Advertisment

ನಟ ದರ್ಶನ್‌ ರಿಂದ ಕೋರ್ಟ್ ಗೆ 3ನೇ ಅರ್ಜಿ ಸಲ್ಲಿಕೆ: ಜಡ್ಜ್ ಖುದ್ದಾಗಿ ಜೈಲಿಗೆ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಲು ಮನವಿ

ನಟ ದರ್ಶನ್ 3ನೇ ಭಾರಿಗೆ ಜೈಲಿನ ಮೂಲಸೌಕರ್ಯಗಳ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 9 ರಂದು ಈ ಹಿಂದೆ ಸಲ್ಲಿಸಿದ್ದ 2ನೇ ಅರ್ಜಿ ಬಗ್ಗೆ ಆದೇಶ ನೀಡುವ ಮುನ್ನ ಕೋರ್ಟ್ ಜಡ್ಜ್ ಖುದ್ದಾಗಿ ಜೈಲಿಗೆ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

author-image
Chandramohan
actor darshan in jail

ನಟ ದರ್ಶನ್ ಹಾಗೂ ಬೆಂಗಳೂರು ಪರಪ್ಪನ ಅಗ್ರಹಾರ ಜೈಲು

Advertisment
  • ನಟ ದರ್ಶನ್‌ರಿಂದ 3ನೇ ಭಾರಿಗೆ ಕೋರ್ಟ್ ಗೆ ಅರ್ಜಿ ಸಲ್ಲಿಕೆ
  • ಕೋರ್ಟ್ ಜಡ್ಜ್ ಖುದ್ದಾಗಿ ಜೈಲಿಗೆ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲನೆಗೆ ಮನವಿ
  • ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಕೋರಿರುವ ಅರ್ಜಿ ಬಗ್ಗೆ ಆದೇಶ ಬಾಕಿ

ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಸರಿಯಾಗಿ ಸೂಕ್ತ ಮೂಲಸೌಕರ್ಯ ನೀಡುತ್ತಿಲ್ಲ ಎಂದು ದೂರಿ ಇಂದು ಮೂರನೇ ಭಾರಿಗೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಮಗೆ ಯಾವುದೇ ಮೂಲಸೌಕರ್ಯ ನೀಡಿಲ್ಲ. ಈ ಬಗ್ಗೆ ಖುದ್ದು ನ್ಯಾಯಾಧೀಶರೇ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕೆಂದು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 310ರ ಅಡಿಯಲ್ಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ 64ನೇ ಸಿಸಿಎಚ್‌ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅಕ್ಟೋಬರ್ 9ನೇ ತಾರೀಖು ಈ ಅರ್ಜಿ ವಿಚಾರಣೆ ನಡೆಯಲಿದೆ.  ಜೈಲಿನ ಅಧಿಕಾರಿಗಳು ತನಗೆ ನೀಡಿರುವ ಸೌಲಭ್ಯಗಳನ್ನು ಖುದ್ದು ಜಡ್ಜ್  ಭೇಟಿ ನೀಡಿ ಪರಿಶೀಲಿಸಬೇಕೆಂದು ನಟ ದರ್ಶನ್ ಕೋರ್ಟ್ ಹಾಗೂ ಜಡ್ಜ್ ಗೆ ಮನವಿ ಮಾಡಿಕೊಂಡಿದ್ದಾರೆ. 
ತನಗೆ ಮೂಲಸೌಕರ್ಯ ನೀಡಬೇಕೆಂದು ಆದೇಶ ಮಾಡಿದ್ದ ಜಡ್ಜ್ ಅವರೇ ಜೈಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ದರ್ಶನ್ ಪರ ವಕೀಲರು ಈಗ ಹೊಸದಾಗಿ ಮೂರನೇ ಭಾರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 310ರಡಿ ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಕೋರ್ಟ್ ಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.  ಕೋರ್ಟ್ ಆದೇಶ ನೀಡಿದ್ದರೂ, ತನಗೆ ಜೈಲಿನಲ್ಲಿ ಮೂಲಸೌಕರ್ಯ ನೀಡಿಲ್ಲ, ಹೀಗಾಗಿ ಜೈಲು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲು ಕೋರ್ಟ್ ಆದೇಶ ನೀಡಬೇಕೆಂದು ಕೋರಿ ಈ ಹಿಂದೆ ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕೋರ್ಟ್ ಈ ಹಿಂದೆ ಕಾಯ್ದಿರಿಸಿತ್ತು. ಆಕ್ಟೋಬರ್ 9 ಕ್ಕೆ ಆದೇಶವನ್ನು 57 ನೇ ಸೆಷನ್ಸ್ ಕೋರ್ಟ್ ಕಾಯ್ದಿರಿಸಿದೆ.  ಆ ಅರ್ಜಿಯ ಬಗ್ಗೆ ಆದೇಶ ನೀಡುವ ಮುನ್ನ ಜೈಲಿಗೆ ಭೇಟಿ ನೀಡಿ ಜೈಲಿನ ಮೂಲಸೌಕರ್ಯ ಪರಿಶೀಲಿಸುವಂತೆ ನಟ ದರ್ಶನ್ ಈಗ ಹೊಸ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.  

