/newsfirstlive-kannada/media/media_files/2025/09/01/bda-head-office-2025-09-01-17-11-24.jpg)
ಬಿಡಿಎ ಕೇಂದ್ರ ಕಚೇರಿ
ಪ್ರತಿಯೊಬ್ಬರಿಗೂ ಬೆಂಗಳೂರಲ್ಲಿ ಒಂದು ಸೈಟ್ ಮಾಡೋ ಆಸೆ ಇದ್ದೇ ಇರುತ್ತೆ. ಅದ್ರಲ್ಲೂ ಕಡಿಮೆ ಬೆಲೆಗೆ ಬಿಡಿಎ ಸೈಟ್ ಸಿಗುತ್ತಾ? ಎಂದು ಕಾಯ್ತಾನೆ ಇರ್ತಾರೆ. ಇಂಥವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಗುಡ್ನ್ಯೂಸ್ ಕೊಟ್ಟಿದೆ.
ಬಿಡಿಎ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಸುತ್ತ ಹೊಸದಾಗಿ ಆರು ಲೇಔಟ್ ನಿರ್ಮಾಣ ಮಾಡೋಕೆ ಮುಂದಾಗಿದೆ. ಇದಕ್ಕಾಗಿ ಸುಮಾರು 6,217 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರ ಅನುಮೋದನೆ ನೀಡಿದೆ.
ಎಲ್ಲೆಲ್ಲಿ ಎಷ್ಟು ಎಕರೆ ಸ್ವಾಧೀನ ಮಾಡಿಕೊಳ್ತಾರೆ ಅಂತ ನೋಡೋದಾದ್ರೆ
ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ಹೊಂದಿಕೊಂಡಂತೆ 6 ಬಡಾವಣೆಗಳನ್ನು ಒಟ್ಟು 6,217 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಿದೆ. ಬಡಾವಣೆಗಳ ನಿರ್ಮಾಣಕ್ಕೆ ಭೂಮಿ ಕೊಡೋ ಭೂ ಮಾಲೀಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಬಿಡಿಎ ಸೈಟ್ ಅಥವಾ ನಗದು ಪರಿಹಾರ ನೀಡಲಾಗುತ್ತೆ ಅಂತ ಸರ್ಕಾರ ತಿಳಿಸಿದೆ.
ಮಾರಗೊಂಡನಹಳ್ಳಿಯಲ್ಲಿ 84 ಎಕರೆ, ಹುಲಿಮಂಗಲ, ಬೆಟ್ಟದಾಸನಪುರ, ಎಸ್.ಬಿಂಗೀಪುರದಲ್ಲಿ 516 ಎಕರೆ, ಹುಲ್ಲಹಳ್ಳಿಯಲ್ಲಿ 216 ಎಕರೆ, ಬೇಗೂರು, ಹೊಮ್ಮದೇವನಹಳ್ಳಿ, ಕಮ್ಮನಹಳ್ಳಿ, ಮೈಲಸಂದ್ರ, ಎಲ್ಲೇನಹಳ್ಳಿ, ಹುಲ್ಲಳ್ಳಿಯಲ್ಲಿ 510 ಎಕರೆ, ಬಿ.ಎಂ ಕಾವಲ್, ಕಗ್ಗಲೀಪುರ, ಯು.ಎಂ ಕಾವಲ್, ಅಗರ, ಗುಳಕಮಲೈ, ಒ.ಬಿ ಚೂಡನಹಳ್ಳಿ, ಉತ್ತರಿಯಲ್ಲಿ 4,206 ಎಕರೆ, ಬಿ.ಎಂ ಕಾವಲ್, ದೇವಗೆರೆ, ಗಂಗಸಂದ್ರ, ಗುಡಿಮಾವುನಲ್ಲಿ 652 ಎಕರೆ ಭೂಮಿಯಲ್ಲಿ ಈ ಲೇಔಟ್ಗಳ ನಿರ್ಮಾಣ ಆಗಲಿದೆ.
50 ಸಾವಿರ ಸೈಟ್ ನಿರ್ಮಾಣದ ಗುರಿ
ಆರು ಹೊಸ ಬಡಾವಣೆಗಳಿಗಾಗಿ 22 ಗ್ರಾಮಗಳ ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದೆ. ಇಲ್ಲಿ 50 ಸಾವಿರಕ್ಕೂ ಹೆಚ್ಚು ಸೈಟ್ಗಳನ್ನ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಹಾಗೆಯೇ ಈ ಬಡಾವಣೆಗಳ ನಡುವೆಯೇ 100 ಮೀಟರ್ ಅಗಲದ ಪಿಆರ್‌ಆರ್-2 ನಿರ್ಮಿಸಲು ಉದ್ದೇಶಿಸಲಾಗಿದೆ. ಆಗ ಸಂಪರ್ಕ ರಸ್ತೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚು ಪ್ರಾಮುಖ್ಯತೆ ಸಿಗಲಿದೆ. ಅದ್ರಲ್ಲೂ ಜನರಿಗೆ ಕಡಿಮೆ ದರದಲ್ಲಿ ಸೈಟ್ಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ.
ಬಿಡಿಎ ಈಗಾಗಲೇ ಕೆಂಪೇಗೌಡ ಲೇಔಟ್, ಶಿವರಾಮಕಾರಂತ ಲೇಔಟ್ ನಿರ್ಮಿಸುತ್ತಿದೆ. ಜೊತೆಗೆ ತುಮಕೂರು ರಸ್ತೆಯಿಂದ ಬ್ಯುಸಿನೆಸ್ ಕಾರಿಡಾರ್ ಅಕ್ಕಪಕ್ಕದಲ್ಲೂ ಹೊಸ ಲೇಔಟ್ ಗಳನ್ನು ನಿರ್ಮಾಣ ಮಾಡುವ ಗುರಿ, ಪ್ಲ್ಯಾನ್ ಅನ್ನು ಬಿಡಿಎ ಹಾಕಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.