/newsfirstlive-kannada/media/media_files/2025/09/15/delhi-bmw-car-accident-2025-09-15-17-35-56.jpg)
BMW ಕಾರ್, ಮೃತ ನವಜೋತ್ ಸಿಂಗ್ , ಗಾಯಾಳು ಪತ್ನಿ ಸಂದೀಪ್ ಕೌರ್
ದೆಹಲಿಯ ದೌಲಾಕುಹಾದಲ್ಲಿ ನಿನ್ನೆ ಮಧ್ಯಾಹ್ನ ಸಂಭವಿಸಿದ್ದ ಬಿಎಂಡಬ್ಲ್ಯು ಕಾರ್ ಅಪಘಾತ ಪ್ರಕರಣದಲ್ಲಿ ಕಾರ್ ಚಾಲನೆ ಮಾಡುತ್ತಿದ್ದ ಗಗನಪ್ರೀತ್ ಕೌರ್ ರನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಬಿಎಂಡಬ್ಲ್ಯು ಕಾರ್, ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕೇಂದ್ರ ಸರ್ಕಾರಿ ನೌಕರ ನವಜೋತ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ನವಜೋತ್ ಸಿಂಗ್ ಅವರ ಪತ್ನಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಜಿಟಿಬಿ ನಗರದ ಆಸ್ಪತ್ರೆಗೆ ಸಣ್ಣಗಾಯಕ್ಕೆ ದಾಖಲಾಗಿದ್ದ ಆರೋಪಿ ಗಗನಪ್ರೀತ್ ಕೌರ್ ರನ್ನು ಪೊಲೀಸರು ಬಂಧಿಸಿದ್ದಾರೆ.
38 ವರ್ಷದ ಗಗನಪ್ರೀತ್ , ಪತಿ ಪರೀಕ್ಷಿತ್ ಮಕ್ಕಡ್ ಜೊತೆ ಹೋಗುವಾಗ ಕಾರ್ ಅಪಘಾತಕ್ಕೀಡಾಗಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಈ ದಂಪತಿ ಹರಿಯಾಣದ ಗುರುಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಲಕ್ಷುರಿ ಪ್ರಾಡಕ್ಟ್ ಗಳ ಬ್ಯುಸಿನೆಸ್ ಹೊಂದಿದ್ದಾರೆ. ಎಫ್‌ಐಆರ್ ನಲ್ಲಿ ಗಗನಪ್ರೀತ್ ಕೌರ್ ಪತಿ ಪರೀಕ್ಷಿತ್ ಮಕ್ಕಡ್ ಕೂಡ ಆರೋಪಿಯನ್ನಾಗಿ ಹೆಸರಿಸಲಾಗಿದೆ.
ಬೈಕ್- ಬಿಎಂಡಬ್ಲ್ಯು ಕಾರ್ ಅಪಘಾತದಲ್ಲಿ ಮೃತಪಟ್ಟ ನವಜೋತ್ ಸಿಂಗ್ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಡೆಪ್ಯುಟಿ ಸೆಕ್ರೆಟರಿ ಆಗಿ ಕೆಲಸ ಮಾಡುತ್ತಿದ್ದರು. ನಿನ್ನೆ ದೆಹಲಿಯ ಅಶೋಕ್ ರಸ್ತೆಯಲ್ಲಿರುವ ಬಾಂಗ್ಲಾಸಾಹೀಬ್ ಗುರುದ್ವಾರಕ್ಕೆ ಭೇಟಿ ನೀಡಿ ಮನೆಗೆ ವಾಪಸಾಗುತ್ತಿದ್ದರು. ಮಾರ್ಗ ಮಧ್ಯೆ ಆರ್.ಕೆ.ಪುರಂನಲ್ಲಿರುವ ದೆಹಲಿ ಕರ್ನಾಟಕ ಸಂಘದ ಕ್ಯಾಂಟೀನ್ ನಲ್ಲಿ ಮಧ್ಯಾಹ್ನದ ಭೋಜನ ಸವಿದು ಮನೆಗೆ ಹೋಗುತ್ತಿದ್ದರು.
ನವಜೋತ್ ಸಿಂಗ್ ಪತ್ನಿ ಸಂದೀಪ್ ಕೌರ್ ಅವರು ಪೊಲೀಸರಿಗೆ ತಿಳಿಸಿರುವ ಪ್ರಕಾರ, ಬಿಎಂಡಬ್ಲ್ಯು ಕಾರ್ ವೇಗವಾಗಿ ಚಲಿಸುತ್ತಿತ್ತು. ತಮ್ಮ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಆದರೇ, ಅಪಘಾತವಾದ ಬಳಿಕ ಗಗನಪ್ರೀತ್ ಕೌರ್, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಆದರೇ, ದೌಲಾಕುಹಾದಿಂದ 19 ಕಿ.ಮೀ. ದೂರದ ಜಿಟಿಬಿ ನಗರದ ನೂಲೈಫ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೇಗನೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರಿಂದ ನವಜೋತ್ ಸಿಂಗ್ ಬದುಕುಳಿಯುವ ಸಾಧ್ಯತೆ ಇತ್ತು ಎಂದು ನವಜೋತ್ ಸಿಂಗ್ ಪುತ್ರ ಹೇಳಿದ್ದಾರೆ.
ಇನ್ನೂ ಅಪಘಾತದಲ್ಲಿ ಗಾಯಗೊಂಡ ಸಂದೀಪ್ ಕೌರ್ ಅವರು ಕೂಡ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಗಗನದೀಪ್ ಕೌರ್ ಗೆ ಕೇಳಿದ್ದೆ. ಆದರೇ, ವ್ಯಾನ್ ಡ್ರೈವರ್‌ಗೆ ಜಿಟಿಬಿ ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳಿದ್ದರು ಎಂದು ಸಂದೀಪ್ ಕೌರ್ ಹೇಳಿದ್ದಾರೆ.
ಪೊಲೀಸರು ಹೇಳುವ ಪ್ರಕಾರ, ಬಿಎಂಡಬ್ಲ್ಯು ಕಾರ್ ಚಾಲನೆ ಮಾಡುತ್ತಿದ್ದ ಗಗನದೀಪ್ ಕೌರ್ ತಂದೆಯೇ ನ್ಯೂಲೈಫ್ ಆಸ್ಪತ್ರೆಯ ಸಹ ಮಾಲೀಕರು. ಹೀಗಾಗಿ ಮೆಡಿಕಲ್ ರಿಪೋರ್ಟ್ ಗಳನ್ನು ತಿರುಚುವ ಉದ್ದೇಶದಿಂದ ಈ ಆಸ್ಪತ್ರೆಗೆ ಕರೆತಂದು ದಾಖಲಿಸಿರಬಹುದು ಎಂಬ ಅನುಮಾನ ಇದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರ್ ಅಪಘಾತದ ಆರೋಪಿ ಗಗನಪ್ರೀತ್ ಕೌರ್ ಪೋಟೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.