕಾರವು ಸ್ಥಳಗಳ ಬಗ್ಗೆ ಫಿಸಿಬಲಿಟಿ ಅಧ್ಯಯನ ನಡೆಸಲಿದೆ. ನಾವು ತಾಂತ್ರಿಕ ಮತ್ತು ಹಣಕಾಸಿನ ಫಿಲಿಬಲಿಟಿ ಬಗ್ಗೆ ಅಧ್ಯಯನ ನಡೆಸುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2024/09/Nelamangala-Airport-1.jpg)
ಈಗ ಕರ್ನಾಟಕದ ಕೈಗಾರಿಕೆ ಮತ್ತು ಮೂಲಸೌಕರ್ಯ ಇಲಾಖೆಯು ದೇಶದ ಟಾಪ್ ಕನ್ಸಲ್ಟೆನ್ಸಿ ಕಂಪನಿಗಳ ನೆರವು ಪಡೆಯಲು ನಿರ್ಧರಿಸಿದೆ. ನೋಯ್ಡಾ ಬಳಿಯ ಜೇವರ್ ಏರ್ ಪೋರ್ಟ್, ಮುಂಬೈ ಬಳಿಯ ನವೀ ಮುಂಬೈ ಏರ್ ಪೋರ್ಟ್ ಬಗ್ಗೆ ವರದಿ ನೀಡಿದ ಕನ್ಸಲ್ಟೆನ್ಸಿ ಕಂಪನಿಗಳ ನೆರವು ಪಡೆಯಲಾಗುತ್ತೆ. ಬಳಿಕ ಖಾಸಗಿ ಡೆವಲಪರ್ ಗಳು ಎಂಟ್ರಿಯಾಗಲಿದ್ದಾರೆ.
ಇನ್ನೂ ಕಾರ್ಯಸಾಧ್ಯತೆ ವರದಿಯು ಬಹಳ ಮುಖ್ಯ. ಏಕೆಂದರೇ, ಇದರ ಮೂಲಕವೇ ಪ್ರಯಾಣಿಕರ ದಟ್ಟಣೆ ಹಾಗೂ ಇತರೆ ಅಂಶಗಳು ಸ್ಪಷ್ಟವಾಗಿ ಗೊತ್ತಾಗುತ್ತೆ. ಇದರ ಬಗ್ಗೆಯೇ ಖಾಸಗಿ ಡೆವಲಪರ್ ಗಳು ಆಸಕ್ತಿ ಹೊಂದಿದ್ದಾರೆ. 2ನೇ ಏರ್ ಪೋರ್ಟ್ ನಿರ್ಮಿಸಲು ಖಾಸಗಿ ಡೆವಲಪರ್ ಗಳು ಆಸಕ್ತಿ ತೋರುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಬಯಸಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್‌ನ ಎಂ.ಡಿ.ಹರಿ ಮಾರರ್ ಕೂಡ 2ನೇ ಏರ್ ಪೋರ್ಟ್ ಬಗ್ಗೆ ಆಸಕ್ತಿ ವಹಿಸಿದ್ದಾರೆ. 2ನೇ ಏರ್ ಪೋರ್ಟ್ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ನಡೆಸಬೇಕು ಎಂದು ಹೇಳಿದ್ದಾರೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಸಲ್ಲಿಸಿರುವ ವರದಿಯಲ್ಲಿ ಮೂರು ಮುಖ್ಯ ಸವಾಲುಗಳನ್ನು ಪಟ್ಟಿ ಮಾಡಿದೆ.
1- ಬನ್ನೇರುಘಟ್ಟದ ಎತ್ತರದ ಪ್ರದೇಶ
2-ಎಚ್‌ಎಎಲ್ ವಾಯುಪ್ರದೇಶದ ವ್ಯಾಪ್ತಿಯಲ್ಲೇ 3 ಸ್ಥಳಗಳು ಇವೆ
3-ಬೆಟ್ಟಗುಡ್ಡ, ಕಲ್ಲುಬಂಡೆಗಳಿಂದ ಕೂಡಿರುವ 3 ಪ್ರದೇಶ
ಕನಕಪುರ ರಸ್ತೆಯ 2 ಸ್ಥಳಗಳು ಹಾಗೂ ನೆಲಮಂಗಲ- ಕುಣಿಗಲ್ ರಸ್ತೆಯ ಪ್ರದೇಶ ಬನ್ನೇರುಘಟ್ಟದ ಪೀಕ್ ಪ್ರದೇಶಕ್ಕೆ ಹತ್ತಿರದಲ್ಲಿವೆ. 3 ಸ್ಥಳಗಳು ಕೂಡ ಎಚ್‌ಎಎಲ್ ವಾಯುಪ್ರದೇಶದ ವ್ಯಾಪ್ತಿಯಲ್ಲೇ ಇವೆ. 3 ಸ್ಥಳಗಳು ಕೂಡ ಬೆಟ್ಟಗುಡ್ಡ, ಕಲ್ಲುಬಂಡೆಗಳಿಂದ ಕೂಡಿರುವ ಪ್ರದೇಶಗಳಾಗಿವೆ. ಇವುಗಳು 2ನೇ ಏರ್ ಪೋರ್ಟ್ ನಿರ್ಮಾಣಕ್ಕೆ ಇರುವ ಸವಾಲುಗಳು ಎಂದು ಎಎಐ ಹೇಳಿದೆ.
ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕಾಫ್ ಆಗುವಾಗ ಬನ್ನೇರುಘಟ್ಟದ ಎತ್ತರದ ಪ್ರದೇಶ ಇರೋದು ಅಡ್ಡಿಯಾಗುತ್ತೆ.
ಕನಕಪುರ ರಸ್ತೆಯ 2 ಸ್ಥಳಗಳು ಒಂದೇ ರೀತಿ ಇವೆ. ನೆಲಮಂಗಲ- ಕುಣಿಗಲ್ ರಸ್ತೆಯ ಜಾಗವು ಬೆಟ್ಟಗುಡ್ಡಗಳಿಂದ ಕೂಡಿದೆ. ಇಲ್ಲಿ ಹೆಚ್ಚು ಕಲ್ಲು, ಬಂಡೆಗಳಿವೆ. ಈ ಕಲ್ಲು ಬಂಡೆಗಳನ್ನು ಹೊಡೆದು ನೆಲವನ್ನ ಸಮತಟ್ಟು ಮಾಡಬಹುದು. ಆದರೇ, ಇದರಿಂದ ಏರ್ ಪೋರ್ಟ್ ನಿರ್ಮಾಣದ ವೆಚ್ಚ ಹೆಚ್ಚಾಗುತ್ತೆ.
ಇನ್ನೂ ಮೂರು ಸ್ಥಳಗಳು ಕೂಡ ಎಚ್‌ಎಎಲ್ ಡಿಫೆನ್ಸ್ ವಾಯುಪ್ರದೇಶದಲ್ಲೇ ಇವೆ. ಇದನ್ನು ಬಗೆಹರಿಸಬಹುದು. ಹೇಗೆಂದರೇ, ಡಿಫೆನ್ಸ್ ಏರ್ ಸ್ಪೇಸ್ ಅನ್ನು ನಾಗರಿಕ ವಿಮಾನಗಳ ಹಾರಾಟಕ್ಕೆ ಬಳಸಲು ಅವಕಾಶ ಇದೆ.
ಏರ್ ಪೋರ್ಟ್ ನಿರ್ಮಾಣಕ್ಕೆ ವೆಚ್ಚು ಎಷ್ಟು ಆಗಬಹುದು?
ಖಾಸಗಿ ಬಂಡವಾಳವೋ, ಸರ್ಕಾರ- ಖಾಸಗಿ ಬಂಡವಾಳವೋ?
ಆದರೇ, ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಏಪ್ರಿಲ್ ನಲ್ಲೇ ಸ್ಥಳ ಅಧ್ಯಯನ ನಡೆಸಿದರೂ, ಅದರ ವರದಿ ಈಗ ನವಂಬರ್ ನಲ್ಲಿ ಬಹಿರಂಗವಾಗಿದೆ. ಆದರೇ, ಯಾವುದೇ ಸ್ಥಳವನ್ನು 2ನೇ ಏರ್ ಪೋರ್ಟ್ ನಿರ್ಮಿಸಲು ಸೂಕ್ತ ಎಂದು ಅನುಮೋದನೆ ನೀಡಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಎಎಐ ಎತ್ತಿರುವ ಸವಾಲುಗಳನ್ನು ಪರಿಹರಿಸಬೇಕಾಗಿದೆ. ಬಳಿಕ 3 ಸ್ಥಳಗಳ ಪೈಕಿ ಒಂದು ಸ್ಥಳವನ್ನು ಅಂತಿಮಗೊಳಿಸಬೇಕು. ಆ ಸ್ಥಳದಲ್ಲಿ ಸುಮಾರು 6-7 ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಲು ಯಾವುದಾದರೂ ಖಾಸಗಿ ಕಂಪನಿ ಮುಂದೆ ಬರಬೇಕು. ಆಗ ಮಾತ್ರವೇ 2ನೇ ಏರ್ ಪೋರ್ಟ್ ನಿರ್ಮಿಸಲು ಸಾಧ್ಯ. ರಾಜ್ಯ ಸರ್ಕಾರ ಹಾಗೂ ಖಾಸಗಿ ಕಂಪನಿ ಜಂಟಿಯಾಗಿ ಶೇ.50 ರ ಪಾಲುದಾರಿಕೆಯಲ್ಲಾದರೂ ಏರ್ ಪೋರ್ಟ್ ನಿರ್ಮಿಸಲು ಆಸಕ್ತಿ ವಹಿಸಬೇಕು. 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಂಡವಾಳವೇ ಮುಖ್ಯ. ಭೂಮಿ ಸ್ವಾಧೀನಕ್ಕೆ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆ ಇದೆ. ಬಳಿಕ ವಿಮಾನ ನಿಲ್ದಾಣದ ಖರ್ಚುವೆಚ್ಚಗಳನ್ನು ಭರಿಸಬೇಕಾಗಿದೆ.
/filters:format(webp)/newsfirstlive-kannada/media/media_files/2025/11/03/airport-authority-of-india-2025-11-03-18-08-43.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us