/newsfirstlive-kannada/media/media_files/2025/08/23/mask-man-dharamasthala-011-2025-08-23-13-10-46.jpg)
ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ
ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ ಎಸ್‌ಐಟಿ ಪೊಲೀಸರ ವಶಕ್ಕೆ ನೀಡಿ ಬೆಳ್ತಂಗಡಿ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಮುಂದಿನ 10 ದಿನಗಳ ಕಾಲ ಚಿನ್ನಯ್ಯನನ್ನು ಎಸ್‌ಐಟಿ ಪೊಲೀಸರು ತೀವ್ರ ವಿಚಾರಣೆ ನಡೆಸುವರು. ಹತ್ತು ದಿನಗಳ ಕಾಲ ಈ ಸುಳ್ಳು ದೂರಿನ ಹಿಂದಿನ ಗ್ಯಾಂಗ್ ಯಾವುದು? ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಏನೆಲ್ಲಾ ಆಮಿಷವೊಡ್ಡಲಾಗಿತ್ತು ಎಂಬ ಬಗ್ಗೆ ವಿಚಾರಣೆ ನಡೆಸುವರು.
ಇಂದು ಬೆಳ್ತಂಗಡಿ ಕೋರ್ಟ್ ಗೆ ಚೆನ್ನಯ್ಯನನ್ನು ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು ಎಸ್‌ಐಟಿ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಬೆಳ್ತಂಗಡಿ ಕೋರ್ಟ್ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯ ತಾನು ಮೊದಲು ತಂದಿದ್ದ ತಲೆ ಬುರುಡೆಯನ್ನು ಎಲ್ಲಿಂದ ತಂದೆ ಎಂಬುದನ್ನು ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಲು ವಿಫಲನಾಗಿದ್ದೇನೆ. ತಲೆ ಬುರುಡೆಯ ಮೂಲವನ್ನು ಬಹಿರಂಗಪಡಿಸದೇ ಇರುವ ಕಾರಣದಿಂದ ಮಾಸ್ಕ್ ಮ್ಯಾನ್ ನನ್ನು ಬಂಧಿಸಲಾಗಿದೆ.
ಮಾಸ್ಕ್ ಮ್ಯಾನ್ ಚಿನ್ನಯ್ಯಗೆ 2 ಲಕ್ಷ ರೂಪಾಯಿ ಹಣವನ್ನು ಗ್ಯಾಂಗ್ ಒಂದು ನೀಡಿ ಸುಳ್ಳು ದೂರು ನೀಡಲು ಟ್ರೇನಿಂಗ್ ನೀಡಿದ್ದಾರಂತೆ. ಆ ಟ್ರೇನಿಂಗ್ ಪಡೆದ ಬಳಿಕ ಪೊಲೀಸರಿಗೆ ಚಿನ್ನಯ್ಯ ಸುಳ್ಳು ದೂರು ಕೊಟ್ಟಿದ್ದ. ಗ್ಯಾಂಗ್ ಒಂದು ತಲೆ ಬುರುಡೆಯನ್ನು ಚಿನ್ನಯ್ಯನ ಕೈಗೆ ಕೊಟ್ಟು ಅದನ್ನು ಪೊಲೀಸರು, ಕೋರ್ಟ್ ಗೆ ಒಪ್ಪಿಸು ಎಂದು ಹೇಳಿದ್ದಾರಂತೆ. ಆ ಗ್ಯಾಂಗ್ ಹೇಳಿದಂತೆ ಚಿನ್ನಯ್ಯ ಕೇಳಿದ್ದಾನೆ. ಈಗ ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯಗೆ ಸುಳ್ಳು ದೂರು ನೀಡಲು ತರಬೇತಿ ಕೊಟ್ಟ ಗ್ಯಾಂಗ್ ಬಗ್ಗೆಯೇ ಗಮನ ಕೇಂದ್ರೀಕರಿಸಿ ತನಿಖೆ ನಡೆಸುವರು. ಚಿನ್ನಯ್ಯನನ್ನು ಈ ಬಗ್ಗೆಯೇ ತೀವ್ರ ವಿಚಾರಣೆ ನಡೆಸುವರು.
ಜೊತೆಗೆ ಮೊದಲ ತಲೆ ಬುರುಡೆಯನ್ನು ಎಲ್ಲಿಂದ ತಂದಿದ್ದ ಎನ್ನುವ ಬಗ್ಗೆ ವಿಚಾರಣೆ ನಡೆಸುವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.