/newsfirstlive-kannada/media/media_files/2025/08/16/actor-darshan-pavithra-photos-2025-08-16-18-09-36.jpg)
ಜೈಲಿನಲ್ಲಿ ತೆಗೆದ ನಟ ದರ್ಶನ್ , ಪವಿತ್ರಗೌಡ ಪೋಟೋ
ನಟ ದರ್ಶನ್ ಮೊನ್ನೆ ಗುರುವಾರ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲು ಸೇರಿದ ಎಲ್ಲ ಖೈದಿಗಳ ಪೋಟೋಗಳನ್ನ ಜೈಲಿನಲ್ಲಿ ತೆಗೆಯಲಾಗುತ್ತೆ. ಅದೇ ರೀತಿ ನಟ ದರ್ಶನ್ , ನಟಿ ಪವಿತ್ರಾಗೌಡ, ಆರೋಪಿ ಪ್ರದೋಷ್ ಪೋಟೋವನ್ನು ಜೈಲು ಅಧಿಕಾರಿಗಳು ತೆಗೆದಿದ್ದಾರೆ. ನಟ ದರ್ಶನ್ ತಲೆ ಕೂದಲು ಮುಡಿಕೊಟ್ಟು ಪೊಲೀಸರಿಗೆ ಶರಣಾಗಿ ಜೈಲು ಪಾಲಾಗಿರುವುದು ಪೋಟೋ ನೋಡಿದರೇ, ಗೊತ್ತಾಗುತ್ತೆ.
ಮೊದಲೆಲ್ಲಾ ನಟ ದರ್ಶನ್ ತಲೆಯಲ್ಲಿ ಕೂದಲು ಕಡಿಮೆ ಇರುವ ವಿಗ್ ಧರಿಸುತ್ತಿದ್ದರು. ಆದರೇ, ಈ ಭಾರಿ ಜೈಲು ಪಾಲಾಗುವ ಸಾಧ್ಯತೆಗಳು ಮುಂಚಿತವಾಗಿ ಇದ್ದಿದ್ದರಿಂದ ಪೊಲೀಸರಿಗೆ ಶರಣಾಗುವ ಮುನ್ನ ತಮಿಳುನಾಡಿನ ಈರೋಡ್ ಜಿಲ್ಲೆಯ ಬಣ್ಣಾರಿಯಮ್ಮ ದೇವಾಲಯಕ್ಕೆ ತೆರಳಿ ತಲೆ ಮುಡಿಕೊಟ್ಟಿದ್ದಾರೆ. ಆದಾದ ಬಳಿಕ ಕೊಡಗಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.
ಇನ್ನೂ ಎ1 ಆರೋಪಿ ಪವಿತ್ರಾಗೌಡರ ಎರಡು ಪೋಟೋಗಳನ್ನು ಜೈಲು ಅಧಿಕಾರಿಗಳು ತೆಗೆದಿದ್ದಾರೆ. ಒಂದು ಪೋಟೋದಲ್ಲಿ ನಗುತ್ತಲೇ ಪವಿತ್ರಾಗೌಡ ಪೋಟೋಗೆ ಪೋಸ್ ಕೊಟ್ಟಿದ್ದಾರೆ. ಮತ್ತೊಂದು ಪೋಟೋದಲ್ಲಿ ಗಂಭೀರವದನೆಯಾಗಿ ಪೋಟೋಗೆ ಪೋಸ್ ನೀಡಿದ್ದಾರೆ.
ಜೈಲಿನಲ್ಲಿ ತೆಗೆದ ಎ1 ಆರೋಪಿ ಪವಿತ್ರಗೌಡ ಪೋಟೋ. ಒಂದು ಪೋಟೋದಲ್ಲಿ ಗಂಭೀರಮುಖಭಾವ, ಮತ್ತೊಂದರಲ್ಲಿ ನಗುಮುಖ.
ಇನ್ನೂ ಮತ್ತೊಬ್ಬ ಪ್ರಮುಖ ಆರೋಪಿ ಪ್ರದೋಷ್ ಪೋಟೋವನ್ನು ಕೂಡ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ತೆಗೆದು ಜೈಲಿನ ಕಡತಕ್ಕೆ ಸೇರಿಸಿದ್ದಾರೆ. ಪ್ರದೋಷ್ ಬೆಂಗಳೂರಿನ ಶಾಸಕರೊಬ್ಬರ ಸಂಬಂಧಿ. ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.ಒರಾಕಲ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಅದೇ ಕೆಲಸವನ್ನು ಮುಂದುವರಿಸಿದ್ದರೇ, ಜೀವನದಲ್ಲಿ ನೆಮ್ಮದಿಯಾಗಿರುತ್ತಿದ್ದ. ಆದರೇ, ನಟ ದರ್ಶನ್ ಜೊತೆ ಸೇರಿ ಕೊಲೆ ಕೇಸ್ ನಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದಾನೆ. ರೆಡ್ ಚೆಕ್ಸ್ ಶರ್ಟ್ ಧರಿಸಿರುವ ಪ್ರದೋಷ್ ಗಂಭೀರ ಮುಖಭಾವದಲ್ಲಿ ಪೋಟೋಗೆ ಪೋಸ್ ನೀಡಿದ್ದಾನೆ.
ಆರೋಪಿ ಪ್ರದೋಶ್ ಪೋಟೋ.
ಜೈಲು ಪಾಲಾದ ಎಲ್ಲ ಖೈದಿಗಳ ಪೋಟೋವನ್ನು ಇದೇ ರೀತಿ ತೆಗೆಯಲಾಗುತ್ತೆ. ಮುಂದೆ ಇದೇ ಆರೋಪಿಗಳು ಬೇರೆ ಯಾವುದಾದರೂ ಕೇಸ್ ನಲ್ಲಿ ಭಾಗಿಯಾದರೇ, ಆರೋಪಿಗಳ ಪೋಟೋ ಬೇಕಾಗುತ್ತೆ ಎಂಬ ಉದ್ದೇಶದಿಂದ ಎಲ್ಲ ಆರೋಪಿಗಳ ಪೋಟೋವನ್ನು ದಾಖಲೆ, ಜೈಲು ಕಡತಕ್ಕೆ ಸೇರಿಸಲು ತೆಗೆಯಲಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