/newsfirstlive-kannada/media/media_files/2025/10/30/bhel-kannada-rajyosatva-2025-10-30-14-12-23.jpg)
BHEL ನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಒಪ್ಪಿಗೆ
ನವೆಂಬರ್ ಒಂದರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಆಚರಣೆಗೆ ಬೆಂಗಳೂರಿನಲ್ಲಿರುವ ಬಿ.ಎಚ್.ಇ.ಎಲ್. ಮುಂದಾಗಿರುವ ಕ್ರಮ ಸ್ವಾಗತಾರ್ಹವೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಠಿಣ ಆಗ್ರಹಕ್ಕೆ ಸ್ಪಂದಿಸಿ ಸಂಸ್ಥೆಯ ಹಿರಿಯ ಅಧಿಕಾರಿಗಳು ತಮ್ಮೆಲ್ಲಾ ಸಹೋದ್ಯೋಗಿಗಳು, ಸಂಘ-ಸಂಸ್ಥೆಗಳನ್ನು ರಾಜ್ಯೋತ್ಸವ ಆಚರಣೆಗೆ ಆಹ್ವಾನಿಸಿರುವುದು ಅಭಿನಂದನಾರ್ಹ ಎಂದಿರುವ ಪುರುಷೋತ್ತಮ ಬಿಳಿಮಲೆ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಂಸ್ಥೆ ಕನ್ನಡಕ್ಕೆ ಸಲ್ಲಬೇಕಾದ ಸ್ಥಾನಮಾನವನ್ನು ಒದಗಿಸುವುದು ಅದರ ಕರ್ತವ್ಯ. ಬಿ.ಎಚ್.ಇ.ಎಲ್ ವತಿಯಿಂದ ಪ್ರಾಧಿಕಾರದ ನಿರ್ದೇಶನಕ್ಕೆ ಸಕಾಲದಲ್ಲಿ ಗೌರವ ದೊರಕಿರುವುದು ಅರ್ಥಪೂರ್ಣವಾಗಿದ್ದು, ಇದು ಇತರ ಕೇಂದ್ರೀಯ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಅವರು ಆಶಿಸಿದ್ದಾರೆ.
/filters:format(webp)/newsfirstlive-kannada/media/media_files/2025/10/30/bhel-kannada-rajyosatva03-2025-10-30-14-21-28.jpg)
ಬೆಂಗಳೂರಿನಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಈ ಮೊದಲು ಕನ್ನಡ ರಾಜ್ಯೋತ್ಸವ ಆಚರಿಸಲು ನಿರಾಕರಿಸಿತ್ತು. ಕನ್ನಡ ರಾಜ್ಯೋತ್ಸವ ಆಚರಣೆಗೆ ಕನ್ನಡ ಸಂಘಸಂಸ್ಥೆಗಳಿಗೆ ಅನುಮತಿ ನೀಡಿರಲಿಲ್ಲ.
ಇದರಿಂದಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರವು ಬಿಎಚ್‌ಇಎಲ್ ಗೆ ಪತ್ರ ಬರೆದು ಕನ್ನಡ ರಾಜ್ಯೋತ್ಸವ ಆಚರಿಸಲು ಆಗ್ರಹಿಸಿತ್ತು. ಈ ಆಗ್ರಹಕ್ಕೆ ಬಿಎಚ್‌ಇಎಲ್ ಈಗ ಮಣಿದಿದೆ. ಬಿಎಚ್‌ಇಎಲ್ ಕೇಂದ್ರದ ಭಾರಿ ಕೈಗಾರಿಕೆ ಇಲಾಖೆಯಡಿ ಇರುವ ಸಂಸ್ಥೆ. ಕೇಂದ್ರದ ಭಾರಿ ಕೈಗಾರಿಕಾ ಇಲಾಖೆಗೆ ಈಗ ಕರ್ನಾಟಕದ ಎಚ್.ಡಿ.ಕುಮಾರಸ್ವಾಮಿ ಅವರೇ ಕೇಂದ್ರ ಸಚಿವರಾಗಿದ್ದಾರೆ. ಕುಮಾರಸ್ವಾಮಿ ಅವರ ಇಲಾಖೆಯಡಿ ಬರುವ ಸಂಸ್ಥೆಯೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಒಪ್ಪದೇ ಇದ್ದಿದ್ದು ಚರ್ಚೆಗೆ ಕಾರಣವಾಗಿತ್ತು. ಈಗ ಕೊನೆಗೂ ಬಿಎಚ್‌ಇಎಲ್ ಒಪ್ಪಿದೆ.
