/newsfirstlive-kannada/media/media_files/2025/09/12/maharashtra-mayuri-death-2025-09-12-13-07-18.jpg)
ವರದಕ್ಷಿಣೆ ಕಿರುಕುಳದಿಂದ ಮಯೂರಿ ಸಾವು
ದೇಶದಲ್ಲಿ ವರದಕ್ಷಿಣೆ ಕಿರುಕುಳದಿಂದ ಮತ್ತೊಂದು ಸಾವು ಸಂಭವಿಸಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ನವ ವಿವಾಹಿತೆ ಸಾವಿಗೆ ಶರಣಾಗಿದ್ದಾಳೆ. ಮಹಾರಾಷ್ಟ್ರದ ಜಲಾಗಾಂವ್ ಜಿಲ್ಲೆಯಲ್ಲಿ 23 ವರ್ಷದ ಮಯೂರಿ ಗೌರವ್ ತೋಸರ್ ಸಾವಿಗೆ ಶರಣಾದ ನವ ವಿವಾಹಿತೆ. ಈಕೆಯನ್ನು ನಾಲ್ಕು ತಿಂಗಳ ಹಿಂದೆಯಷ್ಟೇ ಗೌರವ್ ತೋಸರ್ ಜೊತೆ ಮೇ, 10 ರಂದು ಮದುವೆ ಮಾಡಿಕೊಡಲಾಗಿತ್ತು. ಜಲಾಗಾಂವ್‌ನ ಸುಂದರಮೋತಿ ನಗರದಲ್ಲಿ ವಾಸ ಇದ್ದರು. ಆದರೇ, ಪತಿ ಗೌರವ್ ತೋಸರ್ ಹಾಗೂ ಕುಟುಂಬದವರು ವರದಕ್ಷಿಣೆಗಾಗಿ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ. ಈ ಕಿರುಕುಳ ತಡೆಯಲಾಗದೇ, ತನ್ನ ಬರ್ತ್ ಡೇ ಆದ ಮಾರನೇ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮನೆಯವರ ಜೊತೆ ಸಾಕಷ್ಟು ಭಾರಿ ರಾಜೀ ಸಂಧಾನದ ಮಾತುಕತೆ ಕೂಡ ನಡೆದಿತ್ತು. ಆದರೇ, ಯಾವುದೂ ಕೂಡ ಸಕ್ಸಸ್ ಆಗಿರಲಿಲ್ಲ.
ಪತಿಯ ಮನೆಯವರು ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಹಣ ಕೇಳುತ್ತಿದ್ದರು. ಇದನ್ನು ನಮ್ಮ ಮಗಳು ಮಯೂರಿ , ನಮ್ಮ ಜೊತೆಯೂ ಸಾಕಷ್ಟು ಭಾರಿ ಹೇಳಿದ್ದಳು ಎಂದು ಮಯೂರಿ ತಂದೆ ಭಗವಾನ್ ಬಡುಕಲೆ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/09/12/maharashtra-mayuri-death02-2025-09-12-13-10-22.jpg)
ವರದಕ್ಷಿಣೆ ಕಿರುಕುಳದಿಂದ ಸಾವಿಗೆ ಶರಣಾದ ಮಯೂರಿ
ತಕ್ಷಣವೇ ಪತಿ ಗೌರವ್ ತೋಸರ್ ಸೇರಿದಂತೆ ಪತಿಯ ಕುಟುಂಬವನ್ನು ಸಂಪೂರ್ಣವಾಗಿ ಆರೆಸ್ಟ್ ಮಾಡಬೇಕು. ಆರೆಸ್ಟ್ ಮಾಡದಿದ್ದರೇ, ನಾವು ಪಾರ್ಥೀವ ಶರೀರವನ್ನು ಪಡೆಯಲ್ಲ, ಪೋಸ್ಟ್ ಮಾರ್ಟಂ ಮಾಡಲು ಕೂಡ ಬಿಡಲ್ಲ ಎಂದು ಮೃತ ಮಯೂರಿ ಪೋಷಕರು ಬಿಗಿ ಪಟ್ಟು ಹಿಡಿದಿದ್ದರು. ಇನ್ನೂ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದೇವೆ. ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸರು ಮಯೂರಿ ಪೋಷಕರಿಗೆ ತಿಳಿಸಿದ್ದಾರೆ. ಇದರಿಂದಾಗಿ ಜಲಾಗಾಂವ್‌ನ ಜಿಲ್ಲಾಸ್ಪತ್ರೆ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇನ್ನೂ ಮಯೂರಿ ಪೋಷಕರು ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯವರು. ಮಯೂರಿ ಸ್ವಗ್ರಾಮದಲ್ಲಿ ಮಯೂರಿ ಸಾವಿನಿಂದಾಗಿ ಜನರು ಆಕ್ರೋಶಗೊಂಡಿದ್ದರು. ಜನರು ಶೀಘ್ರ ನ್ಯಾಯ ಸಿಗಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us