/newsfirstlive-kannada/media/media_files/2025/11/11/bihar-2025-11-11-19-03-50.jpg)
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಮತದಾನ ಮುಗಿದಿದೆ. ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಗೆಲುವು ಯಾರಿಗೆ? ಅನ್ನೋ ಚರ್ಚೆ ಜೋರಾಗಿದೆ. ಇದರ ಮಧ್ಯೆಯೇ ದೈನಿಕ್​ ಬಾಸ್ಕರ್​ ಎಕ್ಸಿಟ್​ ಪೋಲ್​ ಹೊರಬಿದ್ದಿದ್ದು, ಈ ಬಾರಿ ಕೂಡ ಎನ್​ಡಿಎ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ.
ರಾಜ್ಯದ 243 ಸ್ಥಾನಗಳಲ್ಲಿ ಎನ್​ಡಿಎ ಮೈತ್ರಿಕೂಟ 131 ಸ್ಥಾನಗಳಲ್ಲಿ ಗೆಲವು ಸಾಧಿಸಲಿದೆ. ಹಾಗೆಯೇ ಆರ್​​ಜೆಡಿ ನೇತೃತ್ವದ ಮೈತ್ರಿಕೂಟ 112 ಸ್ಥಾನದಲ್ಲಿ ಗೆಲವು ಸಾಧಿಸಲಿದೆ ಎಂದು ದೈನಿಕ್​ ಬಾಸ್ಕರ್ ಸಮೀಕ್ಷೆ ಹೇಳುತ್ತಿದೆ.
ದೈನಿಕ್​ ಬಾಸ್ಕರ್ ಸಮೀಕ್ಷೆ ಹೇಗಿದೆ?
ಇನ್ನೂ ಸಮೀಕ್ಷೆ ಪ್ರಕಾರ ಎನ್​ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 80 ಸ್ಥಾನಗಳು, ಜೆಡಿಯು 45 ಸ್ಥಾನಗಳು, ಹಿಂದುಸ್ತಾನಿ ಅವಾಮ್ ಮೋರ್ಚಾ 4 ಸ್ಥಾನಗಳು ಹಾಗೂ ಇಂಡಿಪೆಂಡೇಟ್​ ಕ್ಯಾಂಡಿಡೇಟ್ಸ್​​ 2 ಸ್ಥಾನಗಳು ಗೆಲ್ಲುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಆರ್​​ಜೆಡಿ ಮೈತ್ರಿಕೂಟ ಒಟ್ಟು 112 ಸ್ಥಾನ ಗೆಲ್ಲಲ್ಲಿದ್ದು, ಅದ್ರಲ್ಲಿ RJD 77 ಸ್ಥಾನಗಳು, ಕಾಂಗ್ರೆಸ್​​ 19 ಸ್ಥಾನಗಳು, ಎಡಪಕ್ಷಗಳು 16 ಸ್ಥಾನಗಳು ಗೆಲ್ಲೋ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸದ್ಯ ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹಾಗೂ ಜೆಡಿಯು ತಲಾ 101ರಲ್ಲಿ ಸ್ಪರ್ಧೆ ಮಾಡಿವೆ. ಲೋಕ ಜನಶಕ್ತಿ ಪಾರ್ಟಿ 29, ಹಿಂದೂಸ್ತಾನಿ ಅವಾಮ್ ಮೋರ್ಚಾ 6, ರಾಷ್ಟ್ರೀಯ ಲೋಕ ಮೋರ್ಚಾ 6 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
RJD 143 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್ 61 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎಡಪಕ್ಷಗಳು ಒಟ್ಟಾಗಿ 25 ಸ್ಥಾನಗಳಲ್ಲಿ ಸ್ಪರ್ಧಿಸಿವೆ. ಹಾಗೆಯೇ ವಿಕಾಸಶೀಲ್ ಇನ್ಸಾನ್ ಪಾರ್ಟಿ 7 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದು, ಎಲ್ಲಾ ಪಕ್ಷಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us