/filters:format(webp)/newsfirstlive-kannada/media/media_files/2025/10/30/bhel-kannada-rajyosatva02-2025-10-30-14-14-42.jpg)
ಐಬಿಪಿಎಸ್ ಪರೀಕ್ಷೆಯಲ್ಲಿ ಸ್ಥಳೀಯರಿಗೆ ಆದ್ಯತೆಗೆ ಆಗ್ರಹ
ನವೆಂಬರ್ 25 ರಂದು ನಡೆಯಲಿರುವ ಗ್ರಾಮೀಣ ಬ್ಯಾಂಕುಗಳ ನೇಮಕಾತಿಯಲ್ಲಿ ಸ್ಥಳೀಯ ಭಾಷೆ ಬಲ್ಲವರಿಗೆ ಆದ್ಯತೆ ನೀಡಬೇಕು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. ಐಬಿಪಿಎಸ್ ವತಿಯಿಂದ ನವೆಂಬರ್ 2025ರಲ್ಲಿ ನಡೆಸಲು ಉದ್ದೇಶಿಸಲಾಗಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಿಬ್ಬಂದಿ ನೇಮಕಾತಿ ಪರೀಕ್ಷೆಯಲ್ಲಿ ಸ್ಥಳೀಯ ಭಾಷೆಯನ್ನು ಬಲ್ಲ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತಂತೆ ಐಬಿಪಿಎಸ್ ಸಂಸ್ಥೆಯ ಅಧ್ಯಕ್ಷ ರಜನೀಶ್ ಕರ್ನಾಟಕ್, ಅವರಿಗೆ ಪತ್ರ ಬರೆದಿರುವ ಪುರುಷೋತ್ತಮ ಬಿಳಿಮಲೆ, ಇತ್ತೀಚೆಗೆ ಗ್ರಾಮೀಣ ಬ್ಯಾಂಕುಗಳಲ್ಲಿ ಪ್ರಾದೇಶಿಕ ಭಾಷೆಯನ್ನು ಬಲ್ಲದ ಅಭ್ಯರ್ಥಿಗಳ ನೇಮಕಾತಿ ಹೆಚ್ಚಾಗುತ್ತಿದ್ದು, ಇದು ಇಡೀ ಗ್ರಾಮೀಣ ಬ್ಯಾಂಕುಗಳ ಅಸ್ತಿತ್ವದ ಪರಿಕಲ್ಪನೆಯನ್ನೇ ಬುಡಮೇಲು ಮಾಡಿದೆ. ಇಂತಹ ಬ್ಯಾಂಕುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸ್ಥಳೀಯ ಸಂಸ್ಕೃತಿ ಹಾಗೂ ಅಲ್ಲಿನ ಪರಿಸ್ಥಿತಿಗಳನ್ನು ಅರಿತಿರುವುದು ಅತ್ಯವಶ್ಯಕವಾಗಿದ್ದು, ಅದು ಗ್ರಾಮೀಣ ಬ್ಯಾಂಕುಗಳ ದಕ್ಷತೆಯನ್ನು ಹೆಚ್ಚಿಸಿ ಅವುಗಳ ಅಸ್ತಿತ್ವವನ್ನು ಅರ್ಥಪೂರ್ಣವಾಗಿಸುತ್ತವೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us