/newsfirstlive-kannada/media/media_files/2025/08/03/anchor-anushree-2025-08-03-11-24-08.jpg)
ಈಗ ಎಲ್ಲೆಲ್ಲೂ ಈ ಸ್ಟಾರ್ ನಿರೂಪಕಿಯ ಮದುವೆಯದ್ದೇ ಮಾತುಕತೆ. ಮದುವೆ ಯಾವಾಗ ಎನ್ನುತ್ತಿದ್ದ ಅಭಿಮಾನಿಗಳಿಗೆ ಈ ತಿಂಗಳ ಕೊನೆಯಲ್ಲಿ ಉತ್ತರ ಸಿಗಲಿದೆ. ಹೌದು, ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ಅವರು ಈ ತಿಂಗಳು ಅಂದರೆ, ಆಗಸ್ಟ್ 28ಕ್ಕೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ:ಕೊನೆಗೂ ಮದುವೆಗೆ ಸಜ್ಜಾದ ಅನುಶ್ರೀ.. ಮುಹೂರ್ತ ಫಿಕ್ಸ್, ಹುಡುಗ ಯಾರು..?
ಬೆಂಗಳೂರು ಮೂಲದ ಕಾರ್ಪೋರೇಟ್ ಉದ್ಯೋಗಿಯನ್ನು ಅನುಶ್ರೀ ವಿವಾಹ ಆಗಲಿದ್ದಾರೆ. ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮಾಹಿತಿಗಳ ಪ್ರಕಾರ ಬೆಂಗಳೂರಿನಲ್ಲಿಯೇ ಗ್ರ್ಯಾಂಡ್ ಆಗಿ ಮದುವೆ ನಡೆಯಲಿದೆ ಎನ್ನಲಾಗಿದೆ.
ಇನ್ನೂ, ಇದರ ಮಧ್ಯೆ ವೇದಿಕೆ ಮೇಲೆ ಭಾವಿ ಪತಿಗೆ LOVE YOU ಹೇಳಿ ನಾಚಿ ನೀರಾಗಿದ್ದಾರೆ. ಹೌದು, ಜೀ ಕನ್ನಡ ರಿಲೀಸ್ ಮಾಡಿರೋ ಪ್ರೋಮೋದಲ್ಲಿ ಮಹಾನಟಿ ವೇದಿಕೆ ಮೇಲೆ ನಿಶ್ವಿಕಾ ನಾಯ್ಡು, ಅನು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬೇಕು ಅಂದ್ರೆ ಹೇಗೆ ಹೇಳ್ತೀರಾ ಅಂತಾರೆ. ಆಗ ಅನುಶ್ರೀ, ನನ್ನ ಜೀವನದಲ್ಲಿ ಪೂರ್ಣಚಂದ್ರನಾಗಿ ನೀ ಬೇಗ ಬಾ I LOVE YOU ಎಂದು ಹೇಳುತ್ತಲೇ ನಾಚಿಕೊಂಡಿದ್ದಾರೆ. ಆಗ ಅನುಶ್ರೀ ಅವರು ಭಾವಿ ಪತಿಗೆ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದನ್ನು ಕೇಳಿ ಎಲ್ಲರೂ ಫುಲ್ ಖುಷ್ ಆಗಿದ್ದಾರೆ.
ಮಂಗಳೂರಿನ ಸೂರತ್ಕಲ್ ಮೂಲದ ಅನುಶ್ರೀ, ತಮ್ಮ ಚುರುಕಾದ ನಿರೂಪಣೆಯಿಂದ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ‘ಟೆಲಿ ಆಂತ್ಯಕ್ಷರಿ’ ಕಾರ್ಯಕ್ರಮದಿಂದ ವೃತ್ತಿಜೀವನ ಆರಂಭಿಸಿದ ಅನುಶ್ರೀ, ಈಟಿವಿ ಕನ್ನಡದ ‘ಡಿಮ್ಯಾಂಡಪ್ಪೋ ಡಿಮಾಂಡು’ ಕಾರ್ಯಕ್ರಮದ ಮೂಲಕ ಹೆಚ್ಚು ಜನಪ್ರಿಯರಾದರು.
ಕನ್ನಡ ಬಿಗ್ ಬಾಸ್ನಲ್ಲಿ 76 ದಿನಗಳ ಕಾಲ ಭಾಗವಹಿಸಿದ್ದ ಅನುಶ್ರೀ, ‘ಸುವರ್ಣ ಫಿಲ್ಮ್ ಅವಾರ್ಡ್ಸ್’, ‘ಫಿಲ್ಮ್‌ಫೇರ್ ಅವಾರ್ಡ್ಸ್’ ಮತ್ತು ‘ಎಸ್‌ಐಐಎಂಎ’ನಂತಹ ಪ್ರತಿಷ್ಠಿತ ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ಬೆಂಕಿಪಟ್ನ, ಉಪ್ಪು ಹುಳಿ ಖಾರ, ಮುರುಳಿ ಮೀಟ್ಸ್ ಮೀರಾ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಮಹಾನಟಿ ಶೋನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