/newsfirstlive-kannada/media/media_files/2025/12/31/banana-1-2025-12-31-16-53-47.jpg)
ಹಣ್ಣುಗಳನ್ನ ತಿನ್ನೋದ್ರಿಂದ ಮನುಷ್ಯ ಇನ್ನಷ್ಟು ವರ್ಷ ಆರೋಗ್ಯವಾಗಿ ಇರಬಹುದು. ಅದರಲ್ಲೂ ಹೈ ಪ್ರೊಟೀನ್​, ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್‌ಗಳಿರು ಹಣ್ಣುಗಳನ್ನ ತಿನ್ನೋದ್ರಿಂದ ಇನ್ನಷ್ಟು ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ಅದರಲ್ಲಿ ಬಾಳೆಹಣ್ಣಿನ ವಿಷಯಕ್ಕೆ ಬಂದ್ರೆ, ಹೆಚ್ಚು ಫೈಬರ್, ಪ್ರೋಟೀನ್ ಅಥವಾ ಆರೋಗ್ಯಕರ ಕೊಬ್ಬುಗಳಿಂದ ಕೂಡಿದೆ. ಇನ್ನು ಬಾಳೆಹಣ್ಣನ್ನು ತಪ್ಪಾಗಿ ಅರ್ಥೈಸಲಾಗಿದೆ. ಕೆಲವರು ತೂಕ ಹೆಚ್ಚಾಗುವ ಭಯದಿಂದ ಬಾಳೆಹಣ್ಣನ್ನು ತ್ಯಜಿಸಿದ್ರೆ, ಇನ್ನು ಕೆಲವರು ತ್ವರಿತ ಶಕ್ತಿಗಾಗಿ ಅವುಗಳನ್ನು ತಿನ್ನುತ್ತಾರೆ. ಗುರುಗ್ರಾಮ್‌ನ ಮಾರೆಂಗೊ ಏಷ್ಯಾ ಆಸ್ಪತ್ರೆಯ ಯುನಿಟ್ ಹೆಡ್ ಡಯಟೀಷಿಯನ್ ಪರ್ಮೀತ್ ಕೌರ್ ಅವರ ಪ್ರಕಾರ, ಬಾಳೆಹಣ್ಣುಗಳನ್ನ ಹೇಗೆ, ಯಾವಾಗ ಮತ್ತು ಎಷ್ಟು ಸೇವಿಸುತ್ತೇವೆ ಅನ್ನೋದರ ಮೇಲೆ ತೂಕ ಹೆಚ್ಚಾಗುವುದು ಹಾಗೂ ಕಡಿಮೆಯಾಗೋದನ್ನ ಸೂಚಿಸುತ್ತದೆ ಅಂತ ಹೇಳಿದ್ದಾರೆ.
ಒಂದು ದಿನಕ್ಕೆ ಎಷ್ಟು ಬಾಳೆಹಣ್ಣು ತಿಂದರೆ ಉತ್ತಮ?
ಇನ್ನು ತಜ್ಞರು ಹೇಳುವ ಪ್ರಕಾರ, ಹೆಚ್ಚುವರಿ ಕ್ಯಾಲೊರಿಗಳಿಲ್ಲದೆ ಅಗತ್ಯ ಪೋಷಕಾಂಶಗಳನ್ನು ಪಡೆಯಲು ದಿನಕ್ಕೆ ಒಂದರಿಂದ ಎರಡು ಬಾಳೆಹಣ್ಣುಗಳನ್ನು ಸೇವಿಸುವುದು ಉತ್ತಮ. ದೈಹಿಕವಾಗಿ ಸಕ್ರಿಯರಾಗಿರುವ ವ್ಯಕ್ತಿಗಳು ವ್ಯಾಯಾಮದ ಸಮಯದಲ್ಲಿ ಒಂದರಿಂದ ಎರಡು ಬಾಳೆಹಣ್ಣುಗಳನ್ನು ಸೇವಿಸಬಹುದು ಅಂತ ತಜ್ಞರು ಹೇಳುತ್ತಾರೆ.
/filters:format(webp)/newsfirstlive-kannada/media/media_files/2025/09/01/banana_new_1-2025-09-01-09-17-37.jpg)
ತೂಕ ಇಳಿಕೆಗೆ ಬಾಳೆಹಣ್ಣು ಹೇಗೆ ಸಹಾಯಕ?
ಬಾಳೆಹಣ್ಣು ತೂಕ ಹೆಚ್ಚಿಸುವುದರ ಜೊತೆಗೆ ತೂಕ ಇಳಿಕೆಗೂ ಸಹಾಯಕವಾಗುತ್ತದೆ. ವಿಶೇಷವಾಗಿ ಹಸಿರು ಬಾಳೆಹಣ್ಣುಗಳಲ್ಲಿ ತೂಕ ಇಳಿಸುವ ಸಾಮರ್ಥ್ಯ ಇರುತ್ತದೆ. ಹಸಿರು ಬಾಳೆಹಣ್ಣುಗಳನ್ನ ಸೇವಿಸೋದ್ರಿಂದ ಅವುಗಳಲ್ಲಿನ ನಿರೋಧಕ ಪಿಷ್ಟ ಮತ್ತು ನಾರಿನ ಅಂಶ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಬಾಳೆಹಣ್ಣುಗಳು ಹಸಿವು ನಿಯಂತ್ರಣಕ್ಕೆ ಪರಿಣಾಮಕಾರಿಯಾಗುತ್ತವೆ ಮತ್ತು ದಿನವಿಡೀ ನಿರಂತರ ಶಕ್ತಿಯನ್ನು ನೀಡುತ್ತವೆ.
ಬಾಳೆಹಣ್ಣು ತೂಕ ಹೆಚ್ಚಿಸಲು ಕಾರಣವೇ?
ಬಾಳೆಹಣ್ಣುಗಳನ್ನ ತಿನ್ನೋದ್ರಿಂದ ತೂಕ ಹೆಚ್ಚಾಗುವುದು ಜೊತೆಗೆ ಕ್ಯಾಲೊರಿ ಪ್ರಮಾಣ ಕೂಡ ಅಧಿಕವಾಗುತ್ತದೆ. ಕಡಲೆಕಾಯಿ, ಬೆಣ್ಣೆಯೊಂದಿಗೆ ಬಾಳೆಹಣ್ಣು ತಿನ್ನೋದ್ರಿಂದ ತೂಕ ನಿರ್ವಹಣೆಗೆ ಪೂರಕವಾಗುತ್ತದೆ. ಜೊತೆಗೆ ಗ್ರೀಕ್ ಮೊಸರಿನೊಂದಿಗೆ ಬಾಳೆಹಣ್ಣು ತಿನ್ನೋದ್ರಿಂದ ಜೀರ್ಣಕ್ರಿಯೆ ನಿಧಾನಗೊಳಿಸುತ್ತವೆ. ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸುತ್ತವೆ ಮತ್ತು ಹಸಿವನ್ನು ನಿಯಂತ್ರಣದಲ್ಲಿಡುತ್ತವೆ.
ಒಟ್ಟಾರೆ ಬಾಳೆಹಣ್ಣುಗಳು ತೂಕ ಇಳಿಸುವ ಶತ್ರುವೂ ಅಲ್ಲ , ತೂಕ ಹೆಚ್ಚಿಸುವ ಮಾರ್ಗವೂ ಅಲ್ಲ. ಮಿತವಾಗಿ ಸೇವಿಸಿದಾಗ, ಸರಿಯಾದ ಪಕ್ವತೆಯಲ್ಲಿ ಆರಿಸಿದಾಗ ಅವು ಪೌಷ್ಟಿಕ, ತೂಕ ಸ್ನೇಹಿ ಆಹಾರವಾಗಬಹುದು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us