Advertisment

ದರ್ಶನ್ ಗೆ ಕಾನೂನು ಪ್ರಕಾರ ಸೌಲಭ್ಯ ನೀಡಿದ್ದಾರೆಯೇ ? ಇಲ್ಲವೋ? ಎಂಬುದನ್ನು ಜೈಲಿಗೆ ಭೇಟಿ ನೀಡಿ ಪರಿಶೀಲಿಸಲು ಕೋರ್ಟ್ ಜಡ್ಜ್ ಗೆ ಮನವಿ ಮಾಡಿದ್ದಾರೆ.  ನ್ಯಾಯಾಧೀಶರು ಜೈಲಿಗೆ ಭೇಟಿ ನೀಡಿ ಸತ್ಯಾಸತ್ಯತೆ ಪರಿಶೀಲಿಸಲು ಮನವಿ ಮಾಡಿದ್ದಾರೆ.  ಕ್ವಾರಂಟೈನ್ ಸೆಲ್ ನಲ್ಲಿಯೇ ದರ್ಶನ್ ನನ್ನ ಇಡಲಾಗಿದೆಯೇ.?ಕ್ವಾರಂಟೈನ್ ಸೆಲ್ ನಿಂದ ಸ್ಥಳಾಂತರ ಮಾಡಿದ್ದಾರೆಯೇ  ಎಂಬುದನ್ನ ಖಾತರಿ ಪಡಿಸಿಕೊಳ್ಳಲು ಮನವಿ ಮಾಡಿದ್ದಾರೆ.  ಜೈಲಿಗೆ ಭೇಟಿ  ನೀಡಿದ ಬಳಿಕ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿಲು ಕೋರಿರುವ ಅರ್ಜಿಯ ಬಗ್ಗೆ  ಆದೇಶ ನೀಡುವಂತೆ ದರ್ಶನ್ ಪರ ವಕೀಲರು ಈಗ ಹೊಸ ಅರ್ಜಿ ಸಲ್ಲಿಸಿದ್ದಾರೆ. ಈ ಹೊಸ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಅಕ್ಟೋಬರ್ 9 ಕ್ಕೆ ಮುಂದೂಡಿದೆ.  ಅಂದೇ ಕಾಯ್ದಿರಿಸಿರುವ ಅರ್ಜಿಯ ಬಗ್ಗೆ ಕೋರ್ಟ್ ಆದೇಶ ನೀಡಲಿದೆ. ಹೀಗಾಗಿ ಅಕ್ಟೋಬರ್ 9 ರಂದು ಕೋರ್ಟ್ ಏನು ಆದೇಶ ನೀಡುತ್ತೆ ಎಂಬ ಬಗ್ಗೆ ಕುತೂಹಲ ಮೂಡಿದೆ. 

bangalore central jail



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan in jail
Advertisment
Advertisment
Advertisment