Advertisment

ಭಾರತೀಯ ಷೇರುಪೇಟೆಯಲ್ಲಿ ಬ್ಲಡ್ ಬಾತ್- ಎರಡೇ ದಿನದಲ್ಲಿ 31 ಲಕ್ಷ ಕೋಟಿ ರೂ. ನಷ್ಟ!

ಇರಾನ್- ಇಸ್ರೇಲ್ ಯುದ್ಧದಿಂದಾಗಿ ಭಾರತೀಯ ಷೇರುಪೇಟೆಯಲ್ಲಿ ಭಾರಿ ಕುಸಿತವಾಗಿದೆ. ಕಚ್ಚಾತೈಲದ ಬೆಲೆ ಏರಿಕೆಯಿಂದ ಭಾರತದ ಆರ್ಥಿಕತೆಯ ಮೇಲೆ ನೆಗೆಟಿವ್ ಇಂಫ್ಯಾಕ್ಟ್ ಆಗುತ್ತೆ ಎಂಬ ಕಾರಣದಿಂದ ಷೇರು ಮಾರಾಟಕ್ಕೆ ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಎರಡೇ ದಿನದಲ್ಲಿ 31 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿದೆ.

author-image
Chandramohan
indian stock market crash
Advertisment

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಭಾರಿ ಬ್ಲಡ್ ಬಾತ್ ಆಗಿದೆ. ಅಲ್ಲಿ ಯುದ್ಧ ನಡೆದರೇ, ಇಲ್ಲಿ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತವಾಗುತ್ತೆ. ಇವೆಲ್ಲವೂ ಒಂದಕ್ಕೊಂದು ಅಂತರ್ ಸಂಬಂಧವನ್ನು ಹೊಂದಿವೆ. ಗಲ್ಪ್ ರಾಷ್ಟ್ರಗಳಿಂದ ಭಾರತಕ್ಕೆ ಪೂರೈಕೆಯಾಗುತ್ತಿದ್ದ ಕಚ್ಚಾತೈಲದ ಸರಬರಾಜುನಲ್ಲಿ ವ್ಯತ್ಯಯವಾಗಿದೆ. ಜೊತೆಗೆ ಈಗ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 115 ಡಾಲರ್ ವರೆಗೂ ಏರಿಕೆಯಾಗಿದೆ. ಕಚ್ಚಾತೈಲದ ಬೆಲೆ ಯುದ್ಧ ಶುರುವಾದ ಬಳಿಕ ಇಲ್ಲಿಯವರೆಗೂ ಶೇ.25 ರಷ್ಟು ಏರಿಕೆಯಾಗಿದೆ. 
ಇದರಿಂದಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಈಗ ಷೇರುಗಳ ಮಾರಾಟ ಒತ್ತಡ ಕಂಡು ಬಂದಿದೆ. ಹೂಡಿಕೆದಾರರು  ಷೇರು ಮಾರಾಟಕ್ಕೆ ಮುಗಿ ಬಿದ್ದಿದ್ದರಿಂದ ನಿರಂತರವಾಗಿ ಭಾರತದ ಷೇರು ಮಾರುಕಟ್ಟೆ ಕುಸಿತವಾಗುತ್ತಿದೆ. ಫೆಬ್ರವರಿ 28 ರಂದು ಯುದ್ಧ ಶುರುವಾದ ದಿನದಿಂದ ಇಲ್ಲಿಯವರೆಗೂ ಭಾರತೀಯ ಹೂಡಿಕೆದಾರರು ಬರೋಬ್ಬರಿ 31 ಲಕ್ಷ ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ. 
ಕಚ್ಚಾತೈಲದ  ಬೆಲೆ ಏರಿಕೆಯಿಂದ ಭಾರತದ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತೆ ಎಂಬ ಭಯದಿಂದ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡಲು ಮುಗಿಬಿದ್ದಿದ್ದಾರೆ. ಭಾರತವು ವಿಶ್ವದಲ್ಲಿ  ಅತಿ ಹೆಚ್ಚು ತೈಲ ಅಮದು ಮಾಡಿಕೊಳ್ಳುವ 3ನೇ ಅತಿ ದೊಡ್ಡ ರಾಷ್ಟ್ರ. 
ಇಂದು ( ಮಾರ್ಚ್ 9) ಭಾರತೀಯ ಷೇರುಪೇಟೆಯ ಕುಸಿತದಿಂದ ಹೂಡಿಕೆದಾರರು 12.78 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿ ಕಂಗಾಲಾಗಿದ್ದಾರೆ. ಇಂದು ಕೂಡ ಷೇರುಪೇಟೆ 2,444 ಪಾಯಿಂಟ್ ವರೆಗೂ ಕುಸಿತ ಕಂಡಿದೆ.  ನಿಫ್ಟಿ 729 ಪಾಯಿಂಟ್ ವರೆಗೂ ಕುಸಿತ ಕಂಡಿದೆ. 
ಭಾರತೀಯ ಷೇರು ಪೇಟೆ ಕುಸಿತಕ್ಕೆ ಮೂರು ಮುಖ್ಯ ಕಾರಣಗಳಿವೆ.
1- ಮಧ್ಯಪ್ರಾಚ್ಯದ ಯುದ್ಧ, ಸಂಘರ್ಷದ ಕಾರಣದಿಂದ ಷೇರು ಪೇಟೆ ಕುಸಿಯುತ್ತಿದೆ
2- ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 115 ಡಾಲರ್ ಗೆ ಏರಿಕೆಯಾಗಿದೆ
3- ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಬಂಡವಾಳ ಹಿಂತೆಗೆದುಕೊಂಡಿದ್ದಾರೆ. ಇದು ದೇಶೀಯ ಹೂಡಿಕೆದಾರರ ಮೇಲೆ ನೆಗೆಟಿವ್ ಪರಿಣಾಮ ಬೀರಿದೆ.

 ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಎಲ್ಲ ಕಂಪನಿಗಳ ಮಾರುಕಟ್ಟೆ ಬಂಡವಾಳದಲ್ಲಿ ಕುಸಿತವಾಗಿದೆ. ಜಾಗತಿಕ ಮಟ್ಟದ ಯುದ್ಧದ ಕಾರಣದಿಂದಾಗಿ ಷೇರುಪೇಟೆಯಲ್ಲಿ ನೋಂದಣಿಯಾಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವೇ ಕುಸಿದು  ಹೋಗಿದೆ

Advertisment

 ಭಾರತೀಯ ಷೇರುಪೇಟೆ ಮಾರುಕಟ್ಚೆ ಬಂಡವಾಳ
ಫೆಬ್ರವರಿ 28 ರಂದು ಒಟ್ಟು ಮಾರುಕಟ್ಟೆ ಬಂಡವಾಳ-- 463 ಲಕ್ಷ ಕೋಟಿ ರೂಪಾಯಿ
ಮಾರ್ಚ್ 6 ರಂದು 444 ಲಕ್ಷ ಕೋಟಿ ರೂ.ಗೆ ಕುಸಿದ ಒಟ್ಟು ಮಾರುಕಟ್ಟೆ ಬಂಡವಾಳ-19 ಲಕ್ಷ ಕೋಟಿ ರೂ. ನಷ್ಟ
ಮಾರ್ಚ್ 9 ರಂದು 432 ಲಕ್ಷ ಕೋಟಿ ರೂ. ಕುಸಿತ ಒಟ್ಟು ಮಾರುಕಟ್ಟೆ ಬಂಡವಾಳ-12 ಲಕ್ಷ ಕೋಟಿ ರೂ.ನಷ್ಟ

 ಹೀಗೆ ಎರಡು ದಿನದ ವಹಿವಾಟಿನಲ್ಲಿ ಹೂಡಿಕೆದಾರರು 31 ಲಕ್ಷ ಕೋಟಿ ರೂಪಾಯಿಯನ್ನು ಕಳೆದುಕೊಂಡು ಭಾರಿ ನಷ್ಚ ಅನುಭವಿಸಿದ್ದಾರೆ. ಯುದ್ಧ ನಿಂತರೇ ಸಾಕು ಎಂದು ಹೂಡಿಕೆದಾರರು ಪ್ರಾರ್ಥನೆ ಮಾಡುತ್ತಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

middle east war effect on share market Share market down SHARE MARKET TRADING
Advertisment
Advertisment
Advertisment