ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿರಿಂದ ಬಾಂದ್ರಾದ ಬಾಸ್ಟಿಯನ್ ರೆಸ್ಟೊರೆಂಟ್ ಮುಚ್ಚಲು ನಿರ್ಧಾರ, ಏನಾಯಿತು?

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಮಾಲೀಕತ್ವದ ಮುಂಬೈನ ಬಾಂದ್ರಾದಲ್ಲಿರುವ ಐಕಾನಿಕ್ ಬಾಸ್ಟಿಯನ್ ರೆಸ್ಟೊರೆಂಟ್ ಮುಚ್ಚಲು ನಿರ್ಧರಿಸಿದ್ದಾರೆ. ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರಾ ವಿರುದ್ಧ ಹಣಕಾಸು ವಂಚನೆಯ ಎಫ್‌ಐಆರ್ ದಾಖಲಾದ ಬಳಿಕ ರೆಸ್ಟೊರೆಂಟ್ ಮುಚ್ಚಲು ನಿರ್ಧರಿಸಿದ್ದಾರೆ.

author-image
Chandramohan
shilpa shetty restaurant closes door

ನಟಿ ಶಿಲ್ಪಾ ಶೆಟ್ಟಿರಿಂದ ಬಾಸ್ಟಿಯನ್ ರೆಸ್ಟೊರೆಂಟ್ ಮುಚ್ಚಲು ನಿರ್ಧಾರ

Advertisment
  • ನಟಿ ಶಿಲ್ಪಾ ಶೆಟ್ಟಿರಿಂದ ಬಾಸ್ಟಿಯನ್ ರೆಸ್ಟೊರೆಂಟ್ ಮುಚ್ಚಲು ನಿರ್ಧಾರ
  • ಇನ್ಸ್ ಟಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಮುಚ್ಚುವ ನಿರ್ಧಾರ ತಿಳಿಸಿದ ಶಿಲ್ಪಾ ಶೆಟ್ಟಿ
  • ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿಗೆ ಆರ್ಥಿಕ ಸಂಕಷ್ಟವೇ?

ಶಿಲ್ಪಾ ಶೆಟ್ಟಿ ಮತ್ತು ಅವರ ಕುಟುಂಬವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಂತೆ ಕಾಣುತ್ತಿದೆ. 
ಈ ಹಿಂದೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಅಶ್ಲೀಲ ಸಿನಿಮಾ ತಯಾರಿಸಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ ಆರೋಪ ಕೇಳಿ  ಬಂದಿತ್ತು. 
ಬಾಲಿವುಡ್ ನಟಿ ಮತ್ತು ಅವರ ಉದ್ಯಮಿ ಪತಿ ರಾಜ್ ಕುಂದ್ರಾ ಅವರ ಮೇಲೆ ವಂಚನೆ ಆರೋಪದ ಕೇಸ್ ದಾಖಲಾದ ಬಳಿಕ ಈಗ ಶಿಲ್ಪಾಶೆಟ್ಟಿ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಐಕಾನಿಕ್ ರೆಸ್ಟೊರೆಂಟ್ ಗಳಲ್ಲಿ ಒಂದಾದ ಬಾಸ್ಟಿಯನ್ ಅನ್ನು ಮುಚ್ಚಲು ನಿರ್ಧರಿಸಿದ್ದಾರೆ. ಈ ಬಗ್ಗೆ ಇನ್ಸ್ ಟಗ್ರಾಮ್ ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದಾರೆ.  ಸುದೀರ್ಘ ಟಿಪ್ಪಣಿಯನ್ನು ಬರೆದಿದ್ದಾರೆ.

"ಈ ಗುರುವಾರ ಮುಂಬೈನ ಅತ್ಯಂತ ಐಕಾನಿಕ್ ತಾಣಗಳಲ್ಲಿ ಒಂದಾದ ಬಾಸ್ಟಿಯನ್ ಬಾಂದ್ರಾಕ್ಕೆ ನಾವು ವಿದಾಯ ಹೇಳುತ್ತಿದ್ದೇವೆ. ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ನಮಗೆ ಲೆಕ್ಕವಿಲ್ಲದಷ್ಟು ನೆನಪುಗಳು, ಮರೆಯಲಾಗದ ರಾತ್ರಿಗಳು ಮತ್ತು ನಗರದ ರಾತ್ರಿಜೀವನವನ್ನು ರೂಪಿಸಿದ ಕ್ಷಣಗಳನ್ನು ನೀಡಿದ ಸ್ಥಳವು ಈಗ ತನ್ನ ಅಂತಿಮ  ಕ್ಷಣದಲ್ಲಿದೆ" ಎಂದು ಅವರು ಬರೆದಿದ್ದಾರೆ.

"ಈ ದಂತಕಥೆಯ  ಸ್ಥಳವನ್ನು ಗೌರವಿಸಲು, ನಾವು ನಮ್ಮ ಹತ್ತಿರದ ಜನರಿಗಾಗಿ ಒಂದು ವಿಶೇಷ ಸಂಜೆಯನ್ನು ಆಯೋಜಿಸುತ್ತಿದ್ದೇವೆ .  ನಾಸ್ಟಾಲ್ಜಿಯಾ, ಶಕ್ತಿ ಮತ್ತು ಮ್ಯಾಜಿಕ್‌ನಿಂದ ತುಂಬಿದ ರಾತ್ರಿ, ಬಾಸ್ಟಿಯನ್ ಕೊನೆಯ ಬಾರಿಗೆ ನಿಂತಿದ್ದನ್ನೆಲ್ಲ ಆಚರಿಸುತ್ತೇವೆ. ನಾವು ಬಾಸ್ಟಿಯನ್ ಬಾಂದ್ರಾಗೆ ವಿದಾಯ ಹೇಳುವಾಗ, ನಮ್ಮ ಗುರುವಾರ ರಾತ್ರಿಯ ಆಚರಣೆಯ ಆರ್ಕೇನ್ ಅಫೇರ್ ಮುಂದಿನ ವಾರ ಬಾಸ್ಟಿಯನ್ ಟೇರೇಸ್ ನಲ್ಲಿ  ಮುಂದುವರಿಯುತ್ತದೆ, ಹೊಚ್ಚ ಹೊಸ ಅನುಭವಗಳೊಂದಿಗೆ ಹೊಚ್ಚ ಹೊಸ ಅಧ್ಯಾಯದಲ್ಲಿ ಪರಂಪರೆಯನ್ನು ಮುಂದಕ್ಕೆ ಸಾಗಿಸುತ್ತದೆ," ಎಂದು ನಟಿ ಶಿಲ್ಪಾ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. 
ಬಾಂದ್ರಾದ ಈ ಐಕಾನಿಕ್ ರೆಸ್ಟೊರೆಂಟ್ ಬಾಸ್ಟಿಯನ್ ಅನ್ನು ಶಿಲ್ಪಾ ಶೆಟ್ಟಿ ಹಾಗೂ ರಂಜಿತಾ ಬಿಂದ್ರಾ ಜಂಟಿ ಮಾಲೀಕತ್ವ ಹೊಂದಿದ್ದರು. 



ಇತ್ತೀಚೆಗೆ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ವಿರುದ್ಧ ದೀಪಕ್ ಕೊತ್ತಾರಿ ಎಂಬುವವರು 60 ಕೋಟಿ ರೂಪಾಯಿ ಹಣವನ್ನು ಲೋನ್ ಕಮ್ ಇನ್ ವೆಸ್ಟಮೆಂಟ್ ರೂಪದಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಎಕನಾಮಿಕ್ ಅಫೇನ್ಸ್ ವಿಂಗ್ ರಾಜ್ ಕುಂದ್ರಾ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆದರೇ, ಈ ಆರೋಪಗಳೆಲ್ಲಾ ಆಧಾರ ರಹಿತ ಎಂದು ರಾಜ್ ಕುಂದ್ರಾ ಪರ ವಕೀಲರು ಹೇಳಿದ್ದರು. ಇದೊಂದು ಸಿವಿಲ್ ಕೇಸ್ ಎಂದು ವಕೀಲರು ಹೇಳಿದ್ದರು. 

shilpa shetty closes Bastian restaurant
Advertisment