/newsfirstlive-kannada/media/media_files/2026/03/02/astrologer-sachidananda-babu-guruji-2-2026-03-02-18-33-20.jpg)
ಖ್ಯಾತ ಜ್ಯೋತಿಷಿ ಸಚ್ಚಿದಾನಂದ ಬಾಬು ಗುರೂಜಿ ಭವಿಷ್ಯ ನಿಜವಾಯ್ತು
ಇರಾನ್ ವಿರುದ್ಧ ಅಮೆರಿಕಾ ಹಾಗೂ ಇಸ್ರೇಲ್ ದೇಶಗಳು ಯುದ್ಧ ಘೋಷಿಸಿವೆ. ಫೆಬ್ರವರಿ 28 ರಿಂದ ಈ ಯುದ್ಧ ಆರಂಭವಾಗಿದೆ. ಆದರೇ, ಈ ಯುದ್ಧದ ಬಗ್ಗೆ ಮೂರು ದಿನ ಮೊದಲೇ ಖ್ಯಾತ ಜ್ಯೋತಿಷಿ ಸಚ್ಚಿದಾನಂದ ಬಾಬು ಗುರೂಜಿ ಭವಿಷ್ಯ ನುಡಿದಿದ್ದರು. ಫೆಬ್ರವರಿ 25 ರಂದೇ ಸಚ್ಚಿದಾನಂದ ಬಾಬು ಗುರೂಜಿ ಭವಿಷ್ಯ ನುಡಿದಿದ್ದರು. ಅದರ ಭವಿಷ್ಯದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ಫೆಬ್ರವರಿ 25 ರಂದೇ ಅಪ್ ಲೋಡ್ ಕೂಡ ಮಾಡಿದ್ದಾರೆ. ಬ್ಲಡ್ ಮೂನ್ ಆದರೇ, ಯುದ್ಧ ಭೀತಿ ಆಗುತ್ತೆ ಎಂದು ಸಚ್ಚಿದಾನಂದ ಬಾಬು ಗುರೂಜಿ ಭವಿಷ್ಯ ನುಡಿದಿದ್ದರು. ಅಫ್ಘಾನ್, ಇರಾನ್, ಇರಾಕ್, ಸೌದಿ ಅರೇಬಿಯಾಗೆ ಅಂತರಿಕ ಸಮಸ್ಯೆಯಾಗುತ್ತೆ ಎಂದು ಸಚ್ಚಿದಾನಂದ ಬಾಬು ಗುರೂಜಿ ಭವಿಷ್ಯ ನುಡಿದಿದ್ದರು. ಯುದ್ಧದ ಬಗ್ಗೆ ಸ್ಪಷ್ಟವಾಗಿ ನುಡಿದಿದ್ದ ಭವಿಷ್ಯ ಈಗ ನಿಜವಾಗಿದೆ. ಫೆಬ್ರವರಿ 28 ರಿಂದ ಇಸ್ರೇಲ್, ಅಮೆರಿಕಾ ಜಂಟಿಯಾಗಿ ಇರಾನ್ ಮೇಲೆ ಯುದ್ಧ ನಡೆಸುತ್ತಿವೆ. ಸಚ್ಚಿದಾನಂದ ಬಾಬು ಗುರೂಜಿ ಭವಿಷ್ಯ ನುಡಿದಿದ್ದ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡುತ್ತಿದ್ದೇವೆ. ತಾವು ನೋಡಬಹುದು.
ಈ ಯುದ್ಧದಲ್ಲಿ ಇರಾನ್ ಸುಪ್ರೀಂ ಲೀಡರ್ ಆಯತೋಲ್ಲಾ ಅಲಿ ಖಮೇನಿ ಹತ್ಯೆಯಾಗಿದೆ. ಬಳಿಕ ಇರಾನ್ ಸೇನೆ ಕೂಡ ಮಧ್ಯಪ್ರಾಚ್ಯದ ಸೌದಿ ಅರೇಬಿಯಾ, ಕುವೈತ್, ದುಬೈ, ಅಬುಧಾಬಿ ಸೇರಿದಂತೆ ಗಲ್ಪ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ.ಯುದ್ಧ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us