Advertisment

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಅಗಸದಲ್ಲಿ ಸೂರ್ಯಕಿರಣ್ ವಿಮಾನಗಳ ವೈಮಾನಿಕ ಪ್ರದರ್ಶನದ ಮೆರಗು

ಮೈಸೂರು ಅರಮನೆಯಲ್ಲಿ ಇಂದು ಆಯುದ್ಧ ಪೂಜೆ ವಿಜೃಂಭಣೆಯಿಂದ ನಡೆಯಿತು. ಯದುವೀರ್ ಒಡೆಯರ್ ಅರಮನೆಯ ಆಯುಧಗಳಿಗೆ ಪೂಜೆ ಸಲ್ಲಿಸಿದ್ದರು. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಳಸುತ್ತಿದ್ದ ಕಾರ್ ಗಳಿಗೂ ಪೂಜೆ ಸಲ್ಲಿಸಲಾಯಿತು. ಮೈಸೂರಿನ ಅಗಸದಲ್ಲಿ ಸೂರ್ಯಕಿರಣ ವಿಮಾನಗಳು ಬಣ್ಣದ ಚಿತ್ತಾರ ಮೂಢಿಸಿದ್ದವು.

author-image
Chandramohan
MYSORE AYUDHA POOJA

ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ

Advertisment
  • ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ
  • ಅರಮನೆ ಆಯುಧಗಳಿಗೆ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್‌
  • ಪಟ್ಟದ ಅನೆ, ಕುದುರೆ, ಹಸುಗೆ ಪೂಜೆ, ಕಾರ್ ಗಳಿಗೂ ವಿಶೇಷ ಪೂಜೆ
  • ಸೂರ್ಯ ಕಿರಣ್ ವಿಮಾನಗಳಿಂದ ಚಿತ್ತಾಕರ್ಷಕ ಪ್ರದರ್ಶನ


ನಾಡಹಬ್ಬ ದಸರೆಗೆ ಒಂದೇ ಒಂದು‌ ದಿನ ಬಾಕಿ ಉಳಿದಿದೆ. ಈವತ್ತು ಅರಮನೆ ಅಂಗಳದಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ನಡೆದರೆ, ಅತ್ತ ಪಂಜಿನ ಕವಾಯತು ಮೈದಾನದಲ್ಲಿ ರೋಮಾಂಚನಕಾರಿಯಾಗಿ ವೈಮಾನಿಕ ಪ್ರದರ್ಶನ ಕಂಡಿತು. ಇದೇ ಸಂದರ್ಭಕ್ಕೆ ದಸರೆಯ ಎಲ್ಲ ಕಾರ್ಯಕ್ರಮಗಳು ಸಮಾಪ್ತಿಯಾದವು

Advertisment

* ಅರಮನೆ ಅಂಗಳದಲ್ಲಿ ಕಳೆಗಟ್ಟಿದ ಗತಕಾಲದ ವೈಭವ
* ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಗೆ ಪೂಜೆ
* ರಾಜರು ಬಳಸುತ್ತಿದ್ದ ಆಯುಧಗಳು, ಕತ್ತಿ, ಗುರಾಣಿ, ಐಷಾರಾಮಿ ಕಾರುಗಳಿಗೂ ಪೂಜೆ
ಅರಮನೆ ಅಂಗಳದಲ್ಲಿ ಇವತ್ತು ಗತಕಾಲದ ವೈಭವ ಮೇಳೈಸಿತ್ತು. ಬೆಳಗ್ಗಿನಿಂದಲೂ ಕೂಡ ಹಲವು ಧಾರ್ಮಿಕ ವಿಧಿ ವಿಧಾನಗಳು ಜರುಗಿದವು. ರಾಜಪೋಷಾಕಿನಲ್ಲಿದ್ದ ಯದುವೀರ್ ಒಡೆಯರ್ ಬೆಳಗ್ಗೆ ಪ್ರಾತಃ ಕಾಲದಿಂದ ಅರಮನೆಯಲ್ಲಿ ಪೂಜೆ, ಹೋಮ,ಹವನ ನೆರೆವೇರಿಸಿದ್ದರು. ಹತ್ತು ಗಂಟೆ ಬಳಿಕ ರಾಜಮಹಾರಾಜರು ಬಳಸುತ್ತಿದ್ದ ಆಯುಧಗಳು, ಕತ್ತಿ‌ಗುರಾಣಿಗಳು, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ, ಪಟ್ಟದ ಒಂಟೆಗಳಿಗೆ ಯದುವೀರ್ ಒಡೆಯರ್ ಪೂಜೆ ಸಲ್ಲಿಸಿದರು. 
ಇದೇ ವೇಳೆ ರಾಜರು ಬಳಸುತ್ತಿದ್ದ ವಾಹನಗಳು,ಐಷಾರಾಮಿ ಕಾರುಗಳಿಗೆ ಪೂಜೆ ಸಲ್ಲಿಸಲಾಯಿತು. ಆ ಮೂಲಕ ಅರಮನೆ ಆಯುಧಪೂಜಾ ಕೈಂಕರ್ಯ ಸಮಾಪ್ತಿ ಆಯ್ತು. 
 ಇತ್ತ, ಬನ್ನಿಮಂಟಪದ ಟಾರ್ಚ್ ಲೈಟ್ ಪರೇಡ್ ಮೈದಾನದಲ್ಲಿ ಸೂರ್ಯಕಿರಣ್ ಟೀಂ ಅತ್ಯಾಕರ್ಷಕ ವೈಮಾನಿಕ ಪ್ರದರ್ಶನ ನಡೆಸಿಕೊಟ್ಟರು. ಬಳಿಕ ಚಿತ್ತಾಕರ್ಷಕ ಡ್ರೋನ್ ಶೋ ಕಣ್ಮನ ಸೆಳೆಯಿತು. ನಂತರ ನಡೆದ ಪಂಜಿನ ಕವಾಯತು ರಿಹರ್ಸಲ್ ನೋಡುಗರ ಹೃನ್ಮನ ಗೆದ್ದಿತು. 
ಈ‌ ನಡುವೆ ದಸರೆ ಅಂಗವಾಗಿ ತೆರೆದುಕೊಂಡಿದ್ದ ರೈತದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಅರಮನೆ ಮುಂಭಾಗದ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಏಳು ಕಡೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. 
ಒಟ್ಟಾರೆ, ‌ನಾಡಹಬ್ಬ ದಸರೆಯ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗುವ ಹೊತ್ತಿಗೆ ಬಹುತೇಕ ಕಾರ್ಯಕ್ರಮಗಳು ತೆರೆ ಕಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Mysore Dasara
Advertisment
Advertisment
Advertisment