Advertisment

ವಸಿಷ್ಠ ಸಿಂಹ, ಹರಿಪ್ರಿಯಾ ಮುದ್ದಾದ ಮಗನ ಅದ್ಧೂರಿ ನಾಮಕರಣ.. ಪುಟಾಣಿ ಹೆಸರೇನು?

ಸ್ಯಾಂಡಲ್​ವುಡ್​ ಚಿಟ್ಟೆ ವಸಿಷ್ಠ ಸಿಂಹ ಹಾಗೂ ಖ್ಯಾತ ನಟಿ ಹರಿಪ್ರಿಯಾ ಮನೆಯಲ್ಲಿ ಸಂಭ್ರಮ ಜೋರಾಗಿದೆ. ಮಗನಿಗೆ ಹೆಸರಿಡುವ ಶಾಸ್ತ್ರ ಹಮ್ಮಿಕೊಂಡಿದ್ದಾರೆ ಕನ್ನಡದ ಸ್ಟಾರ್ ದಂಪತಿ. ಮುದ್ದಾದ ಮಗನಿಗೆ ಕ್ಯೂಟ್​ ಆಗಿ ಹೆಸರು ಇಟ್ಟಿದ್ದಾರೆ.

author-image
NewsFirst Digital
vashita
Advertisment

ಸ್ಯಾಂಡಲ್​ವುಡ್​ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಮನೆಯಲ್ಲಿ ನಾಮಕರಣ ಸಂಭ್ರಮ ಜೋರಾಗಿದೆ. ಕನ್ನಡದ ಸ್ಟಾರ್ ದಂಪತಿ ತಮ್ಮ ಮುದ್ದಾದ ಮಗನಿಗೆ ಕ್ಯೂಟ್​ ಆಗಿ ಹೆಸರು ಇಟ್ಟಿದ್ದಾರೆ.

Advertisment

ಇದನ್ನೂ ಓದಿ: ನಟಿ ಹರ್ಷಿಕಾ ಪೂಣಚ್ಚ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ.. ತ್ರಿದೇವಿ ಪೊನ್ನಕ್ಕ ಕ್ಯೂಟ್ ವಿಡಿಯೋ!

vasishta simha

ವಿಶೇಷ ಏನೆಂದರೆ ಕೃಷ್ಣ ಜನ್ಮಾಷ್ಟಮಿಯಂದೇ ಮುದ್ದಾದ ಮಗನಿಗೆ ಹೆಸರನ್ನು ಇಟ್ಟಿದ್ದಾರೆ. ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಮಗನಿಗೆ ವಿಪ್ರ (VIPRAH) ಎಂದು ಹೆಸರಿಟ್ಟಿದ್ದಾರೆ.

vasishta simha(5)

ವಿಪ್ರ ಎಂದು ಹೆಸರನ್ನು ಇಟ್ಟಿದ್ದು ಏಕೆ? ಆ ಹೆಸರಿನ ಅರ್ಥವೇನು ಅಂತ ವಸಿಷ್ಠ ಸಿಂಹ ಅವರೇ ಹೇಳಿದ್ದಾರೆ. VI ಅಂದರೆ ವಿಷ್ಣು, PRAH ಪರಮಾರತ್ಮ, ಶಿವ ಅಂತ ಅರ್ಥ. ದೇವರ ಆಶೀರ್ವಾದ ಇವನ ಮೇಲೆ ಇರುತ್ತದೆ ಎಂದಿದ್ದಾರೆ.

Advertisment

vasishta simha(3)

ಜೊತೆಗೆ ನಮ್ಮ ಲೈಫ್​ಗೆ VIP ಬಂದ ಮೇಲೆ ಅವನ ಹೆಸರು ಕೂಡ ವಿಐಪಿ ಅಂತನೇ ಇಡಬೇಕು ಅಂದ್ಕೊಂಡ್ವಿ. ಹೀಗಾಗಿ ವಿಪ್ರ ಅಂತ ಹೆಸರು ಇಟ್ವಿ ಅಂತ ನಟಿ ಹರಿಪ್ರಿಯಾ ಹೇಳಿಕೊಂಡಿದ್ದಾರೆ. 

vasishta simha(5)

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ 2023ರ ಜನವರಿ 26ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮತ್ತೊಂದು ವಿಶೇಷ ಏನೆಂದರೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಮದುವೆ ಆದ ದಿನದಂದೇ ಮಗು ಜನಿಸಿತ್ತು. ಅಂದರೆ 2025ರ ಜನವರಿ 26ರಂದು ಪುತ್ರನ ಆಗಮನ ಆಗಿತ್ತು. ‘ನಮ್ಮ ಮದುವೆ ದಿನವೇ ಅವನು ಬಂದಿದ್ದಾನೆ’ ಎಂದು ವಸಿಷ್ಠ ಸಿಂಹ ಅವರು ಪೋಸ್ಟ್ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

vasishta simha and haripriya
Advertisment
Advertisment
Advertisment