/newsfirstlive-kannada/media/media_files/2025/09/11/kul-man-ghising-2025-09-11-14-48-27.jpg)
ಎಲೆಕ್ಟ್ರಿಕಲ್ ಇಂಜಿನಿಯರ್ ಕುಲ್ ಮಾನ್ ಘೀಸಿಂಗ್ ಪ್ರಧಾನಿ ರೇಸ್ ನಲ್ಲಿದ್ದಾರೆ
ನೇಪಾಳದ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಲು ಈಗ ಇಂಜಿನಿಯರ್ ಕುಲ್ ಮಾನ್ ಘೀಸಿಂಗ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ನೇಪಾಳದ ಪ್ರಧಾನಿ ಸ್ಥಾನಕ್ಕೆ ಕೆ.ಪಿ.ಶರ್ಮಾ ಓಲಿ ರಾಜೀನಾಮೆ ನೀಡಿದ ಬಳಿಕ ಮಧ್ಯಂತರ ಸರ್ಕಾರವನ್ನು ಯಾರು ಮುನ್ನಡೆಸಬೇಕೆಂಬ ಚರ್ಚೆ ನಡೆಯುತ್ತಿದೆ. ಮೊದಲಿಗೆ ಕಠ್ಮುಂಡು ಮೇಯರ್ ಬಾಲೇಂದ್ರ ಶಾ ಹೆಸರು ಕೇಳಿ ಬಂದಿತ್ತು. ಬಳಿಕ ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಹೆಸರು ಕೇಳಿ ಬಂದಿತ್ತು. ಆದರೇ, ಸುಶೀಲಾ ಕರ್ಕಿ ಅವರಿಗೆ ಈಗ 73 ವರ್ಷ. ಹೀಗಾಗಿ ದೇಶದ ಯುವಜನತೆಯ ಆಶೋತ್ತರಗಳನ್ನು ಈಡೇರಿಸಲು ಸುಶೀಲಾ ಕರ್ಕಿ ಸೂಕ್ತವಲ್ಲ. ಜೊತೆಗೆ ದೇಶದ ಸಂವಿಧಾನ ಕೂಡ ಸುಶೀಲಾ ಕರ್ಕಿ ಮಧ್ಯಂತರ ಸರ್ಕಾರದ ಪ್ರಧಾನಿಯಾಗಲು ಅವಕಾಶ ಕೊಡಲ್ಲ. ಹೀಗಾಗಿ ಬೇರೊಬ್ಬರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಶುರುವಾಗಿದೆ. ಸುಶೀಲಾ ಕರ್ಕಿ ಈಗ ಮಧ್ಯಂತರ ಸರ್ಕಾರದ ಪ್ರಧಾನಿ ಸ್ಥಾನದ ರೇಸ್ ನಿಂದ ಹೊರ ಬಿದ್ದಿದ್ದಾರೆ.
ಸುಶೀಿಲಾ ಕರ್ಕಿ, ಬಾಲೇಂದ್ರ ಶಾ, ಕುಲ್ ಮಾನ್ ಘೀಸಿಂಗ್.
ಅಚ್ಚರಿಯ ಬೆಳವಣಿಗೆಯಲ್ಲಿ ನೇಪಾಳದ ಎಲೆಕ್ಟ್ರಿಸಿಟಿ ಅಥಾರಿಟಿ ಅಧ್ಯಕ್ಷರಾಗಿದ್ದ ಕುಲ್ ಮಾನ್ ಘೀಸಿಂಗ್ ಹೆಸರು ಪ್ರಧಾನಿ ಸ್ಥಾನಕ್ಕೆ ಕೇಳಿ ಬಂದಿದೆ. ನೇಪಾಳದಲ್ಲಿ ಕರೆಂಟ್ ಲೋಡ್ ಶೆಡ್ಡಿಂಗ್ ಸಮಸ್ಯೆಯನ್ನು ಪರಿಹರಿಸಿದವರು ಕುಲ್ ಮಾನ್ ಘೀಸಿಂಗ್. ಬಡರಾಷ್ಟ್ರ ನೇಪಾಳಕ್ಕೆ ಕರೆಂಟ್ ಅನ್ನು ನಿರಂತರವಾಗಿ ನೀಡಿದವರು ಕುಲ್ ಮಾನ್ ಘೀಸಿಂಗ್. ಹೀಗಾಗಿ ಕುಲ್ ಮಾನ್ ಘೀಸಿಂಗ್ ಈಗ ಯುವಜನತೆಯ ಫೇವರಿಟ್ ವ್ಯಕ್ತಿಯಾಗಿದ್ದಾರೆ. ನೇಪಾಳದ ಎಲೆಕ್ಟ್ರಿಸಿಟಿ ಅಥಾರಿಟಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.
ಹೀಗಾಗಿ ಕುಲ್ ಮಾನ್ ಘೀಸಿಂಗ್, ರಾಷ್ಟ್ರಪ್ರೇಮಿ, ಎಲ್ಲರ ಫೇವರಿಟ್ ವ್ಯಕ್ತಿ. ಅಚ್ಚರಿಯ ಬೆಳವಣಿಗೆಯಲ್ಲಿ ಕುಲ್ ಮಾನ್ ಘೀಸಿಂಗ್ ಹೆಸರಿಗೆ ಹೆಚ್ಚಿನ ಒಲವು ವ್ಯಕ್ತವಾಗಿದೆ.
ಪ್ರತಿಭಟನಾಕಾರ ಯುವಜನತೆಯೇ ಸುಶೀಲಾ ಕರ್ಕಿ ಹೆಸರು ಅನ್ನು ತಿರಸ್ಕರಿಸಿದ್ದಾರೆ. ಸಂವಿಧಾನವು ನಿವೃತ್ತ ನ್ಯಾಯಮೂರ್ತಿಗಳು ಪ್ರಧಾನಿಯಾಗಲು ಅವಕಾಶ ಕೊಡಲ್ಲ. ಜೊತೆಗೆ ಸುಶೀಲಾ ಕರ್ಕಿಗೆ 73 ವರ್ಷ ವಯಸ್ಸಾಗಿದೆ ಎಂದು ನೇಪಾಳದ ಪ್ರತಿಭಟನಾನಿರತ ಯುವಜನತೆ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.