/newsfirstlive-kannada/media/media_files/2025/08/15/darshan-and-prajwal-together-2025-08-15-17-48-55.jpg)
ಒಂದೇ ಜೈಲಿನಲ್ಲಿರುವ ನಟ ದರ್ಶನ್ , ಪ್ರಜ್ವಲ್ ರೇವಣ್ಣ
ನಿನ್ನೆಯಷ್ಟೇ ಕೊಲೆ ಕೇಸ್ ನಲ್ಲಿ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲು ಸೇರಿರುವ ನಟ ದರ್ಶನ್ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರೂ ಇಂದು ಜೈಲಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಟ ದರ್ಶನ್ ಹಾಗೂ ಪ್ರಜ್ವಲ್ ಇಬ್ಬರೂ ತಮ್ಮ ತಮ್ಮ ಬ್ಯಾರಕ್ ಗಳಲ್ಲೇ ಇದ್ದಾರೆ. ಇಬ್ಬರೂ ಕೂಡ ತಮ್ಮ ಈಗಿನ ಸ್ಥಿತಿಯಿಂದಾಗಿ ಖಿನ್ನತೆಗೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ಸುಪ್ರೀಂಕೋರ್ಟ್ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ಅನ್ನು ರದ್ದುಪಡಿಸಿದ್ದರಿಂದ ನಟ ದರ್ಶನ್ ಮತ್ತೊಮ್ಮೆ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲು ಸೇರಿದ್ದಾರೆ. ಆದರೇ, ಇಂದು ದೇಶಾದ್ಯಂತ 79ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಇದೆ. ಆದರೇ ನಟ ದರ್ಶನ್ ಹಾಗೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರೂ ತಮ್ಮ ಸ್ವಾತಂತ್ರ್ಯ ಕಳೆದುಕೊಂಡು ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಹೀಗಾಗಿ ಇಬ್ಬರ ಮುಖದಲ್ಲಿ ಖುಷಿ ಇಲ್ಲ. ಮನಸ್ಸಿನಲ್ಲಿ ನೋವು ತುಂಬಿದೆ. ಹೀಗಾಗಿ ಜೈಲಿನ ತಮ್ಮ ಬ್ಯಾರಕ್ ನಿಂದ ಹೊರಗೆ ಬಂದು ಜೈಲಿನಲ್ಲಿ ಇಂದು ನಡೆದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಇಬ್ಬರೂ ಭಾಗಿಯಾಗಿಲ್ಲ.
ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಪ್ರಜ್ವಲ್ ಆಗಸ್ಟ್ 1 ರಂದು ರೇಪ್ ಕೇಸ್ ಅಪರಾಧಿ ಎಂದು ತೀರ್ಪು ನೀಡಿದ ಕೋರ್ಟ್, ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಹೀಗಾಗಿ ಪ್ರಜ್ವಲ್ ಕೂಡ ಖಿನ್ನತೆಯ ಸ್ಥಿತಿಯಲ್ಲಿದ್ದಾರೆ. ತಮ್ಮ ಬ್ಯಾರಕ್ ಬಿಟ್ಟು ಹೆಚ್ಚಾಗಿ ಹೊರಗೆ ಬರುತ್ತಿಲ್ಲ.
ಇನ್ನೂ ನಿನ್ನೆ ರಾತ್ರಿ ಮತ್ತೆ ಪರಪ್ಪನ ಆಗ್ರಹಾರ ಜೈಲು ಸೇರಿದ ನಟ ದರ್ಶನ್ ಕಳೆದ ರಾತ್ರಿ ಪೂರ್ತಿ ಜೈಲಿನಲ್ಲಿ ನಿದ್ದೆಯನ್ನೇ ಮಾಡಿಲ್ಲ.
ನಟ ದರ್ಶನ್ ಗೆ ಜೈಲು ನಿಯಮಗಳ ಪ್ರಕಾರ, ಖೈದಿ ಸಂಖ್ಯೆಯನ್ನು ನೀಡಲಾಗಿದೆ. ನಟ ದರ್ಶನ್ ಗೆ 7314 ವಿಚಾರಣಾಧೀನ ಖೈದಿ ಸಂಖ್ಯೆ ನೀಡಲಾಗಿದೆ. ಇನ್ನೂ ದರ್ಶನ್ ಗೆಳತಿ ಪವಿತ್ರಾಗೌಡಗೆ ವಿಚಾರಣಾಧೀನ ಖೈದಿ ಸಂಖ್ಯೆ 7313 ನೀಡಲಾಗಿದೆ.
ಕಳೆದ ಭಾರಿ ನಟ ದರ್ಶನ್ ಗೆ ಜೈಲಿನಲ್ಲಿ ನೀಡಿದ್ದ ವಿಚಾರಣಾಧೀನ ಖೈದಿ ಸಂಖ್ಯೆಯನ್ನೇ ದರ್ಶನ್ ಅಭಿಮಾನಿಗಳು ತಮ್ಮ ಮೈ ಮೇಲೆ ಟ್ಯಾಟೂ ಆಗಿ ಹಾಕಿಸಿಕೊಂಡಿದ್ದರು. ಇದರಿಂದಾಗಿ ಅಂಥ ಅಭಿಮಾನಿಗಳನ್ನು ಹುಡುಕಿ ಪೊಲೀಸರು ಕೇಸ್ ಹಾಕಿದ್ದರು. ಈಗ ದರ್ಶನ್ ಹಾಗೂ ಉಳಿದ ಮೂವರು ಸಹ ಆರೋಪಿಗಳನ್ನು ಒಂದೇ ಬ್ಯಾರಕ್ ನಲ್ಲಿ ಇರಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.