/newsfirstlive-kannada/media/media_files/2025/08/28/bangalore-dowry-death-2025-08-28-13-37-51.jpg)
ಮೃತ ಯುವತಿ ಶಿಲ್ಪಾ ಹಾಗೂ ಪೊಲೀಸ್ ಠಾಣೆ
ಕಳೆದ ವಾರ ಉತ್ತರ ಪ್ರದೇಶದ ನೋಯ್ಡಾದ ವರದಕ್ಷಿಣ ಕಿರುಕುಳ ಕೇಸ್ ನೋಡಿ ದೇಶದ ಜನರು ಬೆಚ್ಚಿಬಿದ್ದಿದ್ದರು. ಈಗಿನ ಕಾಲದಲ್ಲೂ ವರದಕ್ಷಿಣೆಗಾಗಿ ಹೆಂಡತಿಯನ್ನು ಹಿಂಸಿಸುವ, ಜೀವಂತವಾಗಿ ಬೆಂಕಿ ಹಚ್ಚುವ ಘಟನೆಗಳು ನಡೆದಿದ್ದನ್ನು ಕೇಳಿ ಜನರು ಆಕ್ರೋಶಗೊಂಡಿದ್ದರು. ಈಗ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಮತ್ತೊಂದು ವರದಕ್ಷಿಣೆ ಕಿರುಕುಳದಿಂದ ಸಾವು ಸಂಭವಿಸಿದೆ.
ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶಿಲ್ಪಾ ಎಂಬಾಕೆಯ ಮೃತದೇಹ ಪತ್ತೆಯಾಗಿದೆ. ಕಳೆದ ಎರಡೂವರೆ ವರ್ಷ ಹಿಂದೆ ಶಿಲ್ಪಾ ಮತ್ತು ಪ್ರವೀಣ್ ವಿವಾಹವಾಗಿದ್ದರು. ಶಿಲ್ಪಾ ಮತ್ತು ಪ್ರವೀಣ್ ದಂಪತಿಗೆ ಒಂದೂವರೆ ವರ್ಷದ ಮಗು ಇದೆ.
ಆಗಸ್ಟ 26 ರಂದು ರಾತ್ರಿ ವೇಳೆ ಮನೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶಿಲ್ಪಾ ಮೃತದೇಹ ಪತ್ತೆಯಾಗಿದೆ. ಶಿಲ್ಪಾ ಕುಟುಂಬಸ್ಥರು ಈಗ ವರದಕ್ಷಿಣೆ ಕಿರುಕುಳದ ಆರೋಪ ಮಾಡುತ್ತಿದ್ದಾರೆ. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಲ್ಪಾ ಪತಿ ಪ್ರವೀಣ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶಿಲ್ಪಾ ಹಾಗೂ ಪ್ರವೀಣ್ ದಾಂಪತ್ಯಕ್ಕೆ ಮುದ್ದಾದ ಗಂಡು ಮಗು ಇದೆ.
ಶಿಲ್ಪಾ ನೋಡಲು ಮುದ್ದಾಗಿರುವ ಯುವತಿ. ಮುದ್ದಾದ ಗಂಡು ಮಗುವಿನ ತಾಯಿ. ಆದರೇ, ಜೀವ ಕಳೆದುಕೊಳ್ಳುವಂಥದ್ದು ಏನಾಗಿತ್ತು. ಗಂಡ, ಗಂಡನ ಪೋಷಕರಿಂದ ಏನ್ ಕಿರುಕುಳ ಇತ್ತು ಎಂಬ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಿಲ್ಪಾ ಪೋಷಕರು ಪತಿ ಪ್ರವೀಣ್ ಹಾಗೂ ಪೋಷಕರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ಹೀಗಾಗಿ ಕೇಸ್ ದಾಖಲಿಸಿಕೊಂಡಿರುವ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಪೊಲೀಸರು ಪ್ರವೀಣ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