ಮುಂಬೈ ಪಾಲಿಕೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆಗೆ ಜಯ.. ಠಾಕ್ರೆಗೆ ಭಾರೀ ಮುಖಭಂಗ

ಬೃಹತ್ ಮುಂಬೈ ಮಹಾನಗರ ಪಾಲಿಕೆ.. ದೇಶದ ಅತಿದೊಡ್ಡ ಮಹಾನಗರ ಪಾಲಿಕೆ.. ಏಷ್ಯಾದ ಅತೀ ಶ್ರೀಮಂತ ಕಾರ್ಪೊರೇಷನ್. ಇಂಥಹ ಕಾರ್ಪೊರೇಷನ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ ಬಣ ಕಮಾಲ್ ಮಾಡಿದೆ.

author-image
Ganesh Nachikethu
ದೇವೇಂದ್ರ ಫಡ್ನವಿಸ್ ರಿಟರ್ನ್.. ಮಹಾರಾಷ್ಟ್ರ ಸಿಎಂ ಆಯ್ಕೆ ಬಿಕ್ಕಟ್ಟು ಬಗೆಹರಿದಿದ್ದು ಹೇಗೆ?
Advertisment

ಮುಂಬೈನ ಲೋಕಲ್ ದಂಗಲ್‌ನಲ್ಲಿ ಮಹಾಯುತಿ ಪಾರುಪತ್ಯ ಮೆರೆದಿದೆ. ಠಾಕ್ರೆಯ ಭದ್ರಕೋಟೆಯನ್ನ ಬಿಜೆಪಿ-ಶಿಂಧೆ ಶಿವಸೇನೆ ಬಣ ಚಿಂದಿ ಉಡಾಯಿಸಿದೆ. ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟಕ್ಕೆ ಭರ್ಜರಿ ಗೆಲುವಾಗಿದೆ. ಲೋಕಲ್‌ ದಂಗಲ್‌ನಲ್ಲಿ ಇದೇ ಮೊದಲ ಬಾರಿಗೆ ಕಮಲ ಪಡೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನವಿ ಮುಂಬೈನಲ್ಲಿ ಠಾಕ್ರೆ ಶಿವಸೇನೆ, ಶರದ್ ಪವಾರ್‌ರ ಎನ್‌ಸಿಪಿ ಹೇಳ ಹೆಸರಿಲ್ಲದಂತಾಗಿದೆ. ಮುಂಬೈನಲ್ಲಿ ಕಾಂಗ್ರೆಸ್​ಗಂತೂ ತೀವ್ರ ಮುಖಭಂಗವಾಗಿದೆ.

ಬೃಹತ್ ಮುಂಬೈ ಮಹಾನಗರ ಪಾಲಿಕೆ.. ದೇಶದ ಅತಿದೊಡ್ಡ ಮಹಾನಗರ ಪಾಲಿಕೆ.. ಏಷ್ಯಾದ ಅತೀ ಶ್ರೀಮಂತ ಕಾರ್ಪೊರೇಷನ್. ಇಂಥಹ ಕಾರ್ಪೊರೇಷನ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿಂಧೆ ಶಿವಸೇನೆ ಬಣ ಕಮಾಲ್ ಮಾಡಿದೆ. ಮುಂಬೈ ಪಾಲಿಕೆಯಲ್ಲಿ ಮಹಾಯುತಿ ಅತಿದೊಡ್ಡ ಗೆಲುವು ಸಾಧಿಸಿದೆ. ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಕಾಲದಿಂದಲೂ ಹಿಡಿತದಲ್ಲಿದ್ದ ಮುಂಬೈ ಈಗ ಕೈತಪ್ಪಿದೆ.

ಬಾಳಾ ಠಾಕ್ರೆ ಭದ್ರಕೋಟೆಯನ್ನ ಭೇದಿಸಿದ ‘ಮಹಾಯುತಿ’!

ನವಿ ಮುಂಬೈ ಮತ್ತು ಥಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾವಿಕಾಸ್ ಆಘಾಡಿಗೆ ಮುಖಭಂಗವಾಗಿದೆ. ನವಿಮುಂಬೈನಲ್ಲಿ ಕಾಂಗ್ರೆಸ್, ಶಿವಸೇನೆಯ ಠಾಕ್ರೆ ಬಣಕ್ಕೆ ಹೀನಾಯ ಸೋಲಾಗಿದ್ದು, ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದೆ. ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಾಗಿ ಒಂದಾಗಿದ್ದ ಉದ್ದವ್ ಠಾಕ್ರೆ ಮತ್ತು ರಾಜ್ ಠಾಕ್ರೆಗೂ ನಿರಾಸೆ ಎದುರಾಗಿದೆ. ಠಾಕ್ರೆ ಭದ್ರಕೋಟೆಯನ್ನ ಭೇದಿಸಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯ ಠಾಕ್ರೆ ಬಣ ಸಮಾಧಾನಕಾರಿ ಸಾಧನೆಯನ್ನು ಮಾಡಿದ್ದರೂ, ನವಿ ಮುಂಬೈ ಮತ್ತು ಥಾಣೆಯಲ್ಲಿ ಉದ್ದವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಸಹೋದರರ ಪಾರ್ಟಿ ಹೇಳಹೆಸರಿಲ್ಲದಂತೇ ಧೂಳೀಪಟವಾಗಿದೆ.

ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ ಒಟ್ಟು 2,869 ವಾರ್ಡ್‌ಗಳಲ್ಲಿ BJP 1,304 ವಾರ್ಡ್‌ಗಳನ್ನ ಗೆದ್ದು ಬೀಗಿದೆ. ಬಿಜೆಪಿಯ ದೋಸ್ತಿ ಶಿಂಧೆ ಶಿವಸೇನೆ 363 ಸ್ಥಾನಗಳನ್ನ ಪಡೆದಿದೆ. ಇನ್ನು ಕಾಂಗ್ರೆಸ್ ಪಾಳಯ 278 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದೆ. ಠಾಕ್ರೆ ಶಿವಸೇನೆ ಮತ್ತು ರಾಜ್ ಠಾಕ್ರೆ ಪಕ್ಷ 151 ವಾರ್ಡ್‌ಗಳನ್ನಷ್ಟೇ ಗೆಲ್ಲುವಲ್ಲಿ ಸಫಲವಾಗಿವೆ. ಇನ್ನು, NCP 127 ವಾರ್ಡ್‌, AIMIM 77 ವಾರ್ಡ್‌, ಇತರೆ 278 ಕ್ಷೇತ್ರಗಳನ್ನ ಗೆದ್ದು ಬೀಗಿದ್ದಾರೆ.ಒಟ್ಟು 29 ಪಾಲಿಕೆಗಳಲ್ಲಿ ಮಹಾಯುತಿ ಮೈತ್ರಿ ಪಾರುಪತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

BJP Congress
Advertisment