ನಟ ದರ್ಶನ್‌ಗೆ ಜೈಲಿನಲ್ಲಿ ಇನ್ನೂ ಹಾಸಿಗೆ, ದಿಂಬು ಕೊಟ್ಟಿಲ್ಲ: ಮತ್ತೆ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್‌

ಕೊಲೆ ಆರೋಪಿ ನಟ ದರ್ಶನ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಲೆದಿಂಬು, ಹಾಸಿಗೆ ಕೊಟ್ಟಿಲ್ಲ. ಕಾರಿಡಾರ್ ನಲ್ಲಿ ವಾಕ್ ಮಾಡಲು ಮಾತ್ರ ಅವಕಾಶ ಕೊಟ್ಟಿದ್ದಾರೆ. ಕೋರ್ಟ್ ಆದೇಶದಂತೆ ಕನಿಷ್ಠ ಸೌಲಭ್ಯ ನೀಡಿಲ್ಲ ಎಂದು ಹೊಸ ಅರ್ಜಿಯಲ್ಲಿ ದೂರಿದ್ದಾರೆ.

author-image
Chandramohan
Darshan and dayanada

ಮತ್ತೆ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್‌

Advertisment
  • ಮತ್ತೆ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್‌
  • ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಎಂದು ಕೋರ್ಟ್ ಗೆ ದೂರು
  • ಕೋರ್ಟ್ ಆದೇಶವನ್ನು ಜೈಲು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದೂರು
  • 64ನೇ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ದರ್ಶನ್‌

ಜೈಲಿನಲ್ಲಿ ಕನಿಷ್ಠ  ಸೌಲಭ್ಯ ಸಿಕ್ಕಿಲ್ಲ ಎಂದು ನಟ ದರ್ಶನ್   ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.  ಸೆಷನ್ಸ್ ಕೋರ್ಟ್ ಆದೇಶದ ನಂತರವೂ ಸೌಲಭ್ಯ ಸಿಕ್ಕಿಲ್ಲ ಎಂದು ನಟ ದರ್ಶನ್  ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್​​ಗೆ ರೇಣುಕಾಸ್ವಾಮಿ  ಕೊಲೆ ಕೇಸ್‌  ಆರೋಪಿ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನೂ ನೀಡುತ್ತಿಲ್ಲ ಎಂದು ದೂರಿ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ. 
‘ಕಾರಿಡಾರ್​ನಲ್ಲಿ ವಾಕ್ ಮಾಡಲು ಮಾತ್ರ ಅಧಿಕಾರಿಗಳು ಅವಕಾಶ ನೀಡಿದ್ದಾರೆ’ .  ಸೆಷನ್ಸ್  ಕೋರ್ಟ್ ಹೇಳಿದ್ದ ಕನಿಷ್ಠ ಸೌಲಭ್ಯ ನೀಡುತ್ತಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.  ಸೆಷನ್ಸ್ ಕೋರ್ಟ್​ಗೆ ದರ್ಶನ್ ಪರ ವಕೀಲ ಎಸ್.ಸುನೀಲ್  ಅರ್ಜಿ ಸಲ್ಲಿಸಿದ್ದಾರೆ.  ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆಗೆ ಶಿಫಾರಸ್ಸು ಕೋರಿ ಮನವಿಯನ್ನು ಸೆಷನ್ಸ್ ಕೋರ್ಟ್ ಗೆ ಮಾಡಿಕೊಂಡಿದ್ದಾರೆ. ಹೈಕೋರ್ಟ್​ಗೆ ನ್ಯಾಯಾಂಗ ನಿಂದನೆ ಕೇಸ್‌ಗೆ ಶಿಫಾರಸ್ಸು ಮಾಡಿ ಎಂದು ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 

bangalore central jail


ಜೈಲಾಧಿಕಾರಿಗಳಿಗೆ ಸೆಷನ್ಸ್ ಕೋರ್ಟ್ ಆದೇಶ ನೀಡಲು  ವಕೀಲರು ಹೋಗಿದ್ದರು.  ದರ್ಶನ್ ಪರ ವಕೀಲರು ಹೋಗಿದ್ದಾಗ ಸ್ಪಂದಿಸಿಲ್ಲ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಕೋರ್ಟ್ ಆದೇಶದ ನಂತರವೂ ಹಾಸಿಗೆ, ದಿಂಬು ಸಿಕ್ಕಿಲ್ಲ ಎಂದು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಜೈಲು ಮ್ಯಾನ್ಯುಯೆಲ್​​ನಲ್ಲಿರುವ ಕನಿಷ್ಠ ಸೌಲಭ್ಯವನ್ನೂ ಕೊಡುತ್ತಿಲ್ಲ ಎಂದು ಆರೋಪ  ಮಾಡಲಾಗಿದೆ.  ಸೆಷನ್ಸ್  ಕೋರ್ಟ್ ಆದೇಶವನ್ನು ಜೈಲು  ಅಧಿಕಾರಿಗಳು ಪಾಲಿಸುತ್ತಿಲ್ಲ  ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan in jail
Advertisment