ವಿಮಾನದ ಲ್ಯಾಂಡಿಂಗ್‌ ಗೇರ್ ಕಂಪಾರ್ಟ್ ಮೆಂಟ್‌ನಲ್ಲಿ 2 ಗಂಟೆ ಕುಳಿತು ದೆಹಲಿಗೆ ಬಂದ ಅಫ್ಘನಿಸ್ತಾನದ ಬಾಲಕ! ಮುಂದೇನಾಯ್ತು?

ಅಫ್ಘನಿಸ್ತಾನದ 13 ವರ್ಷದ ಬಾಲಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ ಕಂಪಾರ್ಟ್ ಮೆಂಟ್‌ ನಲ್ಲಿ ಕುಳಿತು ಕಾಬೂಲ್ ನಿಂದ ದೆಹಲಿಗೆ ಬಂದಿದ್ದಾನೆ. 2 ಗಂಟೆ ಕಾಲ ವಿಮಾನದ ಕೆಳಭಾಗದಲ್ಲಿರುವ ಲ್ಯಾಂಡಿಂಗ್ ಗೇರ್ ಕಂಪಾರ್ಟ್ ಮೆಂಟ್‌ ನಲ್ಲಿ ಇದ್ದಿದ್ದೇ ಅಚ್ಚರಿ. ಬಾಲಕ ಸ್ಪಲ್ಪ ಯಾಮಾರಿದ್ದರೂ, ಕೆಳಗೆ ಬಿದ್ದು ಸಾವನ್ನಪ್ಪುತ್ತಿದ್ದ.

author-image
Chandramohan
FLIGHT LANDING GEAR

ವಿಮಾನದ ಲ್ಯಾಂಡಿಂಗ್ ಗೇರ್‌ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತಿದ್ದ ಬಾಲಕ

Advertisment
  • ವಿಮಾನದ ಲ್ಯಾಂಡಿಂಗ್ ಗೇರ್‌ ಕಂಪಾರ್ಟ್ ಮೆಂಟ್ ನಲ್ಲಿ ಕುಳಿತಿದ್ದ ಬಾಲಕ
  • ಕಾಬೂಲ್ ಏರ್ ಪೋರ್ಟ್ ನಿಂದ ದೆಹಲಿವರೆಗೂ ಬಂದ ಬಾಲಕ
  • ಕುತೂಹಲಕ್ಕಾಗಿ ಏರ್ ಪೋರ್ಟ್ ಗೆ ಎಂಟ್ರಿಯಾಗಿದ್ದೆ ಎಂದ ಬಾಲಕ
  • ವಿಚಾರಣೆ ನಡೆಸಿ, ಬಾಲಕನನ್ನು ಅಫ್ಘನ್ ಗೆ ವಾಪಸ್ ಕಳಿಸಿದ ಭಾರತ

ವಿಮಾನದ ಕೆಳ ಭಾಗದಲ್ಲಿ ವಿಮಾನ ಹಿಡಿದುಕೊಂಡು ಹಾರಾಟ ನಡೆಸಲು ಅಫ್ಘನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮತ್ತೆ ಶುರುವಾದಾಗ ಅನೇಕ ಮಂದಿ ಯತ್ನಿಸಿದ್ದರು. ಕೆಲವರು ಹಾರುತ್ತಿದ್ದ ವಿಮಾನ ಹಿಡಿದು ಹಾರಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ತಾಲಿಬಾನ್ ಕ್ರೂರ ಅಳ್ವಿಕೆಯಲ್ಲಿ ಇರುವುದಕ್ಕಿಂತ ಬೇರೆ ದೇಶಕ್ಕೆ ಪಲಾಯನ ಮಾಡಲು ಸಾಕಷ್ಟು ಮಂದಿ ಯತ್ನಿಸಿ ವಿಫಲವಾಗಿದ್ದಾರೆ. 
ಆದರೇ, ಈಗ ಅಫ್ಘನಿಸ್ತಾನದ 13  ವರ್ಷದ ಬಾಲಕನೊಬ್ಬ ವಿಮಾನದ ಲ್ಯಾಂಡಿಂಗ್ ಗೇರ್‌ ಕಂಪಾರ್ಟ್ ಮೆಂಟ್ ನಲ್ಲೇ ಅಡಗಿಟ್ಟುಕೊಂಡು 2 ಗಂಟೆಗಳ ಕಾಲ ಅಲ್ಲೇ ಇದ್ದು, ಕಾಬೂಲ್ ನಿಂದ ದೆಹಲಿಗೆ ಬಂದಿರುವ ಅಚ್ಚರಿಯ ಘಟನೆ ನಡೆದಿದೆ. ಕುತೂಹಲದಿಂದ ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್ ಮೆಂಟ್ ನಲ್ಲೇ ಇದ್ದಿದ್ದಾಗಿ 13 ವರ್ಷದ ಬಾಲಕ ಹೇಳಿದ್ದಾನೆ.  ಇದೇ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಕಾಬೂಲ್ ನಿಂದ ದೆಹಲಿಗೆ ಬಂದು ವಿಮಾನ ಲ್ಯಾಂಡಿಂಗ್ ಆದ ಬಳಿಕ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಗಮನಕ್ಕೆ ಬಾಲಕ ಬಂದಿರುವುದು ಗಮನಕ್ಕೆ ಬಂದಿದೆ. 
13 ವರ್ಷದ ಬಾಲಕ, ಕಾಬೂಲ್ ಏರ್ ಪೋರ್ಟ್ ನ ನಿರ್ಬಂಧಿತ ಪ್ರದೇಶಕ್ಕೆ ನುಗ್ಗಿದ್ದಾನೆ. ಬಳಿಕ ಅಲ್ಲಿದ್ದ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್‌ ಕಂಪಾರ್ಟ್ ಮೆಂಟ್‌ಗೆ ಹೋಗಿ ಅಡಗಿ ಕುಳಿತಿದ್ದಾನೆ. ಕೆಎಎಂ ಏರ್ ಪ್ಲೈಟ್ RQ-4401  ವಿಮಾನವು ಭಾನುವಾರ ಬೆಳಿಗ್ಗೆ 9 ಗಂಟೆಗೆ ಕಾಬೂಲ್ ನಿಂದ ಟೇಕಾಫ್ ಆಗಿದೆ. ಬೆಳಿಗ್ಗೆ 11 ಗಂಟೆಗೆ ದೆಹಲಿಗೆ ಬಂದು ಲ್ಯಾಂಡಿಂಗ್ ಆಗಿದೆ. 

