/newsfirstlive-kannada/media/media_files/2025/10/18/kruthika-reddy-2025-10-18-08-54-32.jpg)
ಕೃತಿಕಾ ರೆಡ್ಡಿ ಕೊಲೆ ಆರೋಪಿ ಮಹೇಂದ್ರ ರೆಡ್ಡಿ
ಮಾರತಹಳ್ಳಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣದ ಆರೋಪಿ ಮಹೇಂದ್ರ ರೆಡ್ಡಿ ಪೊಲೀಸರ ವಿಚಾರಣೆ ವೇಳೆ ಅನೇಕ ಸ್ಪೋಟಕ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ.
ಮಹೇಂದ್ರ ರೆಡ್ಡಿ, ಕೃತಿಕಾಳನ್ನು ಕೊಲೆ ಮಾಡಲು ಮೂರು ಕಾರಣಗಳನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ. ಆಸ್ತಿ, ಅನೈತಿಕ ಸಂಬಂಧ ಹಾಗೂ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆಯೇ ಈ ಕೊಲೆ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.
ಕೃತಿಕಾಳನ್ನು ಕೊಲೆ ಮಾಡುವ ಮೊದಲೇ ಮಹೇಂದ್ರ ರೆಡ್ಡಿ ಫ್ರೀಪ್ಲ್ಯಾನ್ ಅನ್ನು ಮಾಡಿದ್ದ. ಕೃತಿಕಾ ರೆಡ್ಡಿಗೆ ತಾನು ಡಿವೋರ್ಸ್ ಕೊಟ್ಟರೇ, ನನಗೆ ಆಕೆಯ ತಂದೆಯ ಮನೆಯ ಆಸ್ತಿ ಸಿಗಲ್ಲ. ಹಾಗಾಗಿ ಆಕೆಗೆ ಡಿವೋರ್ಸ್ ನೀಡೋದು ಬೇಡ. ಡಿವೋರ್ಸ್ ಕೊಟ್ಟರೇ, ಸಮಾಜದಲ್ಲಿ ಮರ್ಯಾದೆ ಕೂಡ ಹೋಗುತ್ತೆ. ಹೀಗಾಗಿ ಡಿವೋರ್ಸ್ ಕೊಡದೇ ಕೊಲೆ ಮಾಡಲು ನಿರ್ಧರಿಸಿದ್ದೆ ಎಂದು ಡಾ.ಮಹೇಂದ್ರ ರೆಡ್ಡಿ ಹೇಳಿದ್ದಾನೆ.
ಇನ್ನೂ ಡಾಕ್ಟರ್ ಕೃತಿಕಾ ರೆಡ್ಡಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಸಮಸ್ಯೆ ಇತ್ತು. ಹೆಂಡತಿ ಕೃತಿಕಾ ರೆಡ್ಡಿಯನ್ನು ಕೇರ್ ಮಾಡೋದು ಮಹೇಂದ್ರ ರೆಡ್ಡಿಗೆ ಹಿಂಸೆಯಾಗಿತ್ತಂತೆ. ದಿನಪೂರ್ತಿ ಆಸ್ಪತ್ರೆಯಲ್ಲಿ ರೋಗಿಗಳನ್ನ ನೋಡಿಕೊಂಡು ಸಂಜೆ ಮನೆಗೆ ಬಂದು ಇವಳನ್ನು ನೋಡಿಕೊಳ್ಳಬೇಕಾಗಿತ್ತು. ಕೃತಿಕಾಗೆ ಗ್ಯಾಸ್ಟ್ರಿಕ್ ಆರೋಗ್ಯ ಸಮಸ್ಯೆ ಇರೋದನ್ನು ಆಕೆಯ ಪೋಷಕರು ಮದುವೆ ಮುಂಚೆಯೇ ಮಹೇಂದ್ರ ರೆಡ್ಡಿಗೆ ತಿಳಿಸಿರಲಿಲ್ಲವಂತೆ. ಇದು ಮಹೇಂದ್ರ ರೆಡ್ಡಿಯ ಬೇಸರ, ಅಸಮಾಧಾನಕ್ಕೆ ಕಾರಣವಾಗಿತ್ತು.
