/newsfirstlive-kannada/media/media_files/2026/01/23/palash-muchhal-money-cheating-2026-01-23-14-40-08.jpg)
ಆರ್ ಸಿಬಿ ಕ್ಯಾಪ್ಟನ್ ಸ್ಮೃತಿ ಮಂದಾನ ಜೊತೆ ಮದುವೆ ರದ್ದು ಬಳಿಕ ಪಾಲಶ್ ಮುಚ್ಚಾಲ್ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಿನಿಮಾ ನಿರ್ಮಾಣಕ್ಕೆಂದು 40 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಿದಾನ್ಯಾನ್ ಮಾನೆಯಿಂದ ಪಲಾಶ್ ಮುಚ್ಚಾಲ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಕೆಯಾಗಿದೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಕೆಯಾಗಿದೆ.
2023 ರ ಡಿಸೆಂಬರ್ 5 ರಂದು ಮೊದಲ ಭಾರಿಗೆ ಪಲಾಶ್ ಮುಚ್ಚಾಲ್- ವಿದಾನ್ಯಾನ್ ಮಾನೆ ಭೇಟಿಯಾಗಿದ್ದರು. ಈ ವೇಳೆ ಸಿನಿಮಾ ನಿರ್ಮಾಣದಲ್ಲಿ ಹಣ ಹೂಡಿಕೆಯ ಆಸಕ್ತಿಯನ್ನು ವಿದಾನ್ಯಾನ್ ಮಾನೆ ತೋರಿದ್ದರು. ತನ್ನ ಮುಂದಿನ ಸಿನಿಮಾ ನಜಾರಿಯಾ ದಲ್ಲಿ ಹಣ ಹೂಡಲು ಪಲಾಶ್ ಮುಚ್ಚಾಲ್ ಹೇಳಿದ್ದರು. ಸಿನಿಮಾ ಓಟಿಟಿ ಯಲ್ಲಿ ಬಿಡುಗಡೆ ಬಳಿಕ 25 ಲಕ್ಷ ರೂಪಾಯಿಗೆ 12 ಲಕ್ಷ ರೂಪಾಯಿ ಲಾಭ ಗಳಿಕೆಯ ಆಮಿಷವೊಡ್ಡಿದ್ದರು. ಜೊತೆಗೆ ಸಿನಿಮಾದಲ್ಲಿ ವಿದಾನ್ಯಾನ್ ಮಾನೆಗೆ ನಟನೆಯ ಆಫರ್ ಅನ್ನು ಪಲಾಶ್ ಮುಚ್ಚಾಲ್ ನೀಡಿದ್ದರು. ಹೀಗಾಗಿ ಬಳಿಕ ಎರಡು ಭಾರಿ ಭೇಟಿಯಾಗಿ 40 ಲಕ್ಷ ರೂಪಾಯಿ ಹಣವನ್ನು ವಿದಾನ್ಯಾನ್ ಮಾನೆ, ಪಲಾಶ್ ಮುಚ್ಚಾಲ್ ಗೆ ನೀಡಿದ್ದರು. ಆದರೆ ಸಿನಿಮಾ ನಿರ್ಮಾಣ ಪೂರ್ಣವಾಗಲಿಲ್ಲ . ಹೀಗಾಗಿ ತನ್ನ ಹಣ ವಾಪಸು ನೀಡುವಂತೆ ಪಲಾಶ್ ಮುಚ್ಚಾಲ್ ಗೆ ವಿದಾನ್ಯಾನ್ ಮಾನೆ ಬೇಡಿಕೆ ಇಟ್ಟಿದ್ದರು. ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದಿದ್ದರಿಂದ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆಯನ್ನು ಸಾಂಗ್ಲಿ ಜಿಲ್ಲೆಯ ಪೊಲೀಸರು ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us