/newsfirstlive-kannada/media/media_files/2025/09/27/big-boss-set-reveal02-2025-09-27-14-04-29.jpg)
ಬಿಗ್ ಬಾಸ್ ಹೌಸ್ ಮೇಕಿಂಗ್ ವಿಡಿಯೋ ಬಿಡುಗಡೆ
ನಾಳೆಯಿಂದ( ಸೆಪ್ಟೆಂಬರ್ 28) ಬಿಗ್ ಬಾಸ್ ಷೋ ಆರಂಭವಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಈಗಾಗಲೇ ಕರ್ನಾಟಕದಲ್ಲಿ ಮನೆ ಮಾತಾಗಿದೆ. ಈಗ 12ನೇ ಸೀಸನ್ ಷೋನಲ್ಲಿ ಯಾರು ಸ್ಪರ್ಧಿಗಳಾಗುತ್ತಾರೆ ಎಂಬ ಕುತೂಹಲ ಇದೆ. ಇನ್ನೂ ಬಿಗ್ ಬಾಸ್ ಅನ್ನು ಹೇಗೆ ನಿರ್ಮಿಸಲಾಗಿದೆ ಅನ್ನೋ ಮೇಕಿಂಗ್ ವಿಡಿಯೋ ಕೂಡ ಈಗ ಬಿಡುಗಡೆಯಾಗಿದೆ.
ಬೆಂಗಳೂರು ಹೊರ ವಲಯದಲ್ಲಿ ಬಿಗ್ ಬಾಸ್ ಷೋಗೆ ಸೆಟ್ ಹಾಕಲಾಗಿದೆ. ಮೈಸೂರು ರಸ್ತೆಯ ಬಳಿ ಬಿಗ್ ಬಾಸ್ ಗೆ ಈ ವರ್ಷವೂ ಸೆಟ್ ಹಾಕಲಾಗಿದೆ. ಬಿಗ್ ಬಾಸ್ ಅನ್ನು ಹೇಗೆ ನಿರ್ಮಿಸಲಾಗಿದೆ ಅನ್ನೋ ಮೇಕಿಂಗ್ ವಿಡಿಯೋವನ್ನು ಕಲರ್ಸ್ ಕನ್ನಡ ಚಾನಲ್ ಈಗ ಬಿಡುಗಡೆ ಮಾಡಿದೆ.
ಸಂಪೂರ್ಣ ಹೊಸದಾಗಿ ಈ ವರ್ಷದ ಅರಮನೆಯ ಥೀಮ್ ಗೆ ತಕ್ಕಂತೆ ಬಿಗ್ ಬಾಸ್ ಅನ್ನು ನಿರ್ಮಾಣ ಮಾಡಲಾಗಿದೆ. ಪ್ಯಾಬ್ರಿಕೇಟರ್ ಗಳು, ಕಾರ್ಪೆಂಟರ್, ಪ್ಲೈವುಡ್ ಕೆಲಸಗಾರರು, ಸೆಟ್ ಡಿಸೈನರ್ ಗಳು ಸೇರಿದಂತೆ ಬೇರೆ ಬೇರೆ ಕೆಲಸಗಾರರು ತಿಂಗಳುಗಟ್ಟಲೇ ಕೆಲಸ ಮಾಡಿ ಬಿಗ್ ಬಾಸ್ ಸೆಟ್ ನಿರ್ಮಿಸಿದ್ದಾರೆ. ಬಳಿಕ ಬಿಗ್ ಬಾಸ್ ಹೌಸ್ ಗೆ ಬಣ್ಣ ಬಳಿದು ಕಲರ್ ಕಲರ್ ಆಗಿ ಮಿಂಚುವಂತೆ ಮಾಡಿದ್ದಾರೆ.
ಇದೆಲ್ಲದರಿಂದ ಈಗ ಬಿಗ್ ಬಾಸ್ ಎಲ್ಲರ ಕೈ ಬೀಸಿ ಕರೆಯುತ್ತಿದೆ. ಬಿಗ್ ಬಾಸ್ ಗೆ ಈ ಭಾರಿ ಒಂದೊಳ್ಳೆ ಲುಕ್ ಸಿಕ್ಕಿದೆ. ಮೈಸೂರು ಅರಮನೆಯನ್ನು ಥೀಮ್‌ಗೆ ಬಳಸಿಕೊಳ್ಳಲಾಗಿದೆ. ಮೈಸೂರು ಅರಮನೆಯಲ್ಲಿರುವ ಕೆಂಪು ಗೋಪುರಗಳ ಮಾದರಿಯಲ್ಲೇ ಬಿಗ್ ಬಾಸ್ ಹೌಸ್‌ನ ಸೆಟ್‌ನಲ್ಲೂ ಅರಮನೆಯ ಮೇಲೆ ಕೆಂಪು ಗೋಪುರಗಳನ್ನು ನಿರ್ಮಿಸಲಾಗಿದೆ.
ಜೊತೆಗೆ ಟಿಪ್ಪು ಸುಲ್ತಾನ್ , ಹುಲಿಯನ್ನು ಬೇಟೆಯಾಡುವ ಚಿತ್ರಣವೂ ಬಿಗ್ ಬಾಸ್ ಹೌಸ್ ನಲ್ಲಿದೆ. ಹಂಪಿಯ ಕಲ್ಲಿನ ರಥದ ಚಿತ್ರಣವೂ ಬಿಗ್ ಬಾಸ್ ಹೌಸ್ ನಲ್ಲಿದೆ.
ಬಿಗ್ ಬಾಸ್ ಹೌಸ್‌ನ ಮೇಕಿಂಗ್ ವಿಡಿಯೋ ಇಲ್ಲಿದೆ ನೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.