/filters:format(webp)/newsfirstlive-kannada/media/media_files/2025/10/15/kruthika_father-2025-10-15-19-15-03.jpg)
ಆದರೇ, ಮದುವೆಯ ಬಳಿಕ ಕೃತಿಕಾಗೆ ಆಕೆಯ ಪೋಷಕರು ಎಲ್ಲೆಲ್ಲಿ ಟ್ರೀಟ್ ಮೆಂಟ್ ಕೊಡಿಸಿದ್ದಾರೆ ಎಂಬುದನ್ನೆಲ್ಲಾ ಚೆನ್ನಾಗಿ ಮಹೇಂದ್ರ ರೆಡ್ಡಿ ತಿಳಿದುಕೊಂಡಿದ್ದ.
ಆರೋಪಿ ಮಹೇಂದ್ರ ರೆಡ್ಡಿಗೆ ತಿಂಗಳಿಗೆ 70-80 ಸಾವಿರ ರೂಪಾಯಿ ಫೆಲೋಷಿಪ್ ಹಣ ಕೂಡ ಬರುತ್ತಿತ್ತು. ಇ
ನ್ನೂ ಪೊಲೀಸ್ ವಿಚಾರಣೆ ವೇಳೆ, ತನಗೆ ಕೃತಿಕಾ ಹೊರತುಪಡಿಸಿ ಬೇರೆ ಯುವತಿಯ ಜೊತೆ ಅನೈತಿಕ ಸಂಬಂಧ ಇರುವುದನ್ನು ಮಹೇಂದ್ರ ರೆಡ್ಡಿಯೇ ಒಪ್ಪಿಕೊಂಡಿದ್ದಾನೆ. ಆದರೇ, ಅನೈತಿಕ ಸಂಬಂಧಕ್ಕೋಸ್ಕರ ಕೊಲೆ ಮಾಡುವ ಉದ್ದೇಶ ಇರಲಿಲ್ಲ ಎಂದಿದ್ದಾನೆ.
ಪೊಲೀಸರಿಗೆ ನೀವು ಇಷ್ಟೊಂದು ಅಳವಾಗಿ ತನಿಖೆ ಮಾಡುತ್ತೀರಾ ಎಂದು ಮೊದಲೇ ಗೊತ್ತಿದ್ದರೇ, ಕೊಲೆಯನ್ನೇ ಮಾಡುತ್ತಿರಲಿಲ್ಲ! ಎಂದು ಮಹೇಂದ್ರ ರೆಡ್ಡಿ ಪೊಲೀಸ್ ತನಿಖೆ ವೇಳೆ ಹೇಳಿದ್ದಾನೆ. ಅನಸ್ತೇಷಿಯಾ ಕೊಟ್ಟು ಸಾಯಿಸಿದರೇ, ಪೊಲೀಸರ ತನಿಖೆಯಲ್ಲಿ ಗೊತ್ತಾಗಲ್ಲ, ಸಾವಿನ ನಿಖರ ಕಾರಣ ಯಾವುದೇ ತನಿಖೆಯಿಂದ ಹೊರ ಬರಲ್ಲ ಎಂದು ನಾನು ಅಂದುಕೊಂಡಿದ್ದೆ ಎಂದು ಮಹೇಂದ್ರ ರೆಡ್ಡಿ ಹೇಳಿದ್ದಾನೆ. ಪೊಲೀಸರು ಇಷ್ಟೊಂದು ಟೆಕ್ನಿಕಲ್ ಆಗಿ ತನಿಖೆ ಮಾಡುತ್ತೀರಾ ಎಂದು ಗೊತ್ತಿರಲಿಲ್ಲ. ಈ ಮಟ್ಟದ ತನಿಖೆ ಆಗುತ್ತೆ ಎಂದು ಗೊತ್ತಿದ್ದರೇ, ನಾನು ಕೊಲೆಯನ್ನೇ ಮಾಡುತ್ತಿರಲಿಲ್ಲ ಎಂದು ಆರೋಪಿ ಮಹೇಂದ್ರ ರೆಡ್ಡಿ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us