/newsfirstlive-kannada/media/media_files/2025/10/03/tirupathi-bomb-threat02-2025-10-03-18-20-43.jpg)
ತಿರುಪತಿಗೆ ಬಾಂಬ್ ಬೆದರಿಕೆಯ ಇ ಮೇಲ್
ಆಂಧ್ರದ ತಿರುಪತಿಗೆ ಬಾಂಬ್ ಬೆದರಿಕೆಯ ಇ ಮೇಲ್ ಗಳು ಬಂದಿವೆ. ಇದರಿಂದಾಗಿ ತಿಮ್ಮಪ್ಪನ ಭಕ್ತರ ನೆಚ್ಚಿನ ತಾಣ ತಿರುಪತಿ, ತಿರುಮಲದಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ. ಎಲ್‌ಟಿಟಿಇ ಮಾಜಿ ಉಗ್ರರು, ಐಎಸ್‌ಐ ಉಗ್ರರ ಹೆಸರಿನಲ್ಲಿ ತಿರುಮಲದಲ್ಲಿ ಆರ್‌ಡಿಎಕ್ಸ್ ಸ್ಪೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ತಿರುಪತಿಯ ನಾಲ್ಕು ಸ್ಥಳಗಳಲ್ಲಿ ಸ್ಪೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ತಿರುಮಲ, ತಿರುಪತಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜನರ ಪ್ರಾಣ ರಕ್ಷಣೆಗಾಗಿ ಬಾಂಬ್ ನಿಷ್ಕ್ರಿಯದಳಗಳನ್ನು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಸಾರ್ವಜನಿಕ ಜನನಿಬಿಡ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸ್ಪೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ.
ಪೊಲೀಸರು ರಾಜ್ಯ ಸಾರಿಗೆ ಬಸ್ ನಿಲ್ದಾಣ, ಶ್ರೀನಿವಾಸಂ, ವಿಷ್ಣು ನಿವಾಸಂ, ಕಪಿಲತೀರ್ಥಂ, ಗೋವಿಂದರಾಜುಲು ಸ್ವಾಮಿ ದೇವಾಲಯದಲ್ಲಿ ತಪಾಸಣೆ ನಡೆಸಿದ್ದಾರೆ. ಜೊತೆಗೆ ತಿರುಪತಿಯ ಜಡ್ಜ್ ನಿವಾಸದಲ್ಲೂ ತಪಾಸಣೆ ನಡೆಸಿದ್ದಾರೆ. ಕೋರ್ಟ್ ಸಮೀಪದ ವಸತಿ ಕಾಂಪ್ಲೆಕ್ಸ್, ಕೋರ್ಟ್ ಪ್ರದೇಶದಲ್ಲೂ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ತೀವ್ರ ತಪಾಸಣೆ ನಡೆಸಿದೆ.
ತಿರುಪತಿಗೆ ಪ್ರತಿನಿತ್ಯ 50 ಸಾವಿರದಿಂದ 1 ಲಕ್ಷ ಭಕ್ತಾದಿಗಳು ಭೇಟಿ ನೀಡುತ್ತಾರೆ. ತಿರುಮಲಕ್ಕೆ ಹೆಚ್ಚಿನ ಧಾರ್ಮಿಕ ಪ್ರಾಮುಖ್ಯತೆ ಇದೆ. ಹೀಗಾಗಿ ಪ್ರಮುಖ ದೇವಾಲಯಗಳಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ. ಕೃಷಿ ಕಾಲೇಜಿನ ಹೆಲಿಪ್ಯಾಡ್ ಬಳಿಯೂ ಹೆಚ್ಚಿನ ಭದ್ರತೆ ನೀಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.