FLIGHT LANDING GEAR02




ದೆಹಲಿ ವಿಮಾನ ನಿಲ್ದಾಣದೊಳಗೆ ಓಡಾಡುತ್ತಿದ್ದ ಬಾಲಕನನ್ನು ಏರ್ ಲೈನ್ಸ್ ಸಿಬ್ಬಂದಿ ನೋಡಿ, ಸಿಐಎಸ್‌ಎಫ್ ಸಿಬ್ಬಂದಿಯ ವಶಕ್ಕೆ ನೀಡಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್ -3 ಕ್ಕೆ ವಿಚಾರಣೆಗೆ ಕರೆದೊಯ್ದಿದ್ದಾರೆ. ಅಲ್ಲೇ ವಿಚಾರಣೆ ನಡೆಸಿದ್ದಾರೆ. 
ಕುತೂಹಲದಿಂದ ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್ ಮೆಂಟ್ ಗೆ ಹೋಗಿ ಕುಳಿತುಕೊಂಡೇ ಎಂದು ಬಾಲಕ ಅಧಿಕಾರಿಗಳ ವಿಚಾರಣೆ ವೇಳೆ ಹೇಳಿದ್ದಾನೆ. ತನಗೆ ಅಲ್ಲಿ ಕುಳಿತುಕೊಳ್ಳುವ ರಿಸ್ಕ್ ಬಗ್ಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ. 
ಬಳಿಕ ಅಧಿಕಾರಿಗಳು, ಆ 13 ವರ್ಷದ ಬಾಲಕನನ್ನು ಭಾನುವಾರವೇ ಅಫ್ಘನಿಸ್ತಾನಕ್ಕೆ ಅದೇ ವಿಮಾನದಲ್ಲಿ ವಾಪಸ್ ಕಳಿಸಿದ್ದಾರೆ. 
ಇನ್ನೂ KAM  ಏರ್ ಲೈನ್ಸ್ ವಿಮಾನದ ಲ್ಯಾಂಡಿಂಗ್ ಗೇರ್ ಕಂಪಾರ್ಟ್ ಮೆಂಟ್‌ನ ಸಂಪೂರ್ಣ ತಪಾಸಣೆ ನಡೆಸಿದೆ. ಈ ವೇಳೆ ಕೆಂಪು ಬಣ್ಣದ ಸ್ಪೀಕರ್ ಮಾತ್ರ ಸಿಕ್ಕಿದೆ. ಇದು ಆ ಬಾಲಕನದ್ದೇ ಎಂದು ಅಧಿಕಾರಿಗಳು ಹೇಳಿದ್ದಾರೆ.  ವಿಮಾನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದ್ದಾರೆ. ವಿಧ್ವಂಸಕ ತಡೆ ತಪಾಸಣೆ ಬಳಿಕ ಹಾರಾಟಕ್ಕೆ ಕ್ಲಿಯರೆನ್ಸ್ ಸಿಕ್ಕಿದೆ. ವಿಮಾನ ಸಂಪೂರ್ಣ ಸೇಫ್ ಎಂದು ಘೋಷಿಸಿ, ಹಾರಾಟಕ್ಕೆ ಅನುಮತಿ ನೀಡಲಾಗಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

AFGHANISTAN BOY HIDES IN FLIGHT LANDING GEAR COMPARTMENT
Advertisment