/newsfirstlive-kannada/media/media_files/2025/08/16/pavithra-gowda-jail-photos-2025-08-16-17-58-25.jpg)
ಪವಿತ್ರಾಗೌಡ ಜಾಮೀನು ಅರ್ಜಿ ಕೋರ್ಟ್ ನಲ್ಲಿ ವಜಾ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಎ1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ 64ನೇ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಕಳೆದ ವಾರ ಈ ಅರ್ಜಿಯ ಬಗ್ಗೆ ಹಿರಿಯ ವಕೀಲ ಬಾಲನ್ ಅವರು ಪವಿತ್ರಾಗೌಡ ಪರವಾಗಿ ವಾದ ಮಂಡಿಸಿದ್ದರು. ತಾಂತ್ರಿಕ ಅಂಶಗಳ ಆಧಾರದ ಮೇಲೆ ಜಾಮೀನು ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದರು. ಈ ಅರ್ಜಿಗೆ ಪ್ರಾಸಿಕ್ಯೂಷನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಕಾಯ್ದಿರಿಸಿದ್ದ ಆದೇಶವನ್ನು 64ನೇ ಸೆಷನ್ಸ್ ಕೋರ್ಟ್ ಇಂದು ಪ್ರಕಟಿಸಿದೆ. ಎ1 ಆರೋಪಿ ಪವಿತ್ರಾಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 64ನೇ ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ನಟಿ, ಕಲಾವಿದೆ, ಕೊಲೆ ಕೇಸ್ ನ ಎ1 ಆರೋಪಿ ಪವಿತ್ರಾಗೌಡಗೆ ನಿರಾಶೆಯಾಗಿದೆ. ನಟಿ ಪವಿತ್ರಾಗೌಡ ಜೈಲು ವಾಸ ಮುಂದುವರಿಯಲಿದೆ.
/filters:format(webp)/newsfirstlive-kannada/media/media_files/2025/08/22/bangalore-central-jail-2025-08-22-18-16-58.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us