/newsfirstlive-kannada/media/media_files/2025/09/06/bwssb-water-bill02-2025-09-06-13-18-48.jpg)
BWSSB ಯಿಂದ ಅಪಾರ್ಟ್ ಮೆಂಟ್, ಪಿ.ಜಿ.ಗಳ ನೀರಿನ ಶುಲ್ಕ ಇಳಿಕೆ!
ಬೆಂಗಳೂರು ಜಲಮಂಡಳಿಯು ಪಿಜಿ ಮಾಲೀಕರಿಗೆ ಹಾಗೂ ಅಪಾರ್ಟ್ ಮೆಂಟ್ ನಿವಾಸಿಗಳಿಗೆ ಗುಡ್ ನ್ಯೂಸ್ ನೀಡಿದೆ. ಅಪಾರ್ಟ್‌ಮೆಂಟ್ ಮತ್ತು ಪಿಜಿಗಳಲ್ಲಿ ನೀರಿನ ದರ ಇಳಿಕೆ ಮಾಡಲು ಬೆಂಗಳೂರು ಜಲಮಂಡಳಿ ತೀರ್ಮಾನ ಕೈಗೊಂಡಿದೆ. ಏಪ್ರಿಲ್‌ನಲ್ಲಿ ಹೆಚ್ಚಿಸಿದ್ದ ದರವನ್ನು ಬಿಡಬ್ಲ್ಯೂಎಸ್‌ಎಸ್‌ಬಿ ಈಗ ಪರಿಷ್ಕರಣೆ ಮಾಡಿ ಇಳಿಕೆ ಮಾಡಿದೆ. 2,000 ಮನೆಗಳಿಗಿಂತ ಕಡಿಮೆ ಇರುವ ವಸತಿ ಸಮುಚ್ಚಯಗಳಿಗೆ ನೀರಿನ ದರವನ್ನು ಇಳಿಕೆ ಮಾಡಿ ಬೆಂಗಳೂರು ಜಲಮಂಡಳಿ ತೀರ್ಮಾನ ಕೈಗೊಂಡಿದೆ. ಇದೇ ರೀತಿ ಪಿ.ಜಿ. ಗಳ ಸ್ವಚ್ಛತಾ ಶುಲ್ಕವನ್ನು ಶೇ.60ರಷ್ಟು ಕಡಿತ ಮಾಡಿದೆ.
200 ಫ್ಲ್ಯಾಟ್‌ಗಳಿಗಿಂತ ಕಡಿಮೆ ಇರುವ ವಸತಿ ಸಮುಚ್ಚಯಗಳಲ್ಲಿ 0-200 ಲೀಟರ್‌ವರೆಗೆ ₹25 ವಿಧಿಸಲು ತೀರ್ಮಾನಿಸಿದೆ. 200-500 ಕಿ.ಲೀ.ವರೆಗೆ ₹28 ವಿಧಿಸಲು ತೀರ್ಮಾನಿಸಿದೆ. 500-1000 ಕಿ.ಲೀ.ವರೆಗೆ ₹32 ವಿಧಿಸಲು ತೀರ್ಮಾನಿಸಿದೆ. 1000 ಕಿ.ಲೀ.ಗೂ ಮೇಲ್ಪಟ್ಟು ಬಳಕೆಗೆ ₹55 ದರ ನಿಗದಿ ಮಾಡಿದೆ. ಪಿ.ಜಿ. ಮಾಲೀಕರ ಸಂಘದ ಮನವಿ ಮೇರೆಗೆ ಸ್ವಚ್ಛತಾ ಶುಲ್ಕವನ್ನು ಶೇ.60ರಷ್ಟು ಕಡಿತ ಮಾಡಿದೆ. 20 ಕೊಠಡಿಗಳನ್ನು ಹೊಂದಿರುವ ಪಿಜಿಗಳಿಗೆ ಇಷ್ಟು ದಿನ ನಿಗದಿಪಡಿಸಿದ್ದು ₹5000 ಮಾಸಿಕ ಶುಲ್ಕ . ಈ ಶುಲ್ಕವನ್ನ ಇದೀಗ 2000 ರೂಪಾಯಿಗೆ ಇಳಿಕೆ ಮಾಡಿದೆ.
20 ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಪಿ.ಜಿ.ಗಳಿಗೆ ಇಷ್ಟು ದಿನ ಮಾಸಿಕ ಶುಲ್ಕ ₹7500 ಇತ್ತು. ಈ ಮಾಸಿಕ ಶುಲ್ಕ ₹7500 ರಿಂದ ₹ 3000 ಇಳಿಕೆ ಮಾಡಲಾಗಿದೆ. ಇನ್ನು ಗೃಹ ಬಳಕೆಯೇತರ ನೀರು ಸರಬರಾಜು ಹೊಂದಿರುವ ಹಾಸ್ಟೆಲ್‌ಗಳಿಗೆ ನಿಗದಿಪಡಿಸಿದ್ದ ₹5000 ಮಾಸಿಕ ಶುಲ್ಕವನ್ನು ₹3000 ಕಡಿತ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